ಐದು ತಿಂಗಳ ಬಳಿಕ ಅಣ್ಣಾಮಲೈ ರಾಜೀನಾಮೆ ಅಂಗೀಕಾರ
Recommended Video
ಬೆಂಗಳೂರು, ಅಕ್ಟೋಬರ್ 17: ಐಪಿಎಸ್ ಅಧಿಕಾರಿ ಅಣ್ಣಾಮಲೈ ಐದು ತಿಂಗಳ ಹಿಂದೆ ನೀಡಿದ್ದ ರಾಜೀನಾಮೆ ಇಂದು ಅಂಗೀಕಾರವಾಗಿದೆ.
ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸ್ ಎಸ್‌ಪಿ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಐಪಿಎಸ್ ಅಧಿಕಾರಿ ಅಣ್ಣಮಲೈ ಮೇ 28 ರಂದು ಕರ್ತವ್ಯಕ್ಕೆ ರಾಜೀನಾಮೆ ನೀಡಿದ್ದರು. ಆ ರಾಜೀನಾಮೆಯನ್ನು ಕೇಂದ್ರ ಗೃಹ ಇಲಾಖೆ ಇಂದು ಅಂಗೀಕಾರ ಮಾಡಿದೆ.
ಇಷ್ಟು ದಿನ ಸೇವೆಯಲ್ಲಿದ್ದರೂ ರಜೆಯಲ್ಲಿದ್ದ ಅಣ್ಣಾಮಲೈ ನಾಳೆಯಿಂದ ಪೊಲೀಸ್ ಎಸ್‌ಪಿ ಬದಲಿಗೆ ಸಾಮಾನ್ಯ ವ್ಯಕ್ತಿ ಆಗಿರಲಿದ್ದಾರೆ. ರಾಜೀನಾಮೆ ವೇಳೆ ನೀಡಿದ್ದ ಕಾರಣದಂತೆ ಅವರೂ ಸಹ ಇದನ್ನೇ ಬಯಸಿದ್ದರು.

ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಹೇಳಿದ್ದ ಅಣ್ಣಾಮಲೈ, ಕರ್ತವ್ಯದಿಂದಾಗಿ ವೈಯಕ್ತಿಕ ಬದುಕು ಕಳೆದುಕೊಳ್ಳುತ್ತಿರುವ ಭಾವ ಆವರಿಸಿದ್ದು, ವೈಯಕ್ತಿಕ ಬದುಕಿಗೆ ಹೆಚ್ಚಿನ ಆದ್ಯತೆ ನೀಡುವ ಕಾರಣ ನೀಡುವ ಕಾರಣ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಾವು ಬರೆದಿದ್ದ ಸುದೀರ್ಘ ಪತ್ರದಲ್ಲಿ ಹೇಳಿದ್ದರು.
ಅಣ್ಣಾಮಲೈ ಅವರು ಬಿಜೆಪಿ ಸೇರಲಿದ್ದಾರೆ ಎಂಬ ಗಾಳಿ ಸುದ್ದಿ ಹರಿದಾಡುತ್ತಿದೆ. ಇತ್ತೀಚೆಗೆ ಅವರು ನೀಡಿರುವ ಹೇಳಿಕೆ. ಕಾಣಿಸಿಕೊಂಡ ಕಾರ್ಯಕ್ರಮಗಳು ಈ ಬಗ್ಗೆ ಅನುಮಾನ ಮೂಡಿಸಿವೆ.












Click it and Unblock the Notifications