ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿನೂತನ ಪ್ರತಿಭಟನೆ : ಸಿಎಂಗೆ ಒಂದು ಕೆಜಿ ಹಂದಿಮಾಂಸ ಪಾರ್ಸೆಲ್!

|
Google Oneindia Kannada News

ವಿಜಯಪುರ, ನ 4: ಗೋಮಾಂಸ ವಿಚಾರದಲ್ಲಿ ಒಬ್ಬರು ರುಂಡ ಚೆಂಡಾಡುತ್ತೇನೆಂದು ಬಂಧನಕೊಳ್ಳಗಾದರೆ, ಹಿಂದೂಪರ ಸಂಘಟನೆಯೊಂದು ಗೋಮಾಂಸ ಭಕ್ಷಣೆಯ ಹೇಳಿಕೆಯ ವಿಚಾರದಲ್ಲಿ ಮುಖ್ಯಮಂತ್ರಿ ವಿರುದ್ದ ವಿನೂತನ ಪ್ರತಿಭಟನೆ ನಡೆಸಿದೆ.

ಶ್ರೀರಾಮಸೇನೆ ಸಿಎಂ ಸಿದ್ದರಾಮಯ್ಯನವರಿಗೆ ಒಂದು ಕೆಜಿ ಹಂದಿ ಮಾಂಸವನ್ನು ವಿಜಯಪುರದಿಂದ ಮುಖ್ಯಮಂತ್ರಿ ಕಚೇರಿಗೆ ಪಾರ್ಸೆಲ್ ಮಾಡಿದೆ.

ಬಿಜೆಪಿ ಮತ್ತು ಸಂಘಪರಿವಾರದವರು ಗಲಾಟೆ ಮಾಡುತ್ತಿರುವುದನ್ನು ನೋಡಿದರೆ ನನಗೂ ಗೋಮಾಂಸ ತಿನ್ನಬೇಕು ಎಂದನಿಸುತ್ತದೆ. ಇಷ್ಟಪಟ್ಟರೆ ಗೋಮಾಂಸ ಜೊತೆಗೆ ಹಂದಿಮಾಂಸವನ್ನೂ ತಿನ್ನುತ್ತೇನೆಂದು ಮುಖ್ಯಮಂತ್ರಿಗಳು ಹೇಳಿದ್ದರು. (ಗೋಮಾಂಸ ತಿನ್ನುವೆ ಎಂದ ಸಿ.ಎಂ ಕ್ಷಮೆ ಕೇಳಲಿ)

ಇದಕ್ಕೆ ನಗರದಲ್ಲಿ ಮಂಗಳವಾರ (ನ 3) ಪ್ರತಿಕ್ರಿಯಿಸುತ್ತಾ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಮುಖ್ಯಮಂತ್ರಿಗಳು ಅವರ ಸಂಪುಟ ಸಹದ್ಯೋಗಿಗಳ ಬಾಯಿಚಪಲ ತೀರಿಸಲು ವಿಜಯಪುರದಿಂದ ಒಂದು ಕೆಜಿ ಹಂದಿಮಾಸ ಪಾರ್ಸೆಲ್ ಕಳುಹಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ನಾವೇನಾದರೂ ಹೇಳಿಕೆ ನೀಡಿದರೆ ಅಥವಾ ಪ್ರತಿಭಟನೆ ನಡೆಸಿದರೆ ಅದು ಕೋಮು ಪ್ರಚೋದನೆಯಾಗುತ್ತದೆ. ಮುಖ್ಯಮಂತ್ರಿಗಳು ಗೋಮಾಂಸದ ಬಗ್ಗೆ ಮಾತನಾಡಿದರೆ ಅದು ಪ್ರಚೋದನಕಾರೀ ಆಗುವುದಿಲ್ಲವೇ ಎಂದು ಮುತಾಲಿಕ್ ಪ್ರಶ್ನಿಸಿದ್ದಾರೆ. ಮುಂದೆ ಓದಿ..

ಬಹುಸಂಖ್ಯಾತರಿಗೆ ನೋವಾಗಿದೆ

ಬಹುಸಂಖ್ಯಾತರಿಗೆ ನೋವಾಗಿದೆ

ರಾಜ್ಯದ ಮುಖ್ಯಮಂತ್ರಿಯಾಗಿ ಗೋಮಾಂಸ ಭಕ್ಷಣೆಯ ವಿಚಾರದಲ್ಲಿ ಅವರ ಹೇಳಿಕೆ ಬಹುಸಂಖ್ಯಾತ ಕೋಮಿನವರಿಗೆ ನೋವಾಗಿದೆ. ನಾವು ಮುಖ್ಯಮಂತ್ರಿಗಳ ವಿರುದ್ದ ಕೇಸ್ ದಾಖಲಿಸುತ್ತೇವೆ - ಪ್ರಮೋದ್ ಮುತಾಲಿಕ್.

ಗೋವಿನ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ

ಗೋವಿನ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ

ಗೋಮಾಂಸದ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವುದು ನಾವಲ್ಲ, ಕಾಂಗ್ರೆಸ್. ಗೋಮಾಂಸ ತಿನ್ನುತ್ತೇನೆ ಎನ್ನುವ ಮುಖ್ಯಮಂತ್ರಿಗಳ ಹೇಳಿಕೆ ಖಂಡನಾರ್ಹ, ಅವರು ರಾಜ್ಯದ ಕ್ಷಮೆಯಾಚಿಸಲಿ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಆಗ್ರಹಿಸಿದ್ದಾರೆ.

ಸಿ ಟಿ ರವಿ ಹೇಳಿಕೆ

ಸಿ ಟಿ ರವಿ ಹೇಳಿಕೆ

ರಾಜ್ಯದ ಅಭಿವೃದ್ದಿ ಕಡೆಗೆ ಗಮನ ಕೊಡುವುದನ್ನು ಬಿಟ್ಟು, ಮುಖ್ಯಮಂತ್ರಿಗಳು ಸಮಾಜದ ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಗೋಮಾಂಸ ಭಕ್ಷಣೆಯ ಬಗ್ಗೆ ಸಿಎಂ ಹೇಳಿಕೆ ನೋವು ತರುವಂತದ್ದು - ಸಿ ಟಿ ರವಿ.

ಬಿಜೆಪಿಯದ್ದು ವೋಟ್ ಬ್ಯಾಂಕ್ ರಾಜಕಾರಣ

ಬಿಜೆಪಿಯದ್ದು ವೋಟ್ ಬ್ಯಾಂಕ್ ರಾಜಕಾರಣ

ಆಹಾರ ಸಂಸ್ಕೃತಿ ಅವರವರ ಇಷ್ಟಕ್ಕೆ ಬಿಟ್ಟ ವಿಚಾರ, ಬಿಜೆಪಿಯವರಿಗೆ ಇದು ಅರ್ಥವಾಗುವುದಿಲ್ಲ. ಅವರಿಗೆ ರಾಜಕೀಯ ಮಾಡೋಕೆ ಏನಾದರೂ ಕಾರಣ ಬೇಕು. ಹಾಗಾಗಿ ಗೋಮಾಂಸದ ವಿಚಾರದಲ್ಲಿ ಗಲಾಟೆ ಮಾಡುತ್ತಿದ್ದಾರೆ - ವಿ ಎಸ್ ಉಗ್ರಪ್ಪ.

ಯು ಟಿ ಖಾದರ್

ಯು ಟಿ ಖಾದರ್

ತನ್ನ ಹಿಂದಿನ ಸರಕಾರದ ಅವಧಿಯಲ್ಲೂ ಬಿಜೆಪಿ ಗೋಹತ್ಯೆಯನ್ನು ಸಂಪೂರ್ಣ ನಿಷೇಧಿಸಲಿಲ್ಲ. ಕೇಂದ್ರ ಸರಕಾರದ್ದೂ ಈ ವಿಚಾರದಲ್ಲಿ ಸ್ಪಷ್ಟ ನಿಲುವಿಲ್ಲ. ಬಿಜೆಪಿಯವರಿಗೆ ಇದು ರಾಜಕೀಯದ ವಿಷಯವಾಗಿದ್ದು ಬೇಸರ ತಂದಿದೆ - ಆರೋಗ್ಯ ಸಚಿವ ಯು ಟಿ ಖಾದರ್.

English summary
In a different way of protest on beef row, Srirama Sene parceled one kg of pork to Chief Minister Siddaramaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X