ಕರ್ನಾಟಕದ ರಾಜಕಾರಣಿಗಳ ಯೋಗಾಸನ ಭಾವ ಭಂಗಿ
ಬೆಂಗಳೂರು, ಜೂನ್ 21:ವಿಧಾನಸೌಧದ ಮುಂಭಾಗ, ಶಾಸಕರ ಭವನ ಮತ್ತು ಕಂಠೀರವ ಕ್ರೀಡಾಂಗಣದಲ್ಲಿ 3ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂಭ್ರಮ ಕಂಡು ಬಂದಿದೆ.
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶಾಸಕರ ಭವನದಲ್ಲಿ ಪಕ್ಷಭೇದ ಮರೆತು ಶಾಸಕರು ಯೋಗಾಭ್ಯಾಸ ನಡೆಸಿದರು. ಶಾಸಕರ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಮ್ಮ ರಾಜಕಾರಣಿಗಳ ವಿವಿಧ ಯೋಗಾಸನ ಭಂಗಿಗಳ ಚಿತ್ರಗಳು ಇಲ್ಲಿವೆ.
ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ, ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ವಿಧಾನಪರಿಷತ್‍ನ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಶಾಸಕರಾದ ಬಸವರಾಜಹೊರಟ್ಟಿ, ಸಿ.ಟಿ.ರವಿ, ಕೋನರೆಡ್ಡಿ, ಜಯಮ್ಮ, ವೀಣಅಚ್ಚಯ್ಯ ಸೇರಿದಂತೆ ಸುಮಾರು 35ಕ್ಕೂ ಹೆಚ್ಚು ಶಾಸಕರು ಭಾಗವಹಿಸಿದ್ದರು.
ಬಿಜೆಪಿಯ ಸಿ.ಟಿ ರವಿ, ತಾರಾ ಅನುರಾಧ ಅವರು ಬೆಳಗ್ಗೆ 6 ಗಂಟೆಯಿಂದ ನಗರದ ವಿವಿಧ ಭಾಗಗಳಲ್ಲಿ ಯೋಗ ಕಾರ್ಯಕ್ರಮಗಳಲ್ಲಿ ತೊಡಗಿದ್ದಾರೆ.

ಕುರ್ಚಿಯಲ್ಲೇ ಕುಳಿತ ಸಭಾಪತಿ
ಶಾಸಕರ ಸಮ್ಮೇಳನ ಸಭಾಂಗಣದಲ್ಲಿ ಸ್ಪೀಕರ್ ಕೋಳಿವಾಡ ಅವರು ಪೂರ್ಣಪ್ರಮಾಣದಲ್ಲಿ ಯೋಗಭ್ಯಾಸದಲ್ಲಿ ತೊಡಗಿಕೊಳ್ಳಲುಸಾಧ್ಯವಾಗದೆ ಕುರ್ಚಿಯಲ್ಲೇ ಕುಳಿತು ಸುಲಭ ಸಾಧ್ಯವಾದ ಆಸನಗಳನ್ನು ಮಾಡಿದರು. ಯೋಗ ಗುರು ನಾಗರಾಜ್ ಅವರು ಯೋಗಾಸನಾಗಳ ಕುರಿತು ಮಾರ್ಗದರ್ಶನ ನೀಡಿದರು.

ಪ್ರತಿಪಕ್ಷದ ನಾಯಕ ಜಗದೀಶ್‍ಶೆಟ್ಟರ್
ಪ್ರಧಾನಿ ನರೇಂದ್ರ ಮೋದಿ ಅವರು ಮುತುವರ್ಜಿಯಿಂದಾಗಿ ಇಂದು ಯೋಗಕ್ಕೆ ವಿಶ್ವಮಾನ್ಯತೆ ಸಿಕ್ಕಿದೆ. ಭಾರತದ ಮೂಲ ಕಲೆಯಾದ ಯೋಗವನ್ನು 176 ದೇಶಗಳು ಒಪ್ಪಿಕೊಳ್ಳುವ ಮೂಲಕ ಅನುಸರಿಸುತ್ತಿವೆ. ಅಷ್ಟೂ ದೇಶಗಳಲ್ಲಿ ಇಂದು ಯೋಗ ದಿನಾಚರಣೆ ನಡೆಯುತ್ತಿದೆ. ಇದಕ್ಕೆ ಪ್ರಧಾನಿ ಮೋದಿ ಅವರಿಗೆ ಭಾರತ ಅಭಿನಂದನೆ ಸಲ್ಲಿಸುತ್ತದೆ ಎಂದು ಹೇಳಿದರು.

ಜೂನ್ 21 ರಂದು ಯೋಗ ದಿನಾಚರಣೆ ಏಕೆ?
ಜೂನ್ ತಿಂಗಳಲ್ಲಿ ಸೂರ್ಯನ ನಿಖರತೆ ಒಂದೊಂದು ಪ್ರದೇಶಕ್ಕೆ ಒಂದೊಂದು ರೀತಿಯಾಗಿರುತ್ತದೆ. ಆದರೂ ಈ ಜೂನ್ ನಲ್ಲಿ ಅನೇಕ ರಾಷ್ಟ್ರಗಳಲ್ಲಿ ಜಡತ್ವ ಕಳೆದು ಹೊಸ ಹುರುಪು ತುಂಬುವ ಕಾಲ.ಇದು ಇಷ್ಟೆ ಅಲ್ಲದೆ ಜೂನ್ 21 ಅತ್ಯಂತ ಧೀರ್ಘಕಾಲ ಹಗಲು ಹೊಂದಿರುವ ದಿನವಾದ್ದರಿಂದ ಈ ದಿನವನ್ನು ಆಯ್ಕೆ ಮಾಡಲಾಗಿದೆ.
ಯೋಗ ಪ್ರದರ್ಶನಗಳನ್ನು, ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಸಾರ್ವಜನಿಕವಾಗಿ ಆಚರಿಸಲಾಗುತ್ತದೆ. ಚಿತ್ರದಲ್ಲಿ : ವರನಟ ಡಾ.ರಾಜ್ ಕುಮಾರ್.

ವಿಶ್ವ ಯೋಗ ದಿನಾಚರಣೆ
2014ರ ಸಪ್ಟೆಂಬರ್ 27ರಂದು ವಿಶ್ವಸಂಸ್ಥೆ ವಿಶ್ವ ಯೋಗ ದಿನಾಚರಣೆಯನ್ನು ಘೋಷಿಸಿತು. ಭಾರತದ ಪ್ರಾಚೀನ ಕಲೆ ಯೋಗಕ್ಕೆ ಈ ಘೋಷಣೆಯ ಮೂಲಕ ಅಂತಾರಾಷ್ಟ್ರೀಯ ಮಾನ್ಯತೆ ದೊರಕಿತು. ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳು ಪೈಕಿ 177 ರಾಷ್ಟ್ರಗಳು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಸ್ತಾವನೆಯನ್ನು ಬೆಂಬಲಿಸಿದ್ದವು. ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ಲಂಡನ್ ಐಪಿಎಲ್ ಟವರ್ ಮುಂದೆ ಯೋಗ ಪ್ರದರ್ಶನ ನಡೆಸಲಾಗಿತ್ತು. ನವದೆಹಲಿಯ ರಾಜಪಥ್ ನಲ್ಲಿ 36 ಸಾವಿರ ಜನರ ಸಾಮೂಹಿಕ ಯೋಗ ಪ್ರದರ್ಶನವನ್ನು ನಡೆಸಿದರು. ಚಿತ್ರದಲ್ಲಿ : ಯೋಗ ನಿರತ ದೇವೇಗೌಡ, ಶಾಸಕರು, ಯಡಿಯೂರಪ್ಪ

ಬಿ.ಎಸ್.ಯಡಿಯೂರಪ್ಪ
ಬಿ.ಎಸ್.ಯಡಿಯೂರಪ್ಪನವರು ಪಕ್ಷದ ಕೇಂದ್ರ ಕಛೇರಿ ಜಗನ್ನಾಥ ಭವನದಲ್ಲಿ ಅನೇಕ ಮಂದಿ ಯೋಗಾಳುಗಳೊಂದಿಗೆ ಯೋಗಾಭ್ಯಾಸ ನಡೆಸಿದರು. ನಂತರ ಮಲ್ಲೇಶ್ವರಂನಲ್ಲಿರುವ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆದ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಭಾರತ ದೇಶದ ಹೆಮ್ಮೆಯ ಸಂಸ್ಕೃತಿಯಾದ ಯೋಗವನ್ನು ಪ್ರಪಂಚಾದಾದ್ಯಂತ ಮನ್ನಣೆ ಪಡೆಯುವಂತೆ ಮಾಡುವಲ್ಲಿ ಪ್ರಧಾನಿ ನರೇಂದ್ರಮೋದಿಯವರ ಪಾತ್ರವನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದರು. ದೇಹ ಮನಸ್ಸು ಮತ್ತು ಆತ್ಮಗಳ ಸಮನ್ವಯ ಸಾಧಿಸಲು ಯೋಗದ ಅಭ್ಯಾಸ ಬಹಳ ಮುಖ್ಯವೆಂದು ಹೇಳಿದ ಅವರು ಎಲ್ಲಾ ಶಾಲಾ ಕಾಲೇಜುಗಳಲ್ಲಿ ಯೋಗ ಶಿಕ್ಷಣವನ್ನು ಪ್ರೋತ್ಸಾಹಿಸಬೇಕೆಂದು ಕರೆ ನೀಡಿದರು.

ಪ್ರತಿಪಕ್ಷದ ನಾಯಕ ಈಶ್ವರಪ್ಪ ಮಾತನಾಡಿ
ವಿಧಾನಪರಿಷತ್‍ನ ಪ್ರತಿಪಕ್ಷದ ನಾಯಕ ಈಶ್ವರಪ್ಪ ಮಾತನಾಡಿ, ನಾನು ಚಿಕ್ಕಂದಿನಿಂದಲೂ ಯೋಗ ಮಾಡುತ್ತಿದ್ದೇನೆ. ಅದಕ್ಕಾಗಿ ನನಗೆ ಬಿಪಿ, ಶುಗರ್ ಯಾವುದೂ ಬಂದಿಲ್ಲ. ಒಂದು ವೇಳೆ ಯಾರಾದರು ನನ್ನ ತಂಟೆಗೆ ಬಂದರೆ ಅವರಿಗೆ ಬಿಪಿ, ಶುಗರ್ ಬರಲಿದೆ ಎಂದರು.

ಬಸವರಾಜಹೊರಟ್ಟಿ ಮಾತನಾಡಿ
ನನಗೀಗ 70 ವರ್ಷ. ಈವರೆಗೂ ಆಸ್ಪತ್ರೆಗೆ ದಾಖಲಾಗಿಲ್ಲ. ನಾನು ನಡೆಯಲು ಶುರು ಮಾಡಿದರೆ ನನ್ನ ಸರಿಸಮನಾಗಿ ನಡೆಯಲು ಯುವಕರು ಕಷ್ಟಪಡುವಂತೆ ವೇಗವಾಗಿ ನಡೆಯುತ್ತೇನೆ, ಇದೆಲ್ಲ ಸಾಧ್ಯವಾಗಿರುವುದು ನಿರಂತರ ಯೋಗಭ್ಯಾಸದಿಂದ ಎಂದರು.
ಸುಮಾರು 40 ವರ್ಷಗಳಿಂದಲೂ ನಾನು ಯೋಗ ಮಾಡುತ್ತಾ ಬಂದಿದ್ದೇನೆ ಎಂದು ಹೇಳಿದರು.

ದೇವೇಗೌಡ
ದೇಶದ ಅತ್ಯಂತ ಸಕ್ರಿಯ ರಾಜಕಾರಣಿಗಳಲ್ಲಿ ಒಬ್ಬರಾದ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು 84ರ ಹರೆಯದಲ್ಲೂ ಸರಳ ಜೀವನ, ಮಿತ ಆಹಾರ, ದೈನಂದಿನ ಯೋಗಾಭ್ಯಾಸದ ಮೂಲಕ ಮಾದರಿಯಾಗಿದ್ದಾರೆ.

ಮೈಸೂರಿನಲ್ಲಿ ವಿಶ್ವದಾಖಲೆ
ಮೈಸೂರಿನಲ್ಲಿ ನಡೆದ ಯೋಗ ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ, ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದು,ಗಿನ್ನೆಸ್ ದಾಖಲೆ ಬರೆದ ಯೋಗ ಪಟುಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ನಂದೀಶ್ ರೆಡ್ಡಿ
ಬೆಂಗಳೂರಿನ ಕೆ ಆರ್ ಪುರಂ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಯೋಗ ದಿನಾಚರಣೆ ಸಂಭ್ರಮದಲ್ಲಿ ಬಿಜೆಪಿಯ ಮುಖಂಡ ನಂದೀಶ್ ರೆಡ್ಡಿ ಪಾಲ್ಗೊಂಡಿದ್ದರು.












Click it and Unblock the Notifications