ಪಂಚಮಸಾಲಿಯ ಮೂರು ಪೀಠಗಳನ್ನ ಹುಟ್ಟು ಹಾಕಿದ್ದೆ ನಾನು: ಒನ್ ಇಂಡಿಯಾ ಸಂದರ್ಶನದಲ್ಲಿ ಮುರುಗೇಶ್ ನಿರಾಣಿ ಹೇಳಿದ್ದೇನು.?
ಪಂಚಮಸಾಲಿಯ ಮೂರು ಪೀಠಗಳನ್ನ ಹುಟ್ಟು ಹಾಕಿದ್ದು ನಾನೇ ಎಂದು ಒನ್ ಇಂಡಿಯಾ ಸಂದರ್ಶನದಲ್ಲಿ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ಬೆಂಗಳೂರು,ಫೆಬ್ರವರಿ11: ಮೀಸಲಾತಿ ವಿಚಾರದಲ್ಲಿ ಹೆಚ್ಚಾಗಿ ಪ್ರಯತ್ನ ಪಟ್ಟಿದ್ದು ಬಿಜೆಪಿ ಪಕ್ಷ. ನನಗೆ ಯಾವುದೇ ಸ್ವಾಮೀಜಿಗಳ ಹತ್ತಿರ ಅಸಮಾಧಾನ ಇಲ್ಲ, ಮಾತಿನಲ್ಲಿ, ವಿಚಾರದಲ್ಲಿ ಸ್ವಲ್ಪ ಭಿನಾಭಿಪ್ರಾಯ ಇದೆ ಅಷ್ಟೇ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದರು.
ಪಂಚಮಸಾಲಿಯ ಮೂರು ಪೀಠಗಳನ್ನ ಹುಟ್ಟು ಹಾಕಿದ್ದು ನಾನೇ ಎಂದು ಒನ್ ಇಂಡಿಯಾ ಸಂದರ್ಶನದಲ್ಲಿ ಸಚಿವ ಮುರುಗೇಶ್ ನಿರಾಣಿ ಹೇಳಿದರು. ಈ ವೇಳೆ ಹಲವು ವಿಚಾರಗಳ ಬಗ್ಗೆ ಮಾಹಿತಿ ಇಲ್ಲಿದೆ.
1.ಈ ಬಾರಿ ಪಕ್ಷವನ್ನ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಯಾವ ರೀತಿಯಲ್ಲಿ ಸಿದ್ದತೆಯನ್ನ ನಡೆಸಿದಿರಾ?
ಕರ್ನಾಟಕದಲ್ಲಿ ಮತ್ತು ದೇಶದಲ್ಲಿರುವ ಬಿಜೆಪಿಗೆ ತನ್ನದೇ ಆದ ಅಸ್ತಿತ್ವ ಇದೆ. ನಮ್ಮ ಸಂಘಟನೆಯಿಂದ ನಿರಂತರವಾಗಿ ವಿವಿಧ ಮೋರ್ಚಾಗಳನ್ನ ಸಂಘಟನೆಯಲ್ಲಿ ತೊಡಗಿಸಿಕೊಂಡಿದೆವೇ. ಕೇಂದ್ರದಲ್ಲಿ ವಿರೋಧ ಪಕ್ಷದ ಸ್ಥಾನವನ್ನು ಸಹ ಕಾಂಗ್ರೆಸ್ ಉಳಿಸಿಕೊಂಡಿಲ್ಲ. ಯಡಿಯೂರಪ್ಪ, ಅನಂತ್ ಕುಮಾರ್ ಸೇರಿದಂತೆ ಸಾಕಷ್ಟು ಜಪನ ನಯಕರು ರಾಜ್ಯವನ್ನ ಸುತ್ತಿ ಬಿಜೆಪಿಗೆ ನೆಲೆಯನ್ನ ತಂದು ಕೊಟ್ಟಿದ್ದಾರೆ. ಆ ಹಿನ್ನೆಲೆಯಲ್ಲಿ 2018 ರಿಂದ ಇಲ್ಲಿಯವರೆಗೂ ಅಧಿಕಾರ ನಡೆಸಿದ್ದೇವೆ. ಮತ್ತ 2023 ಕ್ಕೆ ನಮ್ಮ ಸರ್ಕಾರ ರಚನೆಯಾಗಲಿದೆ. ಡಬಲ್ ಇಂಜಿನ್ ಸರ್ಕಾರ ಒಳ್ಳೆಯ ಕೆಲಸ ಮಾಡ್ತಾ ಇರುವುದರಿಂದ 2024 ರ ಲೋಕಸಭಾ ಚುನಾವಣೆಯಲ್ಲಿಯೂ ನಾವು ಅಧಿಕಾರಕ್ಕೆ ಬರುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

2. ಬಿಜೆಪಿ ಜನ ಸಂಕಲ್ಪ ಯಾತ್ರೆಗಳಿಗೆ ಜನ ಸೇರುತ್ತಿಲ್ವೇ.? ಈ ಕುರಿತು ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ.?
ಇದು ಸುಳ್ಳು ಅಪಾದನೆ, ಅವರು ಮಾಡುತ್ತಿರುವ ಯಾತ್ರೆಗಳಿಗೆ ಯಾರು ಬರ್ತಾ ಇಲ್ಲ. ಜನರ ಪ್ರೀತಿ ವಿಶ್ವಾಸ 2018 ಕ್ಕೂ ಹೆಚ್ಚು 2023 ಕ್ಕೆ ಇದೆ. ನಾವಾಗಿಯೇ ಸೋಲನ್ನ ಒಪ್ಪಿಕೊಂಡರೇ ಯಾರು ಓಟ್ ಹಾಕಲ್ಲ ಅಂತ ಈ ರೀತಿಯಾಗಿ ಸುಳ್ಳು ಅಪಾದನೆ ಮಾಡುತ್ತಿದ್ದಾರೆರ. ಕೇಂದ್ರದಲ್ಲಿ ಅಸ್ತಿತ್ವವೇ ಇಲ್ಲದ ಕಾಂಗ್ರೆಸ್ ಪಾರ್ಟಿಗೆ ಇಲ್ಲಿ ಅಸ್ತಿತ್ವ ಇಲ್ಲದಂತೆ ನಮ್ಮ ಜನ ಮಾಡುತ್ತಾರೆ. ಮುಂದಿನ ದಿನದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.
3. ಮುಂದಿನ ವಿಧಾನಸಭಾ ಚುನಾವಣಾ ಫಲಿತಾಂಶ ಅತಂತ್ರವಾದ್ರೆ ಈ ಬಾರೀ ಜೆಡಿಎಸ್ ಜೊತೆಗೆ ಮೈತ್ರಿ ಅನಿವಾರ್ಯವಾ.?
ಅತಂತ್ರವಾಗಲು ಸಾಧ್ಯವೇ ಇಲ್ಲ ನಮಗೆ ಬಹಳ ವಿಶ್ವಾಸ ಇದೆ. ನಮಗೆ 125 ಕ್ಕೂ ಹೆಚ್ಚು ಸೀಟ್ ಗಳನ್ನ ಗೆದ್ದು, ಕರ್ನಾಟಕದಲ್ಲಿ ಸರ್ಕಾರವನ್ನ ರಚನೆ ಮಾಡುತ್ತೇವೆ. ಹಾಗೇ ವಿಧಾನಸಭಾ ಆಗಲು ಕರ್ನಾಟಕದ ಬುದ್ದಿವಂತ ಜನರು ಬಿಡುವುದಿಲ್ಲ ಎಂದು ಹೇಳಿದರು.
4. ಬಿ ಎಸ್ ಯಡಿಯೂರಪ್ಪನವರ ನಂತರ ನಿಮ್ಮ ಪಕ್ಷದಲ್ಲಿ ಯರು ಮಾಸ್ ಲೀಡರ್ ಇದ್ದಾರೆ.?
ನಮ್ಮ ಪಕ್ಷದಲ್ಲಿ ಬಹಳಷ್ಟು ಜನ ಮಾಸ್ ಲೀಡರ್ ಗಳಿದ್ದಾರೆ. ಮುಂದಿನ ಲೀಡರ್ ಆಗಲು ಸಾಕಷ್ಟು ಜನರನ್ನ ಬೆಳೆಸುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನವ್ರು ಊಹಾಪೋಹಗಳನ್ನ ಮಾಡುತ್ತಿದ್ದರೆ. ಯಡಿಯೂರಪ್ಪನವರು ಎಂದಿಗೂ ನಮಗೆ ಮಾಸ್ ಲೀಡರ್. ಯಡಿಯೂರಪ್ಪ ನವರು ಯಾವುದೇ ಕಾರ್ಯಕರ್ಮಕ್ಕೆ ಹೋದ್ರೆ ಅಲ್ಲಿ ಅವರಿಗೆ ಬೆಂಬಲಿಗರಿಗೂ ಹಾಗೂ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಕೇಂದ್ರ ನಾಯಕರು ಯಾರು ಸಹ ಕಡಗಣಿಸುವ ಮಾತೇ ಇಲ್ಲ. ಹೈಕಮಾಂಡ್ ಮಾಡಿರುವ ಕಮಿಟಿಯಲ್ಲೂ ಯಡಿಯೂರಪ್ಪನವರನ್ನ ಅಯ್ಕೆ ಮಾಡಿದ್ದಾರೆ, ಕಡೆಗಣಿಸುವ ಪ್ರಶ್ನೆ ಇಲ್ಲ ಎಂದು ಹೇಳಿದರು.

5. ರಸ್ತೆ ಗುಂಡಿ ವಿಚಾರವನ್ನ ಬಿಟ್ಟು ಲವ್ ಜಿಹಾದ್ ಬಗ್ಗೆ ಮಾತ್ನಾಡಿ ಅಂತ ನಳೀನ್ ಕುಮಾರ್ ಕಟೀಲ್ ಅವರು ಹೇಳ್ತಾರೆ ಈ ಮಾತನ್ನ ನೀವು ಒಪ್ಪುತ್ತೀರಾ.?
ಕಡಿಮೆ ದಿನಗಳಲ್ಲಿ ಹೆಚ್ಚು ಮಳೆಯಿಂದಾಗಿ ರಸ್ತೆಗಳು ಹಾಳಾಗಿರುವುದನ್ನ ನಾವು ಒಪ್ಪಿಕೊಳ್ಳುತ್ತೇವೆ. ಮುಖ್ಯಮಂತ್ರಿಗಳು ಡಿಸೆಂಬರ್ ಒಳಗೆ ಸಾಕಷ್ಟು ಕೆಲಸ ಆಗುತ್ತೆ ಅಂತ ಹೇಳಿದ್ದರು ಹಾಗೆಯೇ ಕೆಲಸಗಳು ಆಗಿವೆ. ರಾಜ್ಯಾಧ್ಯಕ್ಷರ ಮಾತಿನಿಂದ ಪಕ್ಷಕ್ಕೆ ಯಾವುದೇ ಡ್ಯಾಮೇಜ್ ಆಗಲ್ಲ. ಅದರೆ ನಿಶ್ಚಿತವಾಗಿ ಬೊಮ್ಮಾಯಿಯವರು ಹಾಗೂ ರಾಜ್ಯಾಧ್ಯಕ್ಷರು ಸಹ ಅವರ ಹುದ್ದೆಯನ್ನ ನಿರ್ವಹಿಸುತ್ತಿದ್ದಾರೆ, ಇದರಿಂದ ಮತ್ತೆ ನಾವು ಅಧಿಕಾರಕ್ಕೆ ಬರುತ್ತೆವೆ ಎಂದು ಹೇಳಿದರು.
6. ಮೂಲ ಬಿಜೆಪಿಗರು ಹಾಗೂ ವಲಸಿಗರ ನಡುವೆ ಸಾಕಷ್ಟು ಅಸಮಾಧಾನಗಳು ಇವೆಯೇ.?
ಯಾವ ಅಸಮಾಧಾನವೂ ಇಲ್ಲ. ಇದು ಸತ್ಯಕ್ಕೆ ದೂರವಾಗಿರುವಂತದ್ದು, ಹಾಲು ಸಕ್ಕರೆಯಂತೆ, ಮೊದಲು ಇದ್ದವರು ಹಾಲಾದರೆ ಈಗ ಬಂದಿರುವವರು ಸಕ್ಕರೆ. ಹಾಲು ಸಕ್ಕರೆ ಮಿಕ್ಸ್ ಮಾಡಿದಂತೆ, ಅವರನ್ನ ಬೇರ್ಪಡಿಸಲು ಆಗಲ್ಲ. ಹೊರಗಿನಿಂದ ಬಂದವರಿಗೆ ದೊಡ್ಡ ದೊಡ್ಡ ಸ್ಥಾನಗಳನ್ನ ಪಕ್ಷ ಕೊಟ್ಟಿದೆ. ಅವರು ಹಳಬರು,ಹೊಸಬರು ಎಂಬ ಪ್ರಶ್ನೆಯೇ ಬರಲ್ಲ. ಎಲ್ಲಾರು ಒಟ್ಟಾಗಿಯೇ ಇರುತ್ತೇವೆ ಎಂದರು.

7. ಬಿಜೆಪಿಗೆ ಅಭಿವೃದ್ದಗಿಂತ ಹಿಂದುತ್ವವೇ ಅಜೆಂಡಾವಾ.? ಯಾಕೆಂದ್ರೆ ಈ ಕುರಿತು ಕಾಂಗ್ರೆಸ್ ಟೀಕೆ ಮಾಡ್ತಾನೆ ಬಂದಿದೆ.?
ಕಾಂಗ್ರೆಸ್ ನವರು ಏನೇ ಟೀಕೆ ಟಿಪ್ಪಣಿಗಳನ್ನ ಮಾಡ್ಲಿ. ಹಿಂದುತ್ವದ ಬಗ್ಗೆ ನಮಗೆ ಅಭಿಮಾನ ಇದೆ, ಗರ್ವ ಇದೆ. ನಾನೊಬ್ಬ ಹಿಂದೂ ಅಂತ ಹೇಳಿಕೊಳ್ಳಲು ನಮಗೆ ಖುಷಿ ಎನಿಸುತ್ತದೆ. ಹಿಂದೂ ಅಂದ್ರೆ ಬಿಜೆಪಿ, ಬಿಜೆಪಿ ಅಂದ್ರೆ ಹಿಂದೂ.
8. 40 % ಕಮಿಷನ್ ಆರೋಪ ವಿಪಕ್ಷಗಳಿಗೆ ಚುನಾವಣೆಗೆ ಅಸ್ತ್ರವಾಗಲಿದೆಯೇ.?
ಆರೋಪ ಮಾಡುವುದು ಬಹಳ ಸುಲಭ, ಇಲ್ಲಿಯವರೆಗೂ ಕಾಂಗ್ರೆಸ್ ನವರು ಆರೋಪ ಮಾಡಿಕೊಂಡೆ ಬಂದಿದ್ದಾರೆ. ಮೇ ತಿಂಗಳಲ್ಲಿ ಇದರ ಫಲಿತಾಂಶ ಗೊತ್ತಾಗುತ್ತದೆ. ಕಾಂಗ್ರೆಸ್ ನವರು ಮೊದಲು ಅವರ ಪಕ್ಷದಲ್ಲಿರುವ ಒಡಕನ್ನ ಸರಿಪಡಿಸಿಕೊಳ್ಳಲಿ. ಇನ್ನೊಬ್ಬರ ಮೇಲೆ ಆರೋಪ ಮಾಡುವುದು ಸರಿಯಲ್ಲ, ಅವರು ಅಧಿಕಾರ ನಡೆಸುವಾಗ ಏನು ತಪ್ಪಾಗಿದೆ ಅಂತ ಇಡೀ ರಾಜ್ಯದ ಜನತೆಗೆ ಗೊತ್ತಿದೆ. ನಮ್ಮ ರಾಜ್ಯದ ಜನತೆ ಅತ್ಯಂತ ಬುದ್ದಿವಂತರು. ನಮ್ಮ ಕನ್ನಡಿಗರು ಸುಳ್ಳನ್ನ ನಂಬಲ್ಲ. ಅವರ ಬಳಿ ಯಾವುದೇ ದಾಖಲೆ ಇಲ್ಲ, ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ವಿರೋಧ ಪಕ್ಷವೂ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷವನ್ನ ಜನರು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ.

9. ಮೀಸಲಾತಿ ವಿಚಾರದಲ್ಲಿ ಜಯಮೃತ್ಯುಜಯ ಸ್ವಾಮೀಜಿಯವರು ನಿಮ್ಮ ಬಗ್ಗೆ ಸಾಕಷ್ಟು ಟೀಕೆಯನ್ನ ಮಾಡಿದರು ಯಾಕೆ.?
ನಮ್ಮಲ್ಲಿ ಮೂರು ಜನ ಪೀಠದ್ಯಕ್ಷರಿದ್ದಾರೆ. ಕರ್ನಾಟಕದಲ್ಲಿ 80 ಲಕ್ಷ ಜನ ವೀರಶೈವ ಲಿಂಗಾಯತ ಪಂಚಮಸಾಲಿ ಜನರಿದ್ದಾರೆ. ಎಲ್ಲಾ ಶುಭ ಕಾರ್ಯಗಳಿಗೆ ಒಬ್ಬರೇ ಸ್ವಾಮಿಜಿ ಹೋಗಲು ಆಗಲ್ಲ ಎನ್ನುವ ಕಾರಣಕ್ಕೆ ಮೂರು ಪೀಠಗಳನ್ನ ಹುಟ್ಟು ಹಾಕಿದ್ದೇ ಮುರುಗೇಶ್ ನಿರಾಣಿ. 2 ಎ ಸಂಬಂಧಪಟ್ಟತಂಹ ವಿಚಾರದಲ್ಲಿ ಹಿಂದಿನ ವರ್ಷವೇ ಶಕ್ತಿ ಪ್ರದರ್ಶನವನ್ನ ಮಾಡಿದ್ರು. ಆಗ 6 ತಿಂಗಳು ಗಡುವನ್ನ ಕೊಟ್ಟು ಮುಕ್ತಾಯ ಮಾಡಲು ಯಡಿಯೂರಪ್ಪನವರು ರೆಡಿ ಇದ್ದರು. 2 ಎ ವೀರಶೈವ ಪಂಚಮಸಾಲಿ ಯಾವುದೇ ಜಾತಿ ಕಲಂ ನಲ್ಲೇ ಇರ್ಲಿಲ್ಲ. ಆ ಟೈಮ್ ನಲ್ಲಿ 3ಬಿ ಗೆ ಸೇರಿಸಿದ್ದೆ ಯಡಿಯೂರಪ್ಪ ನವರು, 2 ಎ ಸೇರಿಸಬೇಕು ಅಂತ ಪ್ರಪೋಸಲ್ ರೆಡಿ ಮಾಡಿದಾಗ ಯಾರೋ ಒಬ್ಬರು ಸುಪ್ರಿಂ ಕೋರ್ಟ್ ನಿಂದ ಸ್ಟೇ ತಂದರು.
ಅಲ್ಲಿಂದ 2004 ರಿಂದ 2018 ರ ವರೆಗೂ ಕಾಂಗ್ರೆಸ್ ಸರ್ಕಾರ ಇತ್ತು, 2016 ರಲ್ಲಿ ಆ ಪ್ರಪೋಸರ್ ರಿಜೆಕ್ಟ್ ಆಯ್ತು ಆಗ ಯಾರು ಕಾಂಗ್ರೆಸ್ ನವರು ಮಾತನಾಡಲಿಲ್ಲ. ಇವತ್ತು ಸಿಎಂ ಬೊಮ್ಮಾಯಿ ಅವರು ಹಿಂದುಳಿದ ಆಯೋಗದಿಂದ ಎಸ್ ಸಿ ಹಾಗೂ ಎಸ್ ಟಿ ಯವರಿಗೆ 3% ರಿಂದ 7 % ಹಾಗೂ 15% ರಿಂದ 17%, ಮತ್ತು ಒಕ್ಕಲಿಗ ಸಮುದಾಯವರಿಗೆ 4 % ರಿಂದ 6 ಹಾಗೂ ವೀರಶೈವ ಲಿಂಗಾಯತ ಸಮಾಜಕ್ಕೆ 5 % ರಿಂದ 7% ನೀಡಿದ್ದ ಬಿಜೆಪಿ, ಕಾಂಗ್ರೆಸ್ ನವರು ಮಾಡಲಿಲ್ಲ. ಹೀಗಾಗಿ ನಾನು ಸ್ವಾಮೀಜಿಯವರಿಗೆ ಹೇಳುತ್ತೇನೆ ಅತೀ ಹೆಚ್ಚು ಮೀಸಲಾತಿಗೆ ಪ್ರಯತ್ನ ಪಟ್ಟಿದ್ದು ಬಿಜೆಪಿ ಪಕ್ಷ. ನನಗೆ ಯಾವುದೇ ಸ್ವಾಮೀಜಿಗಳ ಹತ್ತಿರ ಅಸಮಾಧಾನ ಇಲ್ಲ, ಮಾತಿನಲ್ಲಿ, ವಿಚಾರದಲ್ಲಿ ಸ್ವಲ್ಪ ಭಿನಾಭಿಪ್ರಾಯ ಇದೆ ಅಷ್ಟೇ. ಅವರು ನಮ್ಮ ಸಮಾಜದ ಒಬ್ಬ ಸ್ವಾಮೀಜಿಯವರು ಎಂದು ಹೇಳಿದರು.
10. ಬೀಳಗಿ ಕ್ಷೇತ್ರವನ್ನ ಈ ಬಾರಿ ಬಿಟ್ಟು ಬೇರೆ ಕ್ಷೇತ್ರದಲ್ಲಿ ಮುರುಗೇಶ್ ನಿರಾಣಿ ಅವರು ಸ್ಪರ್ಧೆ ಮಾಡುತ್ತಾರಾ.?
ಇದು ಸತ್ಯಕ್ಕೆ ದೂರವಾದದ್ದು, ಬೀಳಗಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆ 100 ಕ್ಕೆ 100 ರಷ್ಟು ನಾನು ಬೀಳಗಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆ. ಇದು ವಿಪಕ್ಷಗಳ ಊಹಾಪೂಹ ಅಷ್ಟೇ ಎಂದು ಹೇಳಿದರು.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications