ವಿದ್ಯುತ್ ಸ್ಪರ್ಶಕ್ಕೆ ಹಸು ಬಲಿ, 1.28 ಲಕ್ಷದಷ್ಟು ಆಸ್ತಿ ನಷ್ಟ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು,ಮಾರ್ಚ್,11: ದನದ ಕೊಟ್ಟಿಗೆಗೆ ವಿದ್ಯುತ್ ಸ್ಪರ್ಶಿಸಿ ಉಂಟಾದ ಬೆಂಕಿ ಅವಘಡದಲ್ಲಿ ದನದಕೊಟ್ಟಿಗೆಯಲ್ಲಿದ್ದ ಹಸು ಸಾವನ್ನಪ್ಪಿದ್ದು, ಮನೆಯ ಮಾಲೀಕನಿಗೂ ಬೆಂಕಿ ತಗುಲಿ ಗಾಯಗಳಾದ ಘಟನೆ ನಂಜನಗೂಡು ತಾಲೂಕಿನ ಹೆಮ್ಮರಗಾಲ ಗ್ರಾಮದಲ್ಲಿ ನಡೆದಿದೆ.

ಹೆಮ್ಮರಗಾಲ ಗ್ರಾಮದ ನಿವಾಸಿ ಮಾಲಶೆಟ್ಟಿ ಎಂಬುವವರ ಮನೆಯ ಕೊಟ್ಟಿಗೆಗೆ ಬೆಂಕಿ ಸ್ಪರ್ಶಿಸಿ ಹಸು ಪ್ರಾಣಬಿಟ್ಟಿದೆ. ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗದೆ ಈ ದುರ್ಘಟನೆ ನಡೆದಿದೆ. ಮನೆ ಮಾಲೀಕ ನಂಜನಗೂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.[ಪ್ರಿಯಕರನ ಹಿಂಸೆಗೆ ಬೇಸತ್ತ 15 ವರ್ಷದ ಹುಡುಗಿ ಆತ್ಮಹತ್ಯೆ]

Inshort News of Mandya and Mysuru

ಮಾಲಶೆಟ್ಟಿ ಅವರು ರಾತ್ರಿ ಸಮಯದಲ್ಲಿ ಹಸುವನ್ನು ಕೊಟ್ಟಿಗೆಯಲ್ಲಿ ಕಟ್ಟಿಹಾಕಿ ಮಲಗಿದ್ದಾಗ ಮನೆಯ ಪಕ್ಕದಲ್ಲಿದ್ದ ವಿದ್ಯುತ್ ಕಂಬದಿಂದ ತಂತಿ ಸ್ಪರ್ಶಗೊಂಡು ಹುಲಿನ ಮೆದೆಗೆ ಬೆಂಕಿ ತಗುಲಿದೆ. ಕ್ಷಣಾರ್ಧದಲ್ಲಿ ಬೆಂಕಿ ಕೊಟ್ಟಿಗೆಗೂ ತಗುಲಿದೆ. ಬೆಂಕಿಯ ಜ್ವಾಲೆಗೆ ಸಿಕ್ಕಿ ಕೊಟ್ಟಿಗೆಯಲ್ಲಿದ್ದ ಹಸು ಸಾವನ್ನಪ್ಪಿದೆ.

ಬೆಂಕಿ ಹೊತ್ತಿ ಉರಿಯುತ್ತಿದ್ದುದನ್ನು ನೋಡಿ ಮಾಲೀಕ ಮಾಲಶೆಟ್ಟಿ ನೀರು ಎರಚಿ ಬೆಂಕಿ ನಂದಿಸಲು ಪ್ರಯತ್ನಿಸಿದರಾದರೂ ಪ್ರಯೋಜನವಾಗಲಿಲ್ಲ. ಆ ನಂತರ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದವರು ಭಾರೀ ಅನಾಹುತ ತಪ್ಪಿಸಿದ್ದಾರೆ.[ಇಬ್ಬರು ಮಕ್ಕಳ ಬಾಳಿಗೆ ಬೆಳಕಾದ ವಿಜಯಪುರದ 'ಜ್ಯೋತಿ']

ಬೆಂಕಿ ನಂದಿಸುವಾಗ ಮಾಲಶೆಟ್ಟಿ ಅವರಿಗೂ ಬೆಂಕಿ ತಗುಲಿದ್ದು ಅವರನ್ನು ತಕ್ಷಣ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯಿಂದ 70 ಸಾವಿರ ಮೌಲ್ಯದ ಹಸು ಸೇರಿದಂತೆ 1.28 ಲಕ್ಷಗಳಷ್ಟು ಆಸ್ತಿಪಾಸ್ತಿ ನಷ್ಟವಾಗಿದೆ ಎಂದು ಬದನವಾಳು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ವಾಹನ ಹರಿದು ಹೆಬ್ಬಾವು ಸಾವು

ಮಂಡ್ಯ,ಮಾರ್ಚ್,21: ರಸ್ತೆ ಮೇಲೆ ಹರಿದುಗೋಗುತ್ತಿದ್ದ ಹೆಬ್ಬಾವಿನ ಮೇಲೆ ಅಪರಿಚಿತ ವಾಹನ ಹರಿದ ಪರಣಾಮ ಸುಮಾರು 15 ಅಡಿ ಉದ್ದದ ಭಾರೀ ಗಾತ್ರದ ಹೆಬ್ಬಾವೊಂದು ಮಳವಳ್ಳಿ ತಾಲೂಕಿನ ಶಿವನಸಮುದ್ರಂ ರೊಟ್ಟಿಕಟ್ಟೆ ಹತ್ತಿರ ಸಾವನ್ನಪ್ಪಿದೆ.[ಬರೋಬ್ಬರಿ 3 ಹೆಬ್ಬಾವು ಹಿಡಿದ ಮಂಗಳೂರು ಯುವಕರು!]

Inshort News of Mandya and Mysuru

ಮಧ್ಯಾಹ್ನ 3ರ ಸಮಯದಲ್ಲಿ ಅರಣ್ಯದಲ್ಲಿದ್ದ ಹೆಬ್ಬಾವು ರಸ್ತೆ ಮೇಲೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದ್ದು, ಹೆಬ್ಬಾವು ರಸ್ತೆ ಮೇಲೆಯೇ ಕೆಲಕಾಲ ಒದ್ದಾಡುತ್ತಿತ್ತಾದರೂ ಅದರ ಬಳಿಗೆ ತೆರಳಲು ಜನರಿಗೆ ಧೈರ್ಯ ಸಾಲದೆ ಮೂಕ ಪ್ರೇಕ್ಷಕರಾಗಿ ನಿಂತು ನೋಡಿದ್ದಾರೆ. ವಿಷಯ ತಿಳಿದರೂ ಅರಣ್ಯ ಇಲಾಖೆ ಸಿಬ್ಬಂದಿ ಸಹ ಸ್ಥಳಕ್ಕೆ ಆಗಮಿಸಿ ಇದರ ರಕ್ಷಣೆ ಮಾಡಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.[30 ಸಾವಿರ ಹಾವು ಹಿಡಿದು ದಾಖಲೆ ಮಾಡಿದ ಸ್ನೇಕ್ ಶ್ಯಾಮ್]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Fire accident: A cow died and house owner very injured, hospitalized in Nanjangud, Mysuru. His 1.28lakh property was loss.
Please Wait while comments are loading...