ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಎಸ್‌ಐಎಸ್ ಉಗ್ರ ಭಟ್ಕಳದ ಶಫಿ ಅರ್ಮರ್ ಮೃತಪಟ್ಟಿಲ್ಲ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಮೇ 16 : ಐಎಸ್‌ಐಎಸ್ ಉಗ್ರ ಸಂಘಟನೆಯಲ್ಲಿದ್ದ ಭಟ್ಕಳ ಮೂಲದ ಶಫಿ ಅರ್ಮರ್ ಮೃತಪಟ್ಟಿಲ್ಲ. ಸಿರಿಯಾದ ಮೇಲೆ ನಡೆದ ವಾಯುದಾಳಿಯಲ್ಲಿ ಅರ್ಮರ್ ಸಾವನ್ನಪ್ಪಿದ್ದಾನೆ ಎಂಬ ಸುದ್ದಿ ಏಪ್ರಿಲ್‌ನಲ್ಲಿ ಬಹಿರಂಗವಾಗಿತ್ತು. ಸಾವನ್ನಪ್ಪಿರುವುದು ಅರ್ಮರ್ ಅಲ್ಲ ಎಂಬ ಮಾಹಿತಿ ಗುಪ್ತಚರ ಇಲಾಖೆಗೆ ಲಭ್ಯವಾಗಿದೆ.

ಏಪ್ರಿಲ್ 25ರಂದು ಶಫಿ ಅರ್ಮರ್ (26) ಮೃತಪಟ್ಟ ಬಗ್ಗೆ ಮಾಹಿತಿ ಬಂದಿತ್ತು. ಆದರೆ, ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಈ ಮಾಹಿತಿಯನ್ನು ಖಚಿತಪಡಿಸಿಕೊಳ್ಳಲು ಮುಂದಾಗಿತ್ತು. ಅರ್ಮರ್ ಎಲ್ಲಿ ನೆಲೆಸಿದ್ದ? ಎಂಬ ಬಗ್ಗೆ ಮಾಹಿತಿ ಇರಲಿಲ್ಲ. ಆದ್ದರಿಂದ ಸಾವಿನ ಸುದ್ದಿಯೂ ಖಚಿತಗೊಂಡಿರಲಿಲ್ಲ. [ಭಟ್ಕಳ ಮೂಲದ ಶಫಿ ಅರ್ಮರ್ ಹತ್ಯೆ?]

shafi armar

ಸಿರಿಯಾದ ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ ಅರ್ಮರ್ ಮೃತಪಟ್ಟಿದ್ದಾನೆ ಎಂದು ಘೋಷಣೆ ಮಾಡಲಾಗಿತ್ತು. ಆದರೆ, ಗುಪ್ತಚರ ಇಲಾಖೆಗೆ ಈಗ ಲಭ್ಯವಾಗಿರುವ ಮಾಹಿತಿಯಂತೆ ಅರ್ಮರ್ ಜೀವಂತವಾಗಿದ್ದಾನೆ. ವಾಯುದಾಳಿಯಲ್ಲಿ ಮೃತಪಟ್ಟ ಉಗ್ರ ಅರ್ಮರ್ ಅಲ್ಲ ಎಂಬುದು ಖಚಿತವಾಗಿದೆ. [ಭಟ್ಕಳದ ಅಹಮದ್ ಗೆ ISIS ನಂಟಿಲ್ಲ]

ಯಾರು ಈ ಅರ್ಮರ್‌? : ಶಫಿ ಅರ್ಮರ್ ಐಎಸ್‌ಐಎಸ್‌ನ ಭಾರತದ ಶಾಖೆಯಾಗಿರುವ ಅನ್ಸರ್-ಉತ್-ತಾಹಿದ್‌ನ ಸ್ಥಾಪಕ ಸುಲ್ತಾನ್ ಅರ್ಮರ್‌ನ ಸಹೋದರ. ಭಟ್ಕಳ ಮೂಲದ ಸುಲ್ತಾನ್ ಅರ್ಮರ್‌ ಮತ್ತು ಶಫಿ ಅರ್ಮರ್ ಸಹೋದರರು, ಐಎಸ್‌ಐಎಸ್‌ಗೆ ಭಾರತೀಯರನ್ನು ನೇಮಕ ಮಾಡಲು ಅನ್ಸರ್-ಉತ್-ತಾಹಿದ್ ಸಂಘಟನೆ ಸ್ಥಾಪಿಸಿದ್ದರು. ಕಳೆದ ವರ್ಷ ಸುಲ್ತಾನ್ ಹತ್ಯೆಯಾದ ಬಳಿಕ, ಶಫಿ ಅರ್ಮರ್ ಸಂಘಟನೆಯ ನೇತೃತ್ವ ವಹಿಸಿಕೊಂಡಿದ್ದ. [ಭಟ್ಕಳ ಮೂಲದ ಶಫಿ ಭಾರತದಲ್ಲಿ ISIS ಮುಖ್ಯಸ್ಥ]

2016ರ ಜನವರಿಯಲ್ಲಿ ದೇಶದ ಹಲವು ನಗರಗಳಲ್ಲಿ ಐಎಸ್‌ಐಎಸ್ ಉಗ್ರರನ್ನು ಬಂಧಿಸಿದ್ದ ರಾಷ್ಟ್ರೀಯ ತನಿಖಾ ದಳ ಅವರಿಂದ ಮಾಹಿತಿ ಸಂಗ್ರಹಣೆ ಮಾಡಿದಾಗಲೂ ಶಫಿ ಅರ್ಮರ್ ಎಲ್ಲಿ ನೆಲೆಸಿದ್ದ? ಎಂಬ ಮಾಹಿತಿ ಸಿಕ್ಕಿರಲಿಲ್ಲ. ಅಬುದಾಬಿ ಅಥವ ಸಿರಿಯಾದಲ್ಲಿ ಆತ ನೆಲೆಸಿರಬಹುದು ಎಂದು ಶಂಕಿಸಲಾಗಿತ್ತು.

English summary
The Intelligence Bureau picked up an intercept which suggests that Shafi Armar, alleged to be the head of the Indian unit of the ISIS is still alive. A month back, it was stated that he may have been killed in an air strike at Syria by the US. The 26 year old Shafi is a native of Bhatkal, Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X