ಅಂಕಿಅಂಶ: ಸಾಮಾಜಿಕ, ಮೂಲಭೂತ ಸೌಕರ್ಯದಲ್ಲಿ ಹಿಂದಕ್ಕೆ ಸರಿಯುತ್ತಿರುವ ಕರ್ನಾಟಕ
ಬರೀ ಭಾರತವಲ್ಲದೇ ಏಷ್ಯಾ ಖಂಡದ ಮಾಹಿತಿ ತಂತ್ರಜ್ಞಾನದ ರಾಜಧಾನಿಯಂತಿರುವ ಬೆಂಗಳೂರು ಮತ್ತು ಕರ್ನಾಟಕ ಹಲವು ವಿಚಾರಗಳಲ್ಲಿ ಬಹಳಷ್ಟು ಸುಧಾರಣೆಯನ್ನು ಕಾಣಬೇಕಿದೆ ಎನ್ನುವ ಅಂಕಿಅಂಶವೊಂದು ಹೊರಬಿದ್ದಿದೆ. ಆರ್ಥಿಕ, ಸಾಮಾಜಿಕ ಸುಧಾರಣೆ ಮತ್ತು ಪರಿಸರಕ್ಕೆ ಸಂಬಂಧಿಸಿದಂತೆ ಕರ್ನಾಟಕ, ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಪಟ್ಟಿಯಲ್ಲಿ ಕೆಳಗಿನ ಸ್ಥಾನದಲ್ಲಿದೆ.
2015-16 ಮತ್ತು 2019-21ರ ಆರ್ಥಿಕ ವರ್ಷಕ್ಕೆ ಹೋಲಿಸಿದರೆ, ಕರ್ನಾಟಕದ ಜಿಡಿಪಿ ( per capita GDP) ಏರುತ್ತಿದ್ದರು ಕೂಡಾ ಅದು ಶೈಕ್ಷಣಿಕ, ಆರೋಗ್ಯ ಕ್ಷೇತ್ರ ಮತ್ತು ಮೂಲಭೂತ ಸೌಕರ್ಯ ಕ್ಷೇತ್ರದಲ್ಲಿನ ಸುಧಾರಣೆಯಲ್ಲಿ ಹೆಚ್ಚಿನ ಬದಲಾವಣೆ ಏನೂ ಕಾಣುತ್ತಿಲ್ಲ ಎಂದು 'ದಿ ಹಿಂದೂ' ಪತ್ರಿಕೆ ಅಂಕಿಅಂಶದೊಂದಿಗೆ ವರದಿ ಮಾಡಿದೆ.

ಕೇರಳ, ಹಿಮಾಚಲ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ಅಂಕಿಅಂಶದ ಜೊತೆಗೆ ಕರ್ನಾಟಕದ ಡೇಟಾ ತುಲನೆ ಮಾಡಿದಾಗ, ರಾಜ್ಯ ಭಾರೀ ಸುಧಾರಣೆಯನ್ನು ಕಾಣಬೇಕಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಮಕ್ಕಳ ಪೌಷ್ಠಿಕತೆಯ ವಿಚಾರದಲ್ಲಿ ರಾಜ್ಯ 24ನೇ (24 out of 30) ಸ್ಥಾನದಲ್ಲಿದೆ. 2005-06ರಲ್ಲಿ ರಾಜ್ಯ ಹದಿನಾರನೇ ಸ್ಥಾನದಲ್ಲಿತ್ತು.
ಹದಿನೆಂಟು ವರ್ಷ ತುಂಬುವ ಮುನ್ನವೇ ವಿವಾಹವಾಗುವರ ಸಂಖ್ಯೆಯಲ್ಲಿ ತುಸು ಬದಲಾವಣೆಯಾಗಿದೆ. ಇನ್ನು, ಗೃಹಿಣಿಯರ ಹೆಲ್ತ್ ಇನ್ಸೂರೆನ್ಸ್ ವಿಚಾರದಲ್ಲಿ ಮೂರನೇ ಸ್ಥಾನದಲ್ಲಿದ್ದ (2005-06) ರಾಜ್ಯ 2019-21ರಲ್ಲಿ ಇಪ್ಪತ್ತನೇ ಸ್ಥಾನಕ್ಕೆ ಇಳಿದಿದೆ. ಮರಣದ ಪ್ರಮಾಣವೂ 2015-16ರಲ್ಲಿ ಎಂಟನೇ ಸ್ಥಾನದಲ್ಲಿದ್ದ ರಾಜ್ಯ 2019-21ರಲ್ಲಿ ಹದಿಮೂರನೇ ಸ್ಥಾನಕ್ಕೆ ಏರಿದೆ.
ಈ ಸಂಬಂಧ, ಪತ್ರಿಕೆ ಪಬ್ಲಿಷ್ ಮಾಡಿರುವ ಅಂಕಿಅಂಶದ ಪಟ್ಟಿ ಈ ರೀತಿಯಿದೆ:
| ಕ್ರಮ ಸಂಖ್ಯೆ | ಸೂಚಕ | ಎಷ್ಟನೇ ಸ್ಥಾನ (2005-06) | ಎಷ್ಟನೇ ಸ್ಥಾನ (2015-16) |
| 1 | 18 ತುಂಬವ ಮುನ್ನ ಮದುವೆಯಾದ ಮಹಿಳೆಯರು | 20 | 18 |
| 2 | ಶಿಶು ಮರಣ ಪ್ರಮಾಣ | 14 | 8 |
| 3 | ಮಕ್ಕಳ ಅಪೌಷ್ಠಿಕತೆ | 16 | 21 |
| 4 | ಕಡಿಮೆ ತೂಕ ಹೊಂದಿರುವ ಮಕ್ಕಳು | 15 | 22 |
| 5 | ವಿಮೆ ಹೊಂದಿರುವವರು (ಮನೆಯವರು) | 3 | 13 |
| 6 | ಸುಧಾರಿತ ನೈರ್ಮಲ್ಯ ಸೌಲಭ್ಯ ಬಳಸುವವರು | -- | 15 |
| 7 | ಶಾಲೆಗೆ ಎಂದೂ ಹೋಗದ ಮಹಿಳೆಯರು | 18 | 28 |












Click it and Unblock the Notifications