ಅರಣ್ಯ ಪ್ರದೇಶ ಪ್ರಮಾಣ ಹೆಚ್ಚಾದ ರಾಜ್ಯಗಳ ಪೈಕಿ ಕರ್ನಾಟಕ ನಂಬರ್ 2

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 13: ಈ ರೀತಿಯ ಖುಷಿಯ ಸುದ್ದಿ ಅಪರೂಪ. ಏನಂತ ಸುದ್ದಿ ಅಂತೀರಾ? ಕಳೆದ ಎರಡು ವರ್ಷದಲ್ಲಿ ರಾಜ್ಯದಲ್ಲಿ ಅರಣ್ಯ ಪ್ರದೇಶದ ಪ್ರಮಾಣ ಹೆಚ್ಚಿದೆ. ನಿರ್ದಿಷ್ಟವಾಗಿ ಹೇಳಬೇಕು ಅಂದರೆ, ಎರಡು ವರ್ಷಗಳಲ್ಲಿ ಕರ್ನಾಟಕದ ಅರಣ್ಯ ಪ್ರದೇಶ 1,101 ಕಿ.ಮೀ.ಗಳಷ್ಟು ಹಿಗ್ಗಿದೆ.

ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ಭಾರತದಲ್ಲೇ ಅರಣ್ಯ ಮತ್ತು ಮರಗಳಿಂದ ಕೂಡಿದ ಪ್ರದೇಶ ಶೇ 1ರಷ್ಟು ಹೆಚ್ಚಿದೆ ಎಂಬ ಅಂಶವನ್ನು ಭಾರತದ ಅರಣ್ಯ ಸ್ಥಿತಿಗತಿ ವರದಿ 2017ರಲ್ಲಿ ಬಹಿರಂಗವಾಗಿದೆ. 1987ನೇ ಇಸವಿಯಿಂದ ಆರಂಭಗೊಂಡು ಪ್ರತಿ ಎರಡು ವರ್ಷಗಳಿಗೊಮ್ಮೆ ಈ ವರದಿ ಸಿದ್ಧಪಡಿಸಲಾಗುತ್ತಿದೆ.

ಪೊಲೀಸ್ ಇಲಾಖೆ ಮಾದರಿಯಲ್ಲಿ ಅರಣ್ಯ ಇಲಾಖೆಯಿಂದ ಪ್ರಶಸ್ತಿ : ರೈ

ಅಂದರೆ 2015ನೇ ಇಸವಿಗೆ ಹೋಲಿಸಿದರೆ 2017ರಲ್ಲಿ ಅರಣ್ಯ ಮತ್ತು ಮರಗಳು ಒಳಗೊಂಡ ಪ್ರದೇಶ ಏರಿಕೆ ಆಗಿರುವುದು ಕಂಡುಬಂದಿದೆ. ಇಲ್ಲಿ ಮತ್ತೂ ಆಸಕ್ತಿಕರ ಅಂಶ ಏನೆಂದರೆ, ಜಾಗತಿಕ ಮಟ್ಟಕ್ಕೆ ಹೋಲಿಸಿದರೆ ಅರಣ್ಯಪ್ರದೇಶದ ಪ್ರಮಾಣ ಒಂದು ದಶಕದಿಂದಲೇ ಏರಿಕೆ ಆಗಿಲ್ಲ. ಆದರೆ ಕಾಡು ಪ್ರದೇಶ ಪ್ರಮಾಣ ಹೆಚ್ಚಳ ಆಗುತ್ತಿರುವ ಹತ್ತು ದೇಶಗಳ ಪಟ್ಟಿ ಮಾಡಿದರೆ ಅದರಲ್ಲಿ ಭಾರತ ಕೂಡ ಇದೆ ಎಂಬುದನ್ನು ಕೇಂದ್ರ ಪರಿಸರ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.

Increase in forest area, Karnataka number 2 among top states

ಅರಣ್ಯ ಪ್ರದೇಶ ಪ್ರಮಾಣ ಹೆಚ್ಚಾಗಿರುವ ಐದು ರಾಜ್ಯಗಳು

* ಆಂಧ್ರಪ್ರದೇಶ

* ಕರ್ನಾಟಕ

* ಕೇರಳ

* ಒಡಿಶಾ

* ತೆಲಂಗಾಣ

ಅರಣ್ಯ ಪ್ರದೇಶ ಪ್ರಮಾಣ ಕಡಿಮೆ ಆಗಿರುವ ಐದು ರಾಜ್ಯಗಳು

* ಮಿಜೋರಾಂ

* ನಾಗಾಲ್ಯಾಂಡ್

* ಅರುಣಾಚಲ ಪ್ರದೇಶ

* ತ್ರಿಪುರಾ

* ಮೇಘಾಲಯ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Forest area increased in Karnataka by 1,101 KM's. Information revealed by report. Andhra, Kerala, Odisha and Telangana are other states where forest area increased.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ