ಮುರುಘಾ ಮಠದಲ್ಲಿ ಅಮಾನವೀಯ ಘಟನೆ: ಸಾರ್ವಜನಿಕರಿಂದ ಅಸಮಾಧಾನ
ಕರ್ನಾಟಕದ ಪ್ರಸಿದ್ಧ ಮಠಗಳಲ್ಲಿ ಒಂದಾಗಿರುವ ಧಾರವಾಡದ ಮುರುಘಾ ಮಠದಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ಇದಕ್ಕೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಮಠದಲ್ಲಿ ನಡೆದಿರುವ ಘಟನೆಗೆ ಸಂಬಂಧಿಸಿದಂತೆ ಪೋಟೋ ಹಾಗೂ ವಿಡಿಯೋಗಳು ಸೋಷಿಯಲ್ಲಿ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಬೆಳವಣಿಗೆಗೆ ಧಾರವಾಡ ಸೇರಿದಂತೆ ರಾಜ್ಯದಾದ್ಯಂತ ವಿರೋಧ ವ್ಯಕ್ತವಾಗಿದೆ.
ಧಾರವಾಡದ ಮುರುಘಾ ಮಠದ ಬಗ್ಗೆ ಕರ್ನಾಟಕದ ಜನತೆಗೆ ಒಳ್ಳೆಯ ಅಭಿಪ್ರಾಯವಿದೆ. ಆದರೆ, ಶನಿವಾರ ನಡೆದಿರುವ ಘಟನೆಯು ಜನರಲ್ಲಿ ಆಘಾತವನ್ನುಂಟು ಮಾಡಿದೆ. ಧಾರವಾಡದ ಮುರುಘಾಮಠದ ದೇವಾಲಯದಲ್ಲಿ ಇಬ್ಬರು ಬಾಲಕರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ. ಸಣ್ಣ ವಿಷಯಕ್ಕೆ ಈ ರೀತಿ ನಡೆಸಿಕೊಂಡಿರುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.

ಧಾರವಾಡದ ಮುರುಘಾಮಠದಲ್ಲಿ ನಡೆದದ್ದು ಏನು: ಧಾರವಾಡದ ಮುರುಘಾ ಮಠಕ್ಕೆ ಇಬ್ಬರು ಯುವಕರು ಭೇಟಿ ನೀಡಿದ್ದಾರೆ. ಮುರುಘಾಮಠದಲ್ಲಿ ದೇವರಿಗೆ ಕೈಮುಗಿಯುವಂತೆ ಹೋಗುವ ಯುವಕರು ದೇವಸ್ಥಾನದ ಹುಂಡಿಯಲ್ಲಿ ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ.
ಕಳ್ಳತನ ಮಾಡಿದ ತಪ್ಪಿಗೆ ಬಾಲಕರನ್ನು ಅರಬೆತ್ತಲೆ ಮಾಡಿ, ಅದನ್ನು ವಿಡಿಯೋ ಚಿತ್ರೀಕರಣವನ್ನೂ ಮಾಡಲಾಗಿದೆ. ಈ ಇಬ್ಬರು ಬಾಲಕರು ಧಾರವಾಡದ ಮುರುಘಾಮಠದಲ್ಲಿ ಹಣ ಕಳ್ಳತನ ಮಾಡಿವುದು ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋವನ್ನು ನೋಡಿ ಮಠದ ಸಿಬ್ಬಂದಿ ಹಾಗೂ ಸಾರ್ವಜನಿಕರು ಇಬ್ಬರು ಬಾಲಕರನ್ನು ಹಿಡಿದುಕೊಂಡಿದ್ದಾರೆ.
ನಂತರ ಇಬ್ಬರು ಬಾಲಕರನ್ನು ಅರಬೆತ್ತಲೆ ಮಾಡಿ ಕೂಡಿ ಹಾಕಲಾಗಿದೆ. ಇದಾದ ಮೇಲೆ ಅವರನ್ನು ಬೆದರಿಸಲಾಗಿದೆ. ಈ ಎಲ್ಲ ದೃಶ್ಯಗಳು ಇದೀಗ ವೈರಲ್ ಆಗಿವೆ. ಇಷ್ಟು ಸಣ್ಣ ವಿಷಯಕ್ಕೆ ಈ ರೀತಿ ಅಮಾನವೀಯವಾಗಿ ನಡೆಸಿಕೊಳ್ಳಬಾರದಿತ್ತು. ಬಾಲಕರಿಗೆ ಬುದ್ಧಿವಾದ ಹೇಳಿ ಕಳುಹಿಸಬಹುದಿತ್ತು ಎನ್ನುವ ಅಭಿಪ್ರಾಯ ಸಾರ್ವಜನಿಕರಿಂದ ಕೇಳಿ ಬಂದಿದೆ.
ಗಾಂಜಾ ಗುಂಗಲ್ಲಿದ್ದವರಿಗೆ ಪೊಲೀಸ್ ಡ್ರಿಲ್
ಹುಬ್ಬಳ್ಳಿ - ಧಾರವಾಡದಲ್ಲಿ ಗಾಂಜಾ ವ್ಯಸನಿಗಳಿಗೆ ಹುಬ್ಬಳ್ಳಿ - ಧಾರವಾಡ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ. ಗಾಂಜಾ ಮಾರಾಟಗಾರರು ಹಾಗೂ ವ್ಯಸನಿಗಳು ಪೊಲೀಸರು ವಶಕ್ಕೆ ಪಡೆಯುತ್ತಿದ್ದು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವಿಸಿರುವುದು ದೃಢಪಟ್ಟ ಮೇಲೆ ವ್ಯಸನಿಗಳನ್ನು ಹುಬ್ಬಳ್ಳಿಯ ರಂಭಾಪುರಿ ಸಭಾಂಗಣಕ್ಕೆ ಕರೆತಂದ ಪೊಲೀಸರು ವಾರ್ನ್ ಮಾಡಿದ್ದಾರೆ.
ಶನಿವಾರ ಒಟ್ಟು 518 ಜನರ ತಪಾಸಣೆಗೆ ಒಳಪಡಿಸಲಾಗಿತ್ತು. ಅದರಲ್ಲಿ 147 ಜನರಿಗೆ ಪಾಸಿಟಿವ್ (ಗಾಂಜಾ ತೆಗೆದುಕೊಂಡಿರುವುದು ದೃಢ), 34 ಜನರ ಮೇಲೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ಪೊಲೀಸರು ವಾರ್ನಿಂಗ್ ನೀಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು ಮಾತನಾಡಿ, ಹುಬ್ಬಳ್ಳಿ - ಧಾರವಾಡ ಅವಳಿನಗರದಲ್ಲಿ ಡ್ರಗ್ ಅಭಿಯಾನ ನಿರಂತರವಾಗಿ ಮಾಡುತ್ತಿದ್ದೇವೆ. ಡ್ರಗ್ ಪೆಡ್ಲರ್ ಹಾಗೂ ಡ್ರಗ್ ತೆಗೆದುಕೊಳ್ಳುವವರ ಮೇಲೆ ಮೂರು ಹಂತದಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಮೊದಲು ಶೇಕಡ 63.67 ರಷ್ಟು ಪಾಸಿಟಿವ್ ಬಂದಿತ್ತು. ಎರಡನೇ ಹಂತದಲ್ಲಿ ಶೇಕಡ 53 ಹಾಗೂ ಮೂರನೇ ಹಂತದಲ್ಲಿ ಶೇಕಡ 43 ಇತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.












Click it and Unblock the Notifications