ವಿಶೇಷ ಪ್ರವಾಸ ಪ್ಯಾಕೇಜ್ ಘೋಷಿಸಿದ ಭಾರತೀಯ ರೈಲ್ವೆ
ಬೆಂಗಳೂರು, ಆಗಸ್ಟ್ : ಭಾರತೀಯ ರೈಲ್ವೆ ಕ್ಯಾಟರಿಂಗ್ ಅಂಡ್ ಟೂರಿಸಮ್ ಕಾರ್ಪೊರೇಷನ್ ಲಿಮಿಟೆಡ್ ಮುಂಬರುವ ಉತ್ಸವಗಳು ಹಾಗೂ ರಜಾದಿನಗಳಲ್ಲಿ ಭಾರತ್ ದರ್ಶನ್, ದೇಶೀಯ ಮತ್ತು ಅಂತಾರಾಷ್ಟ್ರೀಯ ಏರ್ ಪ್ಯಾಕೇಜ್ ಗಳನ್ನು ಪ್ರಕಟಿಸಿದೆ.
ಪ್ರತಿ ವರ್ಷವೂ ಭಾರತೀಯ ರೈಲ್ವೆ ಹಬ್ಬಗಳು ಹಾಗೂ ರಜಾದಿನಗಳಲ್ಲಿ ಪ್ರಯಾಣಿಕರಿಗೆ ವಿಶೇಷ ಪ್ಯಾಕೇಜ್ ಗಳನ್ನು ಘೋಷಿಸುತ್ತದೆ.
ಭಾರತ್ ದರ್ಶನ್ ಪ್ರವಾಸಿ ರೈಲು: ತ್ರಿಮೂರ್ತಿ ದರ್ಶನದ (10 ರಾತ್ರಿಗಳು, 11ದಿನಗಳು) ಸೆಪ್ಟೆಂಬರ್ 15ರಂದು ಆರಂಭವಾಗಲಿದೆ. ಪ್ರತಿ ವ್ಯಕ್ತಿಹೆ 10,820 ಶುಲ್ಕ ನಿಗದಿ ಮಾಡಲಾಗಿದೆ. , ವಸತಿ ಸೌಕರ್ಯ, ಊಟ, ದೃಶ್ಯ ವೀಕ್ಷಣೆ ಮತ್ತು ಸಾರಿಗೆ ಒಳಗೊಂಡಿದೆ.

ದೇಶೀಯ ಏರ್ ಪ್ಯಾಕೇಜ್: ಶಿರಡಿ, ನಾಸಿಕ, ಶಿನಿಷಿಗನಾಪುರಕ್ಕೆ 2 ರಾತ್ರಿ , ಮೂರು ದಿನಗಳ ವಿಮಾನ ಪ್ಯಾಕೇಜ್ ಇದೆ. ಅಮೃತ ಸರ, ಧರ್ಮಶಾಲಾ, ಕತ್ರಾ, ಶಿಮ್ಲಾ, ಮೊನಾಲಿ, ಚಂಡೀಗಢ, ಅಮೃತಸರ, ಅಂಡಮಾನ್ ಪ್ಯಾಕೇಜ್ ಗಳಿವೆ.
ಅಂತಾರಾಷ್ಟ್ರೀಯ ಏರ್ ಪ್ಯಾಕೇಜ್: ಥಾಯ್ಲೆಂಡ್, ಸಿಂಗಾಪುರ, ಮಲೇಷಿಯಾ, ಶ್ರೀಲಂಕಾ ರಾಮಾಯಣ ಯಾತರಾ ಹೀಗೆ ಮೂರು ಅಂತಾರಾಷ್ಟ್ರೀಯ ಏರ್ ಪ್ಯಾಕೇಜ್ ಗಳಿವೆ. ಹೆಚ್ಚಿನ ಮಾಹಿತಿಗಾಗಿ ಪ್ರಾದೇಶಿಕ ಕಚೇರಿ ಬೆಂಗಳೂರು 080-22960014 ಸಂಪರ್ಕಿಸಬಹುದಾಗಿದೆ.












Click it and Unblock the Notifications