SWR: ಸೂಪರ್‌ಫಾಸ್ಟ್ ರೈಲು ಎಕ್ಸ್‌ಪ್ರೆಸ್ ರೈಲಾಗಿ ಪರಿವರ್ತನೆ, ವಂದೇ ಭಾರತ್ ರೈಲು ಸೇವೆ ಪರಿಷ್ಕರಣೆ
ಬೆಂಗಳೂರು, ಸೆಪ್ಟಂಬರ್ 18: ಭಾರತೀಯ ರೈಲ್ವೆ ಇಲಾಖೆ ಕೆಲವು ರೈಲುಗಳ ಸೇವೆ ಪರಿಷ್ಕರಣೆ ಮಾಡಿದೆ. ಖುಷಿಯ ವಿಚಾರವೆಂದರೆ ಸೂಪರ್ ಫಾಸ್ಟ್ ರೈಲೊಂದು ಎಕ್ಸ್‌ಪ್ರೆಸ್ ರೈಲಿನ ವರ್ಗಕ್ಕೆ ಬದಲಾವಣೆಗೊಳ್ಳುತ್ತಿದೆ. ಅದರ ಸಂಖ್ಯೆಗಳು ಬದಲಾಗಿವೆ. ಈ ಮಾರ್ಗದ ಒಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಪರಿಷ್ಕರಣೆ ಮಾಡಿ ವೇಳಾಪಟ್ಟಿ ಬಿಡುಗಡೆ ಮಾಡಿದೆ.
ಮೊದಲಿಗೆ ರೈಲಿನ ವರ್ಗ ಮತ್ತು ಸಂಖ್ಯೆಗಳಲ್ಲಿ ಬದಲಾವಣೆ ನೋಡುವುದಾದರೆ, ದಕ್ಷಿಣ ರೈಲೆಯು ರೈಲು ಸಂಖ್ಯೆ 12678/12677 ಎರ್ನಾಕುಲಂ-ಕೆಎಸ್‌ಆರ್ ಬೆಂಗಳೂರು-ಎರ್ನಾಕುಲಂ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಅನ್ನು 2025 ಡಿಸೆಂಬರ್ 3ರಿಂದ ಎಕ್ಸ್‌ಪ್ರೆಸ್ ವರ್ಗಕ್ಕೆ ಬದಲಾಯಿಸಿದೆ. ಜೊತೆಗೆ ರೈಲಿನ ಸಂಖ್ಯೆಗಳನ್ನು ಪರಿಷ್ಕರಿಸಿದೆ.

ದಕ್ಷಿಣ ರೈಲ್ವೆ ಪ್ರಕಾರ, ಎರ್ನಾಕುಲಂ- ಕೆಎಸ್‌ಆರ್ ಬೆಂಗಳೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (12678) ಇನ್ನು ಮುಂದೆ ರೈಲು ಸಂಖ್ಯೆ (16378) ಎರ್ನಾಕುಲಂ-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ಆಗಿ ಸಂಚಾರ ಸೇವೆ ನೀಡಲಿದೆ. ಅದೇ ರೀತಿ ಕೆಎಸ್‌ಆರ್ ಬೆಂಗಳೂರು-ಎರ್ನಾಕುಲಂ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಅನ್ನು ರೈಲು ರೈಲು (12677) ಬೆಂಗಳೂರು-ಎರ್ನಾಕುಲಂ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 16377) ಎಂದು ಮರುನಾಮಕರಣ ಮಾಡಲಾಗಿದೆ ಎಂದು ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಿದ್ದಾರೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ, ಪರಿಷ್ಕರಣೆ
ಭಾರತೀಯ ರೈಲ್ವೆ ಇಲಾಖೆಯಲ್ಲಿ ಕ್ರಾಂತಿ ಉಂಟು ಮಾಡಿದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ದಕ್ಷಿಣ ಮಧ್ಯ ರೈಲ್ವೆಯು ಕಾಚಿಗುಡ-ಯಶವಂತಪುರ-ಕಾಚಿಗುಡ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ರೈಲು (20703/20704) ಸೇವಾ ದಿನಗಳನ್ನು ಪರಿಷ್ಕರಿಸಿದೆ. ಅಂದರೆ ಈ ರೈಲು ಬುಧವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳಲ್ಲಿ ಸಂಚರಿಸುತ್ತಿತ್ತು.
ಇದೀಗ ಪರಿಷ್ಕರಣೆಗೊಂಡ ವೇಳಾಪಟ್ಟಿ ಪ್ರಕಾರ, 2025 ಡಿಸೆಂಬರ್ 4ರಿಂದ ಜಾರಿಗೆ ಬರುವಂತೆ ಈ ರೈಲುಗಳು ಇನ್ನು ಮುಂದೆ ಶುಕ್ರವಾರ ಹೊರತುಪಡಿಸಿ ವಾರದ ಉಳಿದ ಎಲ್ಲಾ ದಿನಗಳಲ್ಲಿ ಸೇವೆ ಒದಗಿಸಲಿವೆ. ರೈಲಿನ ವೇಳಾಪಟ್ಟಿ, ನಿಲುಗಡೆಗಳು, ಆವರ್ತನ ಮತ್ತು ಬೋಗಿಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications