NEP; ಡಿಜಿಟಲ್ ಯುಗಕ್ಕೆ ಶಿಕ್ಷಣ ವ್ಯವಸ್ಥೆಯ ಪುನರ್‌ಕಲ್ಪನೆ ಕೈಗೊಂಡ ಭಾರತ

ಬೆಂಗಳೂರು, ಜನವರಿ 24: ಸಮಿಟ್ ಇಂಡಿಯಾ ಈಗ ಟೆಕ್ ಅವಂತ್-ಗಾರ್ಡೆ(ಟ್ಯಾಗ್)(Tech Avant-Garde (TAG)ಯ ಸಹಯೋಗದೊಂದಿಗೆ ಆಯೋಜಿಸಿದ ಶೈಕ್ಷಣಿಕ ಶೃಂಗ ವಸುದೈವ ಕುಟುಂಬಕಂ ಎಜುಕೇಷನ್ ಸಮಿಟ್ 2022' ಕಾರ್ಯಕ್ರಮ ತನ್ನ ಮೊದಲ ಹಂತವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದೆ.

ಒಳನೋಟಗಳಿಂದ ತುಂಬಿದ ಕೆಲವು ಚರ್ಚೆ, ಆಲೋಚನೆ ಮತ್ತು ವಾಗ್ವಾದಗಳೊಂದಿಗೆ ಮೂರು ತಿಂಗಳ ಅವಧಿ ಕಾರ್ಯಕ್ರಮದ ಮೂರು ದಿನಗಳ ಉದ್ಘಾಟನಾ ಸಮ್ಮೇಳನ ಮುಕ್ತಾಯಗೊಂಡಿತು. 10,000ಕ್ಕೂ ಹೆಚ್ಚಿನ ಸಂಖ್ಯೆಯ ಶಿಕ್ಷಣ ತಜ್ಞರು, ಶಿಕ್ಷಕರು ಮತ್ತು ಪೋಷಕರು ಈ ಮೂರು ದಿನಗಳಲ್ಲಿ ಸಮ್ಮೇಳನಕ್ಕೆ ಹಾಜರಾಗಿದ್ದರು.

ಮೂರು ದಿನಗಳ ಈ ಉದ್ಘಾಟನಾ ಸಮ್ಮೇಳನ ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಉದ್ಘಾಟನಾ ಸಂದೇಶದೊಂದಿಗೆ ಆರಂಭವಾಯಿತು. ನಂತರ ಭಾರತದ ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಎನ್‍ಇಪಿ- 2020 ಕುರಿತ ಧ್ವನಿ ಮುದ್ರಿತ ಉಪನ್ಯಾಸ ಪ್ರಸಾರವಾಯಿತು. ಕರ್ನಾಟಕದ ರಾಜ್ಯಪಾಲರಾದ ಥಾವರ್‍ಚಂದ್ ಗೆಹ್ಲೋಟ್ ಅವರು ಅಭಿನಂದನಾ ಸಂದೇಶವನ್ನು ನೀಡಿದ್ದರು.

India is Rethinking the Education System For the Digital Age

ನೀತಿ ರೂಪಿಸುವವರು, ಕೈಗಾರಿಕೆಯ ಪ್ರಮುಖರು, ಚಿಂತನಾ ನಾಯಕರು ಮತ್ತು ಶೈಕ್ಷಣಿಕ ತಜ್ಞರು, ಅಧಿಕಾರಿಗಳು, ಶಿಕ್ಷಣ ಸಂಸ್ಥೆ ಮುಖ್ಯಸ್ಥರು ಮತ್ತು ಉದ್ಯಮಿಗಳು ಈ ಮೂರು ದಿನಗಳ ಉದ್ಘಾಟನಾ ಸಮ್ಮೇಳನದಲ್ಲಿ ಭಾಗವಹಿಸಿದ್ದರು.

ಕೆಲವು ಪ್ರಮುಖ ಭಾಷಣಕಾರರಲ್ಲಿ- ಭಾರತದ ಶಿಕ್ಷಣ ಇಲಾಖೆಯ ರಾಜ್ಯ ಸಚಿವೆ ಅನ್ನಪೂರ್ಣ ದೇವಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಎಲೆಕ್ಟ್ರಾನಿಕ್ ಮತ್ತು ಐಟಿ ಇಲಾಖೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ಬುಡಕಟ್ಟು ವಿದ್ಯಮಾನಗಳ ಗೌರವಾನ್ವಿತ ರಾಜ್ಯ ಸಚಿವೆ ರೇಣುಕ ಸಿಂಗ್, ಎನ್‍ಇಪಿ- 2020 ಕರಡು ರಚನಾ ಸಮಿತಿಯ ಸದಸ್ಯರಾದ ಎಂ.ಕೆ. ಶ್ರೀಧರ್, ಎಐಸಿಟಿಇ ಚೇರ್ಮನ್ ಪ್ರೊಫೆಸರ್ ಅನಿಲ್ ಡಿ ಸಹಸ್ರಬುಧೆ ಉಪಸ್ಥಿತರಿದ್ದರು.

ಎನ್‍ಸಿಇಆರ್‍ಟಿಯ ನಿರ್ದೇಶಕರಾದ ಪ್ರೊಫೆಸರ್ ಶ್ರೀಧರ್ ಶ್ರೀವಾಸ್ತವ, ಸಿಬಿಎಸ್‍ಇ ಕೌಶಲ್ಯ ಮತ್ತು ತರಬೇತಿ ನಿರ್ದೇಶಕರಾದ ಡಾ. ಬಿಸ್ವಜಿತ್ ಸಹಾ, ಎಎಸ್‍ಐಎಸ್‍ಸಿನ ರಾಷ್ಟ್ರೀಯ ಕಾರ್ಯದರ್ಶಿ ಕೆ.ವಿ. ವಿನ್ಸೆಂಟ್, ಶಿಕ್ಷಾಸಂಸ್ಕೃತಿ ಉತ್ಥಾನ್‍ನ ರಾಷ್ಟ್ರೀಯ ಕಾರ್ಯದರ್ಶಿ ಅತುಲ್ ಕೊಠಾರಿ, ಮೈಕ್ರೋಸಾಫ್ಟ್ ಇಂಡಿಯಾದ ಎಜುಕೇಷನ್ ಅಡ್ವಕೆಸಿಯ ನಿರ್ದೇಶಕ ಡಾ. ವಿನ್ನಿ ಜವ್ಹ್‍ರಿ, ನಾಸ್ಕಾಮ್‍ನ ಐಟಿ-ಐಟಿಇಎಸ್ ಕ್ಷೇತ್ರದ ಕೌಶಲ್ಯ ಸಮಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೀರ್ತಿ ಸೇಥ್, ಬಿಬಿಪಿಯ ವಿನ್ಯಾಸ ಮುಖ್ಯಸ್ಥರಾದ ರಾಹುಲ್ ಟಂಡನ್, ಲೈಸೀ ಕಾರ್ಪ್‍ನ ವಿನ್ಯಾಸ ಮುಖ್ಯಸ್ಥರಾದ ರೋಷಿನಿ ಕುಮಾರ್ ಅವರುಗಳು ಹಾಜರಿದ್ದರು.

ಈ ಚರ್ಚೆಗಳ ಕೆಲವು ಪ್ರಮುಖ ಫಲಿತಾಂಶಗಳು ಕೆಳಗಿನಂತಿವೆ:
* ಭಾರತವು ತನ್ನ ಶೈಕ್ಷಣಿಕ ವ್ಯವಸ್ಥೆಯ ಪುನರ್‌ಕಲ್ಪನೆ ಮಾಡಿಕೊಳ್ಳುವ ಅಗತ್ಯವಿದೆ. ಇದುವರೆಗೆ ನಮಗೆ ಉತ್ತಮ ರೀತಿಯಲ್ಲಿ ಸೇವೆ ನೀಡಿದ ಮಾದರಿ ಈಗ ಗತಕಾಲದ್ದಾಗಿದೆ. ನೂತನ ಭವಿಷ್ಯಕ್ಕೆ ಸಿದ್ಧವಾಗಲು ನಮ್ಮ ಮಕ್ಕಳಿಗೆ ಇದು ನೆರವಾಗುವುದಿಲ್ಲ. ಎನ್‍ಇಪಿ(ನೂತನ ಶಿಕ್ಷಣ ನೀತಿ)ಯನ್ನು ದೈನಂದಿನ ಶೈಕ್ಷಣಿಕ ಅಭ್ಯಾಸಗಳಲ್ಲಿ ಅಳವಡಿಸಿಕೊಳ್ಳಬೇಕು.

India is Rethinking the Education System For the Digital Age

* ನಾವು ಮಾಹಿತಿ ಯುಗದ ಅಂತ್ಯದಲ್ಲಿದ್ದೇವೆ ಮತ್ತು ಜ್ಞಾನ ಯುಗವನ್ನು ಪ್ರವೇಶಿಸುತ್ತಿದ್ದೇವೆ. ಮಾಹಿತಿ ಸಂಗ್ರಹವನ್ನು ಆಧರಿಸಿದ ಇದುವರೆಗಿನ ಶೈಕ್ಷಣಿಕ ವ್ಯವಸ್ಥೆ ಬಹಳಷ್ಟು ಅಸಮರ್ಪಕವಾಗಲಿದೆ.

* ಪರೀಕ್ಷಾ ಮಂಡಳಿಗಳು, ವಿಶ್ವವಿದ್ಯಾಲಯಗಳು, ಶಾಲೆಗಳು, ಕಾಲೇಜುಗಳು, ಆಡಳಿತ ಮಂಡಳಿಗಳ ಸದಸ್ಯರು, ಪ್ರಾಂಶುಪಾಲರು, ಶಿಕ್ಷಕರು, ಪೋಷಕರು ಮತ್ತು ಮಾರಾಟಗಾರರನ್ನು ಈ ಶೃಂಗದ ಸಂಘಟಕರು ಸಂಪರ್ಕಿಸಿದ್ದಾರೆ. 10 ದಶಲಕ್ಷ ಶಿಕ್ಷಣ ತಜ್ಞರು ಮತ್ತು ಪೋಷಕರು ಹಾಗೂ 250 ದಶಲಕ್ಷ ವಿದ್ಯಾರ್ಥಿಗಳನ್ನು ತಲುಪಿ ಅವರಿಗೆ ಎನ್‍ಇಪಿ 2022 ಮತ್ತು ನೂತನ ಪೀಳಿಗೆಯ ಕಲಿಕೆ, ಹೈಬ್ರೀಡ್ ಕಲಿಕೆಯ ಬಗ್ಗೆ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ದೃಷ್ಟಿಕೋನವಾಗಿದೆ.

ಎನ್‍ಸಿಇಆರ್‍ಟಿ, ಎಐಸಿಟಿಇ, ಎಎಸ್‍ಐಎಸ್‍ಸಿ, ಎನ್‍ಐಇಎಲ್‍ಐಟಿ, ಕೆನರಾ ಬ್ಯಾಂಕ್, ಯುನಿವರ್ಸಲ್ ಸೊಂಪೊ ಜನರಲ್ ಇನ್‍ಷ್ಯೂರೆನ್ಸ್, ಟೆಲ್ ಅವಂತ್- ಗಾರ್ಡೆ, ಮಹಾ ಲರ್ನಿಂಗ್ ಲ್ಯಾಬ್, ಎಡ್‍ಕಾರ್ಟ್‍ಗಳಿಂದ ಶೃಂಗಕ್ಕೆ ಬೆಂಬಲ ದೊರೆತಿದೆ. ನಾಲೆಡ್ಜ್ ಲಾವೆನೀರ್ ಕಾನ್‍ಕ್ಲೇವ್ ಪ್ಲಾಟ್‍ಫಾರ್ಮ್ ಮೇಲೆ ಈ ಶೃಂಗವನ್ನು ನಡೆಸಲಾಗುತ್ತಿದೆ.

ಭಾರತದ ಶಿಕ್ಷಣ ಇಲಾಖೆಯ ರಾಜ್ಯ ಸಚಿವೆ ಅನ್ನಪೂರ್ಣ ದೇವಿ ಅವರು ಕಾರ್ಯಕ್ರಮದಲ್ಲಿ ಮಾತನಾಡಿ, "ಶಿಕ್ಷಣ ಕ್ಷೇತ್ರದ ವಿಭಿನ್ನ ಮತ್ತು ಪ್ರಮುಖ ಜನರ ಪ್ರತಿಕ್ರಿಯೆಗಳನ್ನು ಅಳವಡಿಸಿಕೊಂಡಿರುವುದರಿಂದ ಎನ್‍ಇಪಿ-2020ಯನ್ನು ಭವಿಷ್ಯದ ಅಗತ್ಯಗಳನ್ನು ಮನಸ್ಸಿನಲ್ಲಿರಿಸಿಕೊಳ್ಳುವಂತೆ ಸಿದ್ಧಪಡಿಸಲಾಗಿದೆ. ಶಿಕ್ಷಣ ಮತ್ತು ಕಲಿಕೆಗಳಲ್ಲಿನ ಬದಲಾಗುತ್ತಿರುವ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು ಇದರ ಚೌಕಟ್ಟು ರಚಿಸಲಾಗಿದೆಯಲ್ಲದೇ ಇದು ಭಾರತವನ್ನು ಮತ್ತಷ್ಟು ಮಹಾನ್ ಎತ್ತರಕ್ಕೆ ಒಯ್ಯಲು ನೆರವಾಗಲಿದೆ," ಎಂದರು.

ಕಾರ್ಯಕ್ರಮದಲ್ಲಿ ಪೋಷಕರನ್ನು ಉದ್ದೇಶಿಸಿ ಮತ್ತು ವಿದ್ಯಾರ್ಥಿಗಳಿಗೆ ಸರಿಯಾದ ಕೌಶಲ್ಯ ನೀಡಿ ಸಜ್ಜುಗೊಳಿಸುವುದರ ಪ್ರಾಮುಖ್ಯತೆ ಬಗ್ಗೆ ಕೌಶಲ್ಯ ಅಭಿವೃದ್ಧಿ, ಎಲೆಕ್ಟ್ರಾನಿಕ್ ಮತ್ತು ಐಟಿ ಇಲಾಖೆಯ ರಾಜ್ಯ ಸಚಿವರಾದ ರಾಜೀವ್ ಚಂದ್ರಶೇಖರ್ ಮಾತನಾಡಿ, "ಜಾಗತೀಕರಣ ಬಹಳಷ್ಟು ಅವಕಾಶಗಳನ್ನು ತರಲಿದೆಯಲ್ಲದೇ, ಇವುಗಳಲ್ಲಿ ಬಹುತೇಕ ಡಿಜಿಟಲ್ ಅವಕಾಶಗಳಾಗಿರುತ್ತವೆ. ಇದು ಬಹಳ ವಿಭಿನ್ನ, ಬಹಳ ಸಕಾರಾತ್ಮಕ ಮತ್ತು ಬಹಳಷ್ಟು ಡಿಜಿಟಲ್ ಆಗಿರಲಿದೆ. ಈ ಬಗ್ಗೆ ಪ್ರತಿಯೊಬ್ಬ ಪೋಷಕರು ಜಾಗೃತಿ ಹೊಂದಿರಬೇಕಲ್ಲದೇ, ಪ್ರತಿ ಪೋಷಕರು ತಮ್ಮ ಮಕ್ಕಳನ್ನು ಇದಕ್ಕಾಗಿ ಸಿದ್ಧಗೊಳಿಸಬೇಕು," ಎಂದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾರತದ ಬುಡಕಟ್ಟು ವಿದ್ಯಮಾನಗಳ ರಾಜ್ಯ ಸಚಿವ ರೇಣುಕ ಸಿಂಗ್ ಮಾತನಾಡಿ, "ಹೆಚ್ಚು ಶಿಕ್ಷಿತ, ಅರ್ಥಪೂರ್ಣ, ಉದ್ದೇಶಪೂರ್ವಕ, ಸೌಹಾರ್ದಯುತ ಮತ್ತು ಕರುಣಾಪೂರ್ಣ ಸಮಾಜವನ್ನು ಸೃಷ್ಟಿಸುವ ಆಶಯದಲ್ಲಿ ನಾಲೆಡ್ಜ್ ಲಾವೆನೀರ್ ಮುಂಚೂಣಿಯಲ್ಲಿ ಹೊರಹೊಮ್ಮಿದೆ. ಎನ್‍ಇಪಿ 2022 ಜೊತೆಗೆ ಡಿಜಿಟಲ್ ಪರಿವರ್ತನೆ ಮತ್ತು ಸಂಪೂರ್ಣ ಕಲಿಕೆಗಳ ಬಗ್ಗೆ ಗಮನ ಕೇಂದ್ರೀಕರಿಸಿದ ವೈವಿಧ್ಯಪೂರ್ಣ ಅಧಿವೇಶನಗಳನ್ನು ಶೃಂಗ ಹೊಂದಿರಲಿದೆ," ಎಂದರು.

ನೂತನ ಶಿಕ್ಷಣ ಮಾದರಿಯನ್ನು ಕುರಿತು ಎನ್‍ಸಿಇಆರ್‍ಟಿಯ ನಿರ್ದೇಶಕರಾದ ಶ್ರೀಧರ್ ಶ್ರೀವಾಸ್ತವ ಮಾತನಾಡಿ, "ಮುಂದಿನ ದಿನಗಳಲ್ಲಿ ಶಿಕ್ಷಣ ಹೊಸತನ್ನು ಅಳವಡಿಸಿಕೊಳ್ಳುವಂತಿರಬೇಕು. ಅದಕ್ಕೆ ಮೂರು ಮುಖ್ಯ ಅಂಶಗಳ ಅಗತ್ಯವಿರುತ್ತದೆ. ಅವುಗಳಲ್ಲಿ- ಸಡಿಲತೆ, ಸುಲಭ ಸಂಪರ್ಕ ಹೊಂದಿರುವುದು ಮತ್ತು ವೈಯಕ್ತಿಕ ಅಗತ್ಯಗಳಿಗೆ ತಕ್ಕಂತಿರುವುದು ಸೇರಿವೆ," ಎಂದರು.

ಚಿನ್ಮಯ ಮಿಷನ್‌ನ ಸ್ವಾಮಿ ಮಿತ್ರಾನಂದ ಸೇರಿದಂತೆ ಚಿಂತನಾ ನಾಯಕರನ್ನೂ ಈ ಕಾರ್ಯಕ್ರಮ ಒಳಗೊಂಡಿದ್ದು, ಅವರು ಕಾರ್ಯಕ್ರಮದ ಚಿಂತನೆಯ ಬಗ್ಗೆ ಮಾತನಾಡಿ, "ವಸುದೈವ ಕುಟುಂಬಕಂ ಎಂಬ ಶೀರ್ಷಿಕೆಯೇ ನಮಗೆ ಸ್ಫೂರ್ತಿ ನೀಡುತ್ತದೆ. ನಾವು ಭಾರತದ ಜನರು ಈ ಜ್ಞಾನದ ಪಾಲಕರಾಗಿದ್ದೇವೆ," ಎಂದರು.

ಸಮಿಟ್ ಇಂಡಿಯಾದ ಚೇರ್ಮನ್ ಶ್ಯಾಮ್ ಜಾಜು ಈ ಶೃಂಗದ ರಚನೆ ಕುರಿತು ಮಾತನಾಡಿ, "ಮೈಲುಗಲ್ಲಾದಂತಹ ಈ ಕಾರ್ಯಕ್ರಮವನ್ನು ಓಮಿಕ್ರಾನ್‍ನಿಂದಾಗಿ ವರ್ಚುವಲ್ ರೀತಿಯಲ್ಲಿ ನಡೆಸಲಾಗುತ್ತಿದೆ ಎಂಬ ವಾಸ್ತವವು, ಸಾಂಕ್ರಾಮಿಕದ ಶಕ್ತಿಯನ್ನು ಸೂಚಿಸುತ್ತದೆ. ತಮ್ಮ ಸಮಯವನ್ನು ನೀಡಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅದನ್ನು ದೊಡ್ಡ ಯಶಸ್ಸನ್ನಾಗಿಸಿದ ಎಲ್ಲ ನಮ್ಮ ಗಣ್ಯರು, ಶಿಕ್ಷಣ ಪರಿಣತರು, ಕುಲಪತಿಗಳಿಗೆ ನಾನು ವಂದಿಸುತ್ತೇನೆ,'' ಎಂದು ತಿಳಿಸಿದರು.

ಸಮಿಟ್ ಇಂಡಿಯಾದ ಕಾರ್ಯದರ್ಶಿ ಮಹೇಶ್ ವರ್ಮಾ ಮಾತನಾಡಿ, "ಶಿಕ್ಷಣ ಕ್ಷೇತ್ರದಲ್ಲಿ ನಾವು ಕಾಣುತ್ತಿರುವ ಬದಲಾವಣೆಗಳಿಗೆ ಎನ್‍ಇಪಿ 2020ಯ ದೃಷ್ಟಿಕೋನ ಸೂಕ್ತವಾಗಿದೆ. ಕನಿಷ್ಠ ಸಮಯದಲ್ಲಿ ಗರಿಷ್ಠ ಸಂಖ್ಯೆಯ ಜನರನ್ನು ತಲುಪಿದಾಗ ಮತ್ತು ಜಾಗೃತಿ ಸೃಷ್ಟಿಸಿದಾಗ ಇದರ ನೈಜ ಪರಿಣಾಮದ ಅರಿವಾಗಲಿದೆ. ಇದನ್ನು ಸಾಧಿಸಲು ಮೂರು ತಿಂಗಳ ಅವಧಿಯ ಶೃಂಗ ನಮಗೆ ನೆರವಾಗಲಿದೆ ಎಂದು ನಾವು ಭಾವಿಸಿದ್ದೇವೆ,'' ಎಂದರು.

ಹಲವಾರು ಶೈಕ್ಷಣಿಕ ಸಂಸ್ಥೆಗಳು, ಶಿಕ್ಷಣ ತಜ್ಞರು, ಶಿಕ್ಷಕರು ಮತ್ತು ಪೋಷಕರ ಜನಪ್ರಿಯ ಬೇಡಿಕೆಯಿಂದಾಗಿ ಮೂರು ದಿನಗಳ ಉದ್ಘಾಟನಾ ಸಮ್ಮೇಳನವನ್ನು ಜನವರಿ 27, 28, 29ರಂದು ವೆಬ್‍ಚ್ಯಾಸ್ಟ್ ಮೂಲಕ ಪುನರ್ ಪ್ರಸಾರ ಮಾಡಲಾಗುವುದು.

ಹೈಬ್ರೀಡ್ ಕಲಿಕೆ ಮತ್ತು ತಂತ್ರಜ್ಞಾನದ ಪಾತ್ರ ಕುರಿತು ಟೆಕ್ ಅವಂತ್-ಗಾರ್ಡೆನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಲಿ ಸೇಠ್ ಮಾತನಾಡಿ, ""ವಸುದೈವ ಕುಟುಂಬಕಂ- ವರ್ಚುವಲ್‍ಎಜುಕೇಷನ್ ಸಮಿಟ್ 2022' ಈ ರೀತಿಯ ಒಂದು ಉಪಕ್ರಮವಾಗಿದ್ದು, ಹೈಬ್ರೀಡ್ ಕಲಿಕೆ ಮತ್ತು ಎನ್‍ಇಪಿ 2020 ಕುರಿತು ಇದು ಜಾಗೃತಿ ಹರಡಲಿದೆ. ಅಲ್ಲದೆ, ಇದು ನಮ್ಮ ಸಮಾಜವನ್ನು ಭವಿಷ್ಯಕ್ಕೆ ಸಿದ್ಧಮಾಡಲು ಹಾಗೂ ಶಿಕ್ಷಣ ಕುರಿತು ಪುನರ್ ಕಲ್ಪನೆ ಮೂಡಲು ನೆರವಾಗಲಿದೆ,'' ಎಂದರು.

ಶೃಂಗಕ್ಕೆ ನೋಂದಣಿ ಮಾಡಿಕೊಳ್ಳಲು ಮತ್ತು ಚರ್ಚೆಗಳಲ್ಲಿ ಭಾಗವಹಿಸಲು ಅಥವಾ ಮಾಹಿತಿಗಳಿಗಾಗಿ ಸಂದರ್ಶಿಸಿ: https://vasudhaivakutumbakam.live/

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+