Independence Day 2023: ಇಬ್ಬರು IPS ಅಧಿಕಾರ ಸೇರಿ ಕರ್ನಾಟಕದ 20 ಪೊಲೀಸರಿಗೆ 'ರಾಷ್ಟ್ರಪತಿ ಪದಕ' ಘೋಷಣೆ
ಬೆಂಗಳೂರು, ಆಗಸ್ಟ್ 14: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ನೀಡಿದ ಇಬ್ಬರು ಐಪಿಎಸ್ ಅಧಿಕಾರಿಗಳು ಸೇರಿದಂತೆ ರಾಜ್ಯದ ಒಟ್ಟು 20 ಮಂದಿಗೆ 'ರಾಷ್ಟ್ರಪತಿ ಪದಕ' ಘೋಷಣೆಯಾಗಿದೆ. ಈ ಅಧಿಕಾರಿಗಳು ನಾಳೆ 77ನೇ ಸ್ವಾತಂತ್ರ್ಯ ಸಂಭ್ರಮಾಚರಣೆಯಲ್ಲಿ ಪದಕ ಸ್ವೀಕರಿಸಲಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವು ಸಹ 20ಮಂದಿಗೆ ರಾಷ್ಟ್ರಪತಿ ಪದಕ ಕೊಟ್ಟು ಗೌರವಿಸಲಾಗುತ್ತದೆ. ಇದರಲ್ಲಿ ಇಬ್ಬರು ಐಪಿಎಸ್ ಅಧಿಕಾರಿಗಳಾದ ಸೀಮಂತ್ ಕುಮಾರ್ ಸಿಂಗ್ (ADGP) ಹಾಗೂ ಎಸ್.ಮುರುಗನ್ (ADGP) ಅವರಿಗೆ 'ರಾಷ್ಟ್ರಪತಿ ಪದಕ' ಮತ್ತು 18 ಮಂದಿ ಪೊಲೀಸ್ ಅಧಿಕಾರಿಗಳಿಗೆ 'ವಿಶಿಷ್ಟ ಸೇವಾ ಪದಕ' ಗೌರವಕ್ಕೆ ಭಾಜನರಾಗಿದ್ದಾರೆ.

'ವಿಶಿಷ್ಟ ಸೇವಾ ಪದಕ'ಕ್ಕೆ ಆಯ್ಕೆಯಾದವರ ಪಟ್ಟಿ
* ಸಂದೀಪ್ ಪಾಟೀಲ್, (IGP)
* ಬಿ ಎಸ್ ಮೋಹನ್ ಕುಮಾರ್, (DVSP)
* ರಾಘವೇಂದ್ರ ಹೆಗ್ಡೆ , (SP)
* ಜಗದೀಶ್ ಹೆಚ್.ಎಸ್., (ACP)
* ಕೇಶವಮೂರ್ತಿ ಗೋಪಾಲಯ್ಯ, (DSP)
* ನಾಗರಾಜ್, (ACP)
* ಶಿವಶಂಕರ್, ಅಸಿಸ್ಟೆಂಟ್ ಡೈರೆಕ್ಟರ್
* ಭೀಮಾರಾವ್ ಗಿರೀಶ್, (SP)
* ನಾಗಯ್ಯ ನಾಗರಾಜು, (DSP)
* ಬಿ.ಎನ್ ಶ್ರೀನಿವಾಸ್, (DSP)
* ಅಂಜುಮಾಲ ನಾಯ್ಕ್, (DVSP)
* ಅನಿಲ್ ಕುಮಾರ್ ಪ್ರಭಾಕರ್, ಪೊಲೀಸ್ ಇನ್ಸ್ಪೆಕ್ಟರ್
* ಅಶೋಕ್ ಆರ್.ಪಿ, ಪೊಲೀಸ್ ಇನ್ಸ್ಪೆಕ್ಟರ್
* ಕೆ.ವೆಂಕಟೇಶ್, ಹೆಡ್ ಕಾನ್ಸ್ಟೇಬಲ್
* ಕುಮಾರ್, ಸಹಾಯಕ ಮುಖ್ಯ ಪೇದೆ
* ವಿ.ಬಂಗಾರು, (KSRP)
* ರಾಮಪ್ಪ ಗುತ್ತೇರ್, ಪೊಲೀಸ್ ಇನ್ಸ್ಪೆಕ್ಟರ್
* ಶಂಕರ್, ಹೆಡ್ ಕಾನ್ಸ್ಟೇಬಲ್












Click it and Unblock the Notifications