ಬೆಂಗಳೂರು,ದಾವಣಗೆರೆ ಮತ್ತು ಮೈಸೂರಿನಲ್ಲಿ ಗುತ್ತಿಗೆದಾರರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು ದಾಖಲಾತಿ ಇಲ್ಲದ 4.01 ಕೋಟಿ ನಗದನ್ನು ವಶಪಡಿಸಿಕೊಂಡಿದ್ದಾರೆ.
ಗುತ್ತಿಗೆದಾರರ ಮನೆಗಳಲ್ಲಿ ನಗದಿನ ಜೊತೆಗೆ 2.20 ಕೋಟಿ ಮೌಲ್ಯದ ಚಿನ್ನಾಭರಣಗಳೂ ಪತ್ತೆಯಾಗಿದ್ದು, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುತ್ತಿಗೆದಾರರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
More visuals of unaccounted cash of Rs. 4.01 crore & unaccounted jewellery worth Rs. 2.20 crore seized by Income Tax Department. Searches initiated on 3 contractors in Bengaluru, Davanagere & Mysore pic.twitter.com/QWobrxLnvA
ಬೆಂಗಳೂರು, ಮೈಸೂರು, ದಾವಣಗೆರೆಯ ಗುತ್ತಿಗೆದಾರರ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಿದ ಆದಾಯ ತೆರಿಗೆ ಅಧಿಕಾರಿಗಳು ಹಲವು ಗಂಟೆಗಳ ಕಾಲ ಶೋಧ ನಡೆಸಿ ನಗದು ಮತ್ತು ಚಿನ್ನಾಭರಣ ಪತ್ತೆ ವಶ ಪಡಿಸಿಕೊಂಡಿದ್ದಾರೆ.
ಚುನಾವಣೆ ಸಮೀಪವಾಗುತ್ತಿದ್ದಂತೆ ಕರ್ನಾಟಕದಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಹೆಚ್ಚು ಮಾಡಿದ್ದು ಹಲವು ರಾಜಕೀಯ ಮುಖಂಡರು ಮತ್ತು ಅವರ ಬೆಂಬಲಿಗರ ಮನೆಗಳ ಮೇಲೂ ದಾಳಿಗಳು ನಡೆಯುತ್ತಿವೆ. ಇತ್ತೀಚೆಗಷ್ಟೆ ಸಚಿವ ಮಹದೇವಪ್ಪ ಅವರ ಮನೆ ಮೇಲೆ ಐಟಿ ದಾಳಿ ಆಗಿದೆಯೆಂಬ ಸುದ್ದಿ ಹರಡಿತ್ತು ಆದರೆ ಅದು ಸುಳ್ಳೆಂದು ಮಹದೇವಪ್ಪ ಹೇಳಿದ್ದರು.
Income tax officers today raid on three contracters in Bengaluru, Davangere, Mysuru. IT officers sized un accounted 4.01 crore rupees cash and 2.20 crore value gold.