ಚಿತ್ರಗಳು : ದುಬಾರೆ ಆನೆ ಶಿಬಿರದಲ್ಲಿ ಆನೆ ಹಬ್ಬ

ಮಡಿಕೇರಿ, ನವೆಂಬರ್ 16 : ಓಟ, ಹಿಮ್ಮುಖ ಓಟ, ಕಾಲ್ಚೆಂಡು, ನೀರು ಚಿಮ್ಮಿಸುವುದು, ಬಾಸ್ಕೆಟ್ ಬಾಲ್, ಕುಂಟೆ ಬಿಲ್ಲೆ, ಒಂಟಿ ಕಾಲಿನಲ್ಲಿ ನಡೆಯುವುದು ಹೀಗೆ ಹತ್ತಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಜನರ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿದವರು ಯಾವುದೇ ಕ್ರೀಡಾಪಟುಗಳಲ್ಲ ದುಬಾರೆ ಶಿಬಿರದ ಸಾಕಾನೆಗಳು.

ಭಾನುವಾರ ಮಡಿಕೇರಿ ಅರಣ್ಯ ವಿಭಾಗ ಹಾಗೂ ಅಮ್ಮಾಳೆ ಗ್ರಾಮ ಅರಣ್ಯ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ದುಬಾರೆ ಆನೆ ಶಿಬಿರದಲ್ಲಿ 61ನೇ ವನ್ಯಜೀವಿ ಮಾಸಾಚರಣೆ ಹಾಗೂ ಆನೆ ದಿನಾಚರಣೆ ನಡೆಯಿತು. ಇದರಲ್ಲಿ ಪಾಲ್ಗೊಂಡಿದ್ದ ಸಾಕಾನೆಗಳು ತಮ್ಮ ಪ್ರತಿಭೆ ಮೆರೆದು ಸೈ ಎನಿಸಿಕೊಂಡವು. [ಸಿರಿಗೆರೆ ಮಠದ ಗೌರಿ ಇನ್ನು ನೆನೆಪು ಮಾತ್ರ]

ಗೋಪಿ, ಹರ್ಷ, ಕಪಿಲಾ, ಶಿವಗಂಗೆ, ಪರಶುರಾಮ, ಮಯೂರ, ರಾಮ, ತೀರ್ಥರಾಮ, ವಿಕ್ರಮ, ಹರ್ಷ, ಮೈಥಾಲಿ, ಶ್ರೀರಾಮ, ಕಾವೇರಿ, ಪ್ರಶಾಂತ್, ಏಕದಂತ, ಅಯ್ಯಪ್ಪ, ಅಜಯ, ಇಂದ್ರ, ಕಾರ್ತಿಕ್, ಪೃಥ್ವಿ, ರಂಜನ್ ಮತ್ತಿತರ ಸಾಕಾನೆಗಳು ಸೇರಿದಂತೆ ಒಟ್ಟು 27 ಸಾಕಾನೆಗಳು ಉತ್ಸವದಲ್ಲಿ ಪಾಲ್ಗೊಂಡು ಜನರನ್ನು ರಂಜಿಸಿದವು. [ದಸರಾ ಆನೆಗಳನ್ನು ಸಾಕೋದು ಅಂದ್ರೆ ಸುಮ್ಮನೇನಾ?]

ಮೈದಾನದ ಸುತ್ತಲೂ ಡ್ರಮ್‌ಗಳಲ್ಲಿ ತುಂಬಿದ್ದ ನೀರನ್ನು ಆನೆಗಳು ಸೊಂಡಿಲಿನಲ್ಲಿ ತುಂಬಿ ಜನರೆಡೆಗೆ ಎರಚುವ ಮೂಲಕ ಜನರನ್ನು ತೋಯಿಸಿದವು. ಆನೆ ದಿನಾಚರಣೆಯ ಚಿತ್ರಗಳು ಇಲ್ಲಿವೆ..... [ಗಜಪಡೆಗಳ ಕಾಳಗಕ್ಕೆ ಸಾಕ್ಷಿಯಾದ ಪಿರಿಯಾಪಟ್ಟಣ]

ಆನೆ ಹಬ್ಬಕ್ಕೆ ಚಾಲನೆ ನೀಡಿದ ಎಂ.ಸಿ.ನಾಣಯ್ಯ

ಆನೆ ಹಬ್ಬಕ್ಕೆ ಚಾಲನೆ ನೀಡಿದ ಎಂ.ಸಿ.ನಾಣಯ್ಯ

ಆನೆ ಹಬ್ಬಕ್ಕೆ ಮಾಜಿ ಸಚಿವ ಎಂ.ಸಿ.ನಾಣಯ್ಯ ಚಾಲನೆ ನೀಡಿದರು. 'ಆನೆಗಳನ್ನು ತಮ್ಮ ಭಾಷೆಯಲ್ಲಿ ಪಳಗಿಸಿ ದಸರಾ ಮೆರಗು ತರುವವರು ಮಾವುತರು, ಇವರಿಗೆ ಕನಿಷ್ಟ ಮೂಲ ಸೌಲಭ್ಯಗಳನ್ನಾದರೂ ತಲುಪಿಸಬೇಕಿದೆ' ಎಂದು ಹೇಳಿದರು.

'ಆನೆ ಮತ್ತು ಮಾನವ ಸಂಘರ್ಷ ಹೆಚ್ಚಾಗುತ್ತಿದೆ'

'ಆನೆ ಮತ್ತು ಮಾನವ ಸಂಘರ್ಷ ಹೆಚ್ಚಾಗುತ್ತಿದೆ'

'ಇತ್ತೀಚಿನ ದಿನಗಳಲ್ಲಿ ಆನೆ ಮತ್ತು ಮಾನವ ಸಂಘರ್ಷ ಹೆಚ್ಚಾಗುತ್ತಿದೆ, ಇದು ತಪ್ಪಬೇಕು. ವನ್ಯ ಪ್ರಾಣಿಗಳ ಸಂರಕ್ಷಣೆಯೂ ಆಗಬೇಕು ಜತೆಗೆ ಮಾನವನ ರಕ್ಷಣೆಯೂ ಆಗಬೇಕು. ಆ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಬೇಕಿದೆ' ಎಂದು ನಾಣಯ್ಯ ಹೇಳಿದರು.

'ಸೋಲಾರ್ ಬೇಲಿ ನಿರ್ಮಾಣ ಮಾಡಬೇಕು'

'ಸೋಲಾರ್ ಬೇಲಿ ನಿರ್ಮಾಣ ಮಾಡಬೇಕು'

'ಕಾಡಾನೆ ಮತ್ತು ಮಾನವ ಸಂಘರ್ಷ ತಪ್ಪಿಸುವ ನಿಟ್ಟಿನಲ್ಲಿ ಸೋಲಾರ್ ಬೇಲಿ ಹಾಗೂ ಕಂದಕಗಳನ್ನು ನಿರ್ಮಾಣ ಮಾಡಬೇಕಿದೆ. ಆ ದಿಸೆಯಲ್ಲಿ ಕೀನ್ಯಾ ಮಾದರಿ ಅನುಸರಿಸಬೇಕಿದೆ' ಎಂದು ನಾಣಯ್ಯ ಸಲಹೆ ನೀಡಿದರು.

ಜನರಿಗೆ ಸ್ನಾನ ಮಾಡಿಸಿದ ಆನೆಗಳು

ಜನರಿಗೆ ಸ್ನಾನ ಮಾಡಿಸಿದ ಆನೆಗಳು

ಮೈದಾನದ ಸುತ್ತಲೂ ಡ್ರಮ್‌ಗಳಲ್ಲಿ ತುಂಬಿದ್ದ ನೀರನ್ನು ಆನೆಗಳು ಸೊಂಡಿಲಿನಲ್ಲಿ ತುಂಬಿ ಜನರೆಡೆಗೆ ಎರಚುವ ಮೂಲಕ ಜನರನ್ನು ತೋಯಿಸಿದವು.

27 ಆನೆಗಳು ಪಾಲ್ಗೊಂಡಿದ್ದವು

27 ಆನೆಗಳು ಪಾಲ್ಗೊಂಡಿದ್ದವು

4 ಮರಿ ಆನೆಗಳು, ಗೋಪಿ, ಹರ್ಷ, ಕಪಿಲಾ, ಶಿವಗಂಗೆ, ಪರಶುರಾಮ, ಮಯೂರ, ರಾಮ, ತೀರ್ಥರಾಮ, ವಿಕ್ರಮ, ಹರ್ಷ, ಮೈಥಾಲಿ, ಶ್ರೀರಾಮ, ಕಾವೇರಿ, ಪ್ರಶಾಂತ್, ಏಕದಂತ, ಅಯ್ಯಪ್ಪ, ಅಜಯ, ಇಂದ್ರ, ಕಾರ್ತಿಕ್, ಪೃಥ್ವಿ, ರಂಜನ್ ಸೇರಿದಂತೆ ಒಟ್ಟು 27 ಸಾಕಾನೆಗಳು ಉತ್ಸವದಲ್ಲಿ ಪಾಲ್ಗೊಂಡಿದ್ದವು.

ಜನರನ್ನು ರಂಜಿಸಿದ ಆನೆಗಳು

ಜನರನ್ನು ರಂಜಿಸಿದ ಆನೆಗಳು

ಹಬ್ಬದಲ್ಲಿ ಪಾಲ್ಗೊಂಡಿದ್ದ ಆನೆಗಳು ಮಾವುತ ಹಾಗೂ ಕಾವಾಡಿಗರು ನೀಡುವ ಸೂಚನೆಗೆ ಅನುಗುಣವಾಗಿ ವಿವಿಧ ಆಟಗಳನ್ನು ಆಡಿ ನೂರಾರು ಜನರನ್ನು ರಂಜಿಸಿದವು.

ಯಾವ-ಯಾವ ಆಟಗಳು?

ಯಾವ-ಯಾವ ಆಟಗಳು?

ಮಂಡಿಯೂರಿ ನಡೆಯುವುದು, ಒಂದು ಆನೆಯ ಕಿವಿಯನ್ನು ಮತ್ತೊಂದು ಆನೆ ಹಿಡಿದು ಸಾಗುವುದು, ಎರಡೂ ಕಾಲುಗಳನ್ನು ಮೇಲೆತ್ತಿ ನಿಲ್ಲುವುದು ಮುಂತಾದ ಆಟಗಳಲ್ಲಿ ಆನೆಗಳು ಪಾಲ್ಗೊಂಡಿದ್ದವು. ಡ್ರಮ್‌ಗಳಲ್ಲಿ ತುಂಬಿದ್ದ ನೀರನ್ನು ಸೊಂಡಿಲಿನಲ್ಲಿ ತುಂಬಿ ಜನರೆಡೆಗೆ ಎರಚಿದವು.

ನೂರಾರು ಜನರು ಆನೆ ಹಬ್ಬಕ್ಕೆ ಸಾಕ್ಷಿ

ನೂರಾರು ಜನರು ಆನೆ ಹಬ್ಬಕ್ಕೆ ಸಾಕ್ಷಿ

ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ.ಈಶ್ವರ, ಉಪ ಅರಣ್ಯ ಸಂರಕ್ಷಣಾಧಿಕಾರಿ ಯಡಕೊಂಡಲು, ಜಿ.ಪಂ.ಸದಸ್ಯರಾದ ಬಿ.ಸಿ.ಸುಲೋಚನಾ, ಸೋಮವಾರಪೇಟೆ ತಾ.ಪಂ.ಸದಸ್ಯರಾದ ರಾಣಿ, ಅರಣ್ಯ ಸಂಚಾರಿ ದಳದ ಡಿಎಫ್‍ಒ ರಾಜಣ್ಣ, ಕುಶಾಲನಗರ ವಲಯ ಅರಣ್ಯಾಧಿಕಾರಿ ಎಂ.ಎಸ್.ಚಿಣ್ಣಪ್ಪ ಮಾವುತರು ಮತ್ತು ಅವರ ಕುಟುಂಬದವರು, ಪ್ರವಾಸಿಗರು ಆನೆ ಹಬ್ಬಕ್ಕೆ ಸಾಕ್ಷಿಯಾದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+