ಇ-ಆಫೀಸ್ ಯೋಜನೆ ಅನುಷ್ಠಾನ; ಜಿಲ್ಲೆ, ತಾಲೂಕುಗಳಿಗೆ ಸೂಚನೆಗಳು

ಬೆಂಗಳೂರು, ಮೇ 19: ಕರ್ನಾಟಕ ಸರ್ಕಾರ ಇ-ಆಫೀಸ್ ಯೋಜನೆ ಅನುಷ್ಠಾನ ಮಾಡುವ ಕುರಿತು ಪತ್ರವೊಂದನ್ನು ಬರೆದಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಈ ಕುರಿತು ಎಲ್ಲಾ ಇಲಾಖೆಯ ಮುಖ್ಯ ಕಾರ್ಯದರ್ಶಿಗಳು/ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರವನ್ನು ಬರೆದಿದೆ.

ಈ ಕುರಿತು ಉಜ್ವಲ್ ಕುಮಾರ್ ಘೋಷ್ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ (ಇ-ಆಡಳಿತ) ಹಾಗೂ ಸಕಾಲ ಪತ್ರವನ್ನು ಬರೆದಿದ್ದಾರೆ. ಪತ್ರವು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಕಛೇರಿಗಳಲ್ಲಿ ಇ-ಆಫೀಸ್ ತಂತ್ರಾಂಶವನ್ನು ಅನುಷ್ಠಾನಗೊಳಿಸುವ ಕುರಿತು ಎಂಬ ವಿಷಯ ಒಳಗೊಂಡಿದೆ.

Implementation Of E Office Letter From Karnataka Govt

ಪತ್ರದ ವಿವರಗಳು: ಈ ಪತ್ರದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಆಡಳಿತ ಸುಧಾರಣೆ)ಯ ಸರ್ಕಾರಿ ಆದೇಶದಲ್ಲಿ ಇ- ಆಫೀಸ್ ತಂತ್ರಾಂಶವನ್ನು ಎಲ್ಲಾ ಇಲಾಖೆಗಳ ಮುಖ್ಯಸ್ಥರುಗಳ ಕಛೇರಿ/ ಪ್ರಾದೇಶಿಕ ಆಯುಕ್ತರುಗಳ ಕಛೇರಿ/ ಜಿಲ್ಲಾಧಿಕಾರಿಗಳ ಕಛೇರಿ/ ಜಿಲ್ಲಾ ಪಂಚಾಯತ್ ಕಛೇರಿ/ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಗಳು ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ (ಪ್ರಾದೇಶಿಕ ಮತ್ತು ಸಾಮಾಜಿಕ)ಗಳಲ್ಲಿ ಕಡ್ಡಾಯವಾಗಿ ಇ-ಆಫೀಸ್ ಅನುಷ್ಠಾನಗೊಳಿಸಿ, ತಾಲೂಕು ಮಟ್ಟದ ಕಛೇರಿಗಳಲ್ಲಿ ಅನುಷ್ಠಾನ ಪ್ರಕ್ರಿಯೆ ಪ್ರಾರಂಭಿಸಲು ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿರುತ್ತದೆ ಎಂದು ಹೇಳಿದೆ.

ಎಲ್ಲಾ ಜಿಲ್ಲಾಧಿಕಾರಿಗಳ ಕಛೇರಿ ಮತ್ತು ಜಿಲ್ಲಾ ಪಂಚಾಯತ್ ಕಛೇರಿಗಳಲ್ಲಿ ಇ-ಆಫೀಸ್ ಅನುಷ್ಠಾನಗೊಂಡಿರುವ ಮೇರೆಗೆ, ಆಯಾಯ ಜಿಲ್ಲೆಗಳ ಉಪ ವಿಭಾಗಾಧಿಕಾರಿಗಳ ಕಛೇರಿ ಮತ್ತು ಎಲ್ಲಾ ತಾಲ್ಲೂಕು ಮಟ್ಟದ ತಹಶೀಲ್ದಾರ್ ಕಛೇರಿ ಹಾಗೂ ತಾಲ್ಲೂಕು ಪಂಚಾಯತ್ ಕಛೇರಿಗಳಲ್ಲಿ ಇ-ಆಫೀಸ್ ತಂತ್ರಾಂಶವನ್ನು ದಿನಾಂಕ 01/04/2021ರಿಂದ ಅನುಷ್ಠಾನಗೊಳಿಸುವಂತೆ ಆದೇಶಿಸಲಾಗಿರುತ್ತದೆ.

ಅದರಂತೆ, ತಾಲ್ಲೂಕು ಮಟ್ಟದ ಎಲ್ಲಾ ತಹಶೀಲ್ದಾರ್ ಕಛೇರಿ, ತಾಲ್ಲೂಕು ಪಂಚಾಯತ್ ಕಛೇರಿ, ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಛೇರಿಗಳು ಹಾಗೂ ಉಪನೋಂದಣಾಧಿಕಾರಿಗಳ ಕಛೇರಿಗಳಲ್ಲಿ ಇ-ಕಛೇರಿ ತಂತ್ರಾಂಶವನ್ನು ಈಗಾಗಲೇ ಅನುಷ್ಠಾನಗೊಳಿಸಲಾಗಿರುತ್ತದೆ ಹಾಗೂ ರಾಜ್ಯದ ಎಲ್ಲಾ ನಿಗಮ/ ಮಂಡಳಿ/ ಆಯೋಗ/ ನಿಯಮಿತ ಕಂಪನಿ ಮತ್ತು ಇತರೆ ಸ್ಯಾಯುತ್ತ ಸಂಸ್ಥೆಗಳಲ್ಲಿ ಇ-ಆಫೀಸ್ ತಂತ್ರಾಂಶವನ್ನು ಅನುಷ್ಠಾನಗಳಿಸಲು ಆದೇಶಿಸಲಾಗಿರುತ್ತದೆ.

ಅದಾಗ್ಯೂ ಈವರೆಗೂ ಹಲವಾರು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಕಛೇರಿಗಳು, ನಿಗಮ/ ಮಂಡಳಿ ಆಯೋಗ/ ನಿಯಮಿತ ಕಂಪನಿ ಮತ್ತು ಇತರೆ ಸ್ನಾಯುತ್ತ ಸಂಸ್ಥೆಗಳಲ್ಲಿ ಇ-ಕಛೇರಿ ತಂತ್ರಾಂಶದ ಅನುಷ್ಠಾನ ಪ್ರಕ್ರಿಯೆಯನ್ನು ಪ್ರಾರಂಭಿಸಿರುವುದಿಲ್ಲ. ಆದ್ದರಿಂದ, ತಮ್ಮ ಸಚಿವಾಲಯದ ಅಧೀನದಲ್ಲಿ ಬರುವ ಯಾವ ಇಲಾಖೆಗಳು/ ಜಿಲ್ಲಾ ಮಟ್ಟದ ಕಛೇರಿಗಳು/ ತಾಲ್ಲೂಕು ಮಟ್ಟದ ಕಛೇರಿಗಳು/ ನಿಗಮ/ ಮಂಡಳಿ/ ವಿಶ್ವವಿದ್ಯಾಲಯಗಳು/ ಇತರೆ ಸ್ನಾಯುತ್ತ ಸಂಸ್ಥೆಗಳಲ್ಲಿ ಇ-ಆಫೀಸ್ ತಂತ್ರಾಂಶವು ಅನುಷ್ಠಾನಗೊಂಡಿರುವುದಿಲ್ಲವೋ ಅಂತಹ ಕಛೇರಿಗಳಲ್ಲಿ ತುರ್ತಾಗಿ ಇ-ಆಫೀಸ್ ತಂತ್ರಾಂಶವನ್ನು ಅನುಷ್ಠಾನಗೊಳಿಸಿ ಕಡ್ಡಾಯವಾಗಿ ನಿರ್ವಹಣೆಯನ್ನು ಇ-ಆಫೀಸ್ ತಂತ್ರಾಂಶದ ಮೂಲಕವೇ ನಿರ್ವಹಿಸಬೇಕು ಎಂದು ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕು ಎಂದು ಪತ್ರ ಹೇಳಿದೆ.

ಈ ಹಿಂದೆಯೇ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ರಾಜ್ಯದ ಎಲ್ಲಾ ವಿಭಾಗ/ ಜಿಲ್ಲಾ ಮಟ್ಟದ ಕಚೇರಿ ಹಾಗೂ ತಾಲ್ಲೂಕು ಮಟ್ಟದ ಹಾಗೂ ಇನ್ನಿತರ ಸರ್ಕಾರಿ ಕಚೇರಿಗಳಲ್ಲಿ ಇ-ಆಫೀಸ್ ತಂತ್ರಾಂಶವನ್ನು ಅಳವಡಿಸಲು ಅವರ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ DDO (Drawing and Disbursement Officer) ಗಳನ್ನು ಹಾಗೂ ಮುಖ್ಯಸ್ಥರು/ ಆಡಳಿತಾಧಿಕಾರಿ/ ಮ್ಯಾನೇಜರ್‌ಗಳನ್ನು ಇ-ಆಫೀಸ್ ಅನುಷ್ಠಾನಕ್ಕೆ Local Admin (ಸ್ಥಳೀಯ ನಿರ್ವಹಣಾ ಅಧಿಕಾರಿ) ಗಳನ್ನಾಗಿ ನೇಮಿಸಿ ಆದೇಶ ಹೊರಡಿಸಿತ್ತು.

Local Adminಗಳು ತಮ್ಮ ಇಲಾಖೆಯಲ್ಲಿನ ಎಲ್ಲಾ ಸಿಬ್ಬಂದಿಗಳ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಕಲೆ ಹಾಕಬೇಕು ಹಾಗೂ ಎಲ್ಲರ ಇ-ಮೇಲ್ ಐಡಿ ಸೃಜಿಸಲು ಆನ್ ಲೈನ್ ಮೂಲಕ https://eforms.nic.in ನಲ್ಲಿ ಅಪ್ ಲೋಡ್ ಮಾಡಬೇಕು. ಇ-ಆಡಳಿತ ಕೇಂದ್ರದ ಜೊತೆ ಸಂವಹಿಸಿ ಎಲ್ಲಾ ಉದ್ಯೋಗಿಗಳ User ID & Password ಪಡೆದುಕೊಂಡು ಸಂಬಂಧಪಟ್ಟ ಸಿಬ್ಬಂದಿಗೆ ನೀಡಬೇಕು ಹಾಗೂ ಪಾಸ್ ವರ್ಡ್ ಬದಲಿಸಿಕೊಳ್ಳಲು ಸೂಚಿಸಬೇಕು ಎಂದು ಹೇಳಿತ್ತು.

ಕಛೇರಿಗಳಲ್ಲಿ ಇ-ಆಫೀಸ್ ಅನುಷ್ಠಾನಕ್ಕೆ ಅಗತ್ಯವಿರುವ ನೆಟ್ ವರ್ಕ್ ಪಡೆದುಕೊಂಡು ದೈನಂದಿನ ಕಾರ್ಯನಿರ್ವಹಣೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳುವುದು. ಯಾವುದೇ ಸಿಬ್ಬಂದಿ ವರ್ಗಾವಣೆ/ ನಿವೃತ್ತಿ/ ಸೇವಾ ವಿಮುಕ್ತಿ ಹೊಂದಿದಾಗ ಅವರ ಖಾತೆಯನ್ನು ವರ್ಗಾಯಿಸುವುದು ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳುವುದು. ವರದಿ ಮಾಡಿಕೊಳ್ಳುವ ನೂತನ ಸಿಬ್ಬಂದಿಗೆ User ID ಸೃಜಿಸಬೇಕು ಎಂದು ಹೇಳಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+