ಸಿದ್ದರಾಮಯ್ಯನವರೇ, ಗಾಳಿಯಲ್ಲಿ ಗುದ್ದಾಡಬೇಡಿ!
ಬೆಂಗಳೂರು, ಜು. 23: ಕೋವಿಡ್ ಕಾಲದ ಸಂಕಷ್ಟದ ಖರೀದಿಯಲ್ಲಿ ರಾಜ್ಯ ಬಿಜೆಪಿ ಸರ್ಕಾರ 4,167 ರೂಪಾಯಿಗಳ ಹಗರಣ ಮಾಡಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿರುವ ಅವರು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಗಾಳಿಯಲ್ಲಿ ಗುದ್ದಾಡುವುದು ಬೇಡ ಎಂದು ಲೇವಡಿ ಮಾಡಿದ್ದಾರೆ.
ಎಲ್ಲಾ ಇಲಾಖೆಗಳಲ್ಲೂ ಭ್ರಷ್ಟಾಚಾರ ಆಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ ಮಾಡುತ್ತಾರೆ. ಅವರು ಗಾಳಿಯಲ್ಲಿ ಗುದ್ದಾಡುವುದು ಬೇಡ. ಒಂದು ಗುರುತರ ಆರೋಪವನ್ನು ಮಾಡಲಿ, ದಾಖಲೆ ಇಲ್ಲದೆ ಆರೋಪ ಮಾಡೋದು ಸರಿಯಾ? ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ಕೆಲಸ ಮಾಡಿದವರು. ಅವರ ಬಗ್ಗೆ ನಮಗೆ ಕನಿಕರ ಬರುತ್ತಿದೆ ಎಂದಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಆರೋಗ್ಯ ಇಲಾಖೆಯಿಂದ ಮಾಹಿತಿ ಕೊಟ್ಟಿದ್ದಾರೆ. ಈಗಾಗಲೇ ನಾವೇ ಮಾಹಿತಿಯನ್ನು ಕೊಟ್ಟು, ಆರೋಪ ಮಾಡಲು ಅವರನ್ನು ಬಿಡಬೇಕಾ? ಎಂದು ಶೆಟ್ಟರ್ ಪ್ರಶ್ನೆ ಮಾಡಿದರು.

20 ಪತ್ರಗಳನ್ನು ಬರೆದರೂ ಮಾಹಿತಿ ಸಿಕ್ಕಿಲ್ಲ ಅಂತಾರೆ. ಹಾಗಾದರೆ ಮಾಹಿತಿ ಇಲ್ಲದೇ ಸಿದ್ದರಾಮಯ್ಯ ಆರೋಪ ಮಾಡುತ್ತಿದ್ದಾರಾ? ಗಾಳಿಯಲ್ಲಿ ಗುದ್ದಾಡೋ ಕೆಲಸ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಅವರಿಗೆ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications