ಡಿಕೆ ಶಿವಕುಮಾರ್ ಸಂಬಂಧಿ ಮನೆ ಮೇಲೆ ಐಟಿ ದಾಳಿ

ಕನಕಪುರದಲ್ಲಿ ಡಿಕೆ ಶಿವಕುಮಾರ್ ಅವರ ಸಮೀಪ ಬಂಧುವಿನ ಮನೆಯ ಮೇಲೆ ಅಧಿಖಾರಿಗಳು ಇಂದು ಬೆಳಗ್ಗೆ ದಾಳಿ ನಡೆಸಿ, ವ್ಯಾಪಕ ಶೋಧದಲ್ಲಿ ನಡೆಸಿದ್ದಾರೆ. (ಮಂತ್ರಿ ಆಗ್ತೀನಿ ಅಂತ ಊಟಕ್ಕೆ ಕುಳಿತ ಡಿಕೆ ಶಿವಕುಮಾರ್)
ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಹೂಕುಂದ ಗ್ರಾಮದಲ್ಲಿರುವ ಡಿಕೆ ಶಿ ಸಂಬಂಧಿ ಕಾಂತರಾಜ್ ಅವರ ಮನೆಯ ಮೇಲೆ 15ಕ್ಕೂ ಹೆಚ್ಚು ಅಧಿಕಾರಿಗಳು ಇಂದು ಬೆಳಗ್ಗೆ 7 ಗಂಟೆಯಲ್ಲಿ ದಾಳಿ ನಡೆಸಿದ್ದಾರೆ. ದಾಳಿ ಇನ್ನೂ ಮುಂದುವರಿದಿದ್ದು, ಇತರೆ ಸ್ಥಳೀಯ ನಾಯಕರ ಮನೆಗಳ ಮೇಲೂ ಐಟಿ ದಾಳಿ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.
ಕನಕಪುರ ಶಾಸಕ ಡಿಕೆ ಶಿವಕುಮಾರ್ ಮತ್ತು ಅವರ ಸೋದರ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿಕೆ ಸುರೇಶ್ ಅವರ ಬಹಳಷ್ಟು ವ್ಯವಹಾರಗಳನ್ನು ನೋಡಿಕೊಳ್ಳುವವರು ಇದೇ ಕಾಂತರಾಜ್ ಎಂದು ತಿಳಿದುಬಂದಿದೆ.












Click it and Unblock the Notifications