ಐಎಂಎ ವಂಚನೆ ಪ್ರಕರಣ: ಗ್ರಾಹಕರಿಗೆ ಎರಡು ದಿನದಿಂದ ಚಿನ್ನ ವಿತರಣೆ ಮಾಡುತ್ತಿರುವ ಹರ್ಷಗುಪ್ತ!
ಬೆಂಗಳೂರು, ಏ. 22: ಬಹುಕೋಟಿ ಐಎಂಎ ಕಂಪನಿಯಲ್ಲಿ ಹೂಡಿಕೆ ಮಾಡಿ ಮೋಸ ಹೋಗಿದ್ದ 9 ಸಾವಿರ ಮಂದಿಗೆ ತಲಾ 50 ಸಾವಿರ ರೂ. ಪಾವತಿಸಿದ್ದ ಐಎಂಎ ಸಕ್ಷಮ ಪ್ರಾಧಿಕಾರದ ಮುಖ್ಯಸ್ಥ ಡಾ. ಹರ್ಷಗುಪ್ತಾ, ಇದೀಗ ಚಿನ್ನ ಅಡವಿಟ್ಟವರಿಗೂ ನ್ಯಾಯದಾನ ಮಾಡಿದ್ದಾರೆ.
ಬಹುಕೋಟಿ ವಂಚನೆ ಐಎಂಎ ನಲ್ಲಿ ಚಿನ್ನ ಅಡವಿಟ್ಟಿದ್ದ ಗ್ರಾಹಕರಿಗೆ ಅವರ ಚಿನ್ನ ವಾಪಸು ಕೊಡುವ ಮೂಲಕ ಖಡಕ್ ಐಎಎಸ್ ಅಧಿಕಾರಿ ಹರ್ಷಗುಪ್ತಾ ಮಹತ್ವದ ಕೆಲಸವನ್ನು ಪೂರ್ಣಗೊಳಿಸಿದ್ದಾರೆ. ಹರ್ಷ ಗುಪ್ತಾ ಕೇಂದ್ರ ಸೇವೆಗೆ ವರ್ಗಾವಣೆಯಾಗಿ ಒಂದೂವರೆ ತಿಂಗಳಾಗಿದೆ. ಆ ವಿಚಾರದಲ್ಲಿ ನೋಡುವುದಾದ್ರೆ ಒಂದೂವರೆ ತಿಂಗಳ ಹಿಂದೆಯೇ ದೆಹಲಿಗೆ ಹೊರಡಬೇಕಿತ್ತು. ಐಎಂಎನಲ್ಲಿ ಚಿನ್ನ ಅಡವಿಟ್ಟಿದ್ದ ಗ್ರಾಹಕರಿಗೆ ನ್ಯಾಯ ಒದಗಿಸಲು ಒಂದೂವರೆ ತಿಂಗಳಿನಿಂದ ಹಗರಳಿರುಳು ಪರಿಶ್ರಮ ಹಾಕಿ ಮಹತ್ವದ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ. ಸದಾ ಜನ ಪರ ತೀರ್ಮಾನ ಕೈಗೊಳ್ಳುವ ಮೂಲಕ ರಾಜ್ಯದಲ್ಲಿ ಹೆಸರು ಗಳಿಸಿರುವ ಹರ್ಷ ಗುಪ್ತಾ ವರ್ಗಾವಣೆಯಾಗಿದ್ದರೂ ಅರ್ಧಕ್ಕೆ ಕೆಲಸ ಬಿಡದೇ ಪೂರ್ಣಗೊಳಿಸಿದ್ದಾರೆ.
ಐಎಂಎನಲ್ಲಿ ಚಿನ್ನ ಅಡವಿಟ್ಟಿದ್ದ ಗ್ರಾಹಕರಿಗೆ ಕಳೆದ ಎರಡು ದಿನದಿಂದ ಚಿನ್ನ ವಾಪಸು ನೀಡಲಾಗುತ್ತಿದೆ. ನ್ಯಾಯಾಲಯದ ಆದೇಶದಂತೆ ಅಡವಿಟ್ಟಿದ್ದ ಚಿನ್ನದ ಅಸಲು ಮತ್ತು ನ್ಯಾಯಾಲಯದ ವಿಧಿಸಿದ ಬಡ್ಡಿ ದರ ಪಾವತಿ ಮಾಡಿದವರಿಗೆ ಚಿನ್ನವನ್ನು ಹರ್ಷ ಗುಪ್ತಾ ವಾಪಸು ಕೊಡಿಸಿದ್ದಾರೆ. ಇನ್ನೇನು ಚಿನ್ನವೇ ಹೋಯಿತು ಎಂದು ಆತಂಕದಲ್ಲಿದ್ದವರ ಮುಖದಲ್ಲಿ ಇದೀಗ ಹರ್ಷ ಮೂಡಿಸಿದ್ದಾರೆ.

ಐಎಂಎನಲ್ಲಿ ನೂರಾರು ಗ್ರಾಹಕರು ಚಿನ್ನ ಅಡವಿಟ್ಟಿದ್ದರು. ಅಡವಿಟ್ಟಿದ್ದ ಚಿನ್ನದ ಪೈಕಿ 32 ಕೆ.ಜಿ ಚಿನ್ನವನ್ನು ತನಿಖೆ ವೇಳೆ ವಶಪಡಿಸಿಕೊಳ್ಳಲಾಗಿತ್ತು. ಅಡವಿಟ್ಟಿದ್ದ ಚಿನ್ನವನ್ನು ಗ್ರಾಹಕರಿಗೆ ವಿತರಣೆ ಮಾಡುವ ಜವಾಬ್ಧಾರಿಯನ್ನು ಐಎಂಎ ಸಕ್ಷಮ ಪ್ರಾಧಿಕಾರಕ್ಕೆ ವಹಿಸಲಾಗಿತ್ತು. ಹಗಳಿರುಳು ಶ್ರಮಿಸಿರುವ ಐಎಂಎ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳು ನ್ಯಾಯಾಲದಯ ಅನುಮತಿ ಮೇರೆಗೆ ಗುರುವಾರ 168 ಮಂದಿಗೆ ಅಡವಿಟ್ಟಿದ್ದ ಚಿನ್ನವನ್ನು ವಾಪಸು ನೀಡಿದ್ದಾರೆ. ಬಡ್ಡಿ ಮತ್ತು ಅಸಲು ಪಾವತಿಸಿದ ಗ್ರಾಹಕರಿಗೆ ಚಿನ್ನಾಭರಣಗಳನ್ನು ಐಎಂಎ ಸಕ್ಷಮ ಪ್ರಾಧಿಕಾರದ ಮುಖ್ಯಸ್ಥರಾದ ಡಾ. ಹರ್ಷ ಗುಪ್ತಾ ವಿತರಣೆ ಮಾಡಿದ್ದಾರೆ.
ಬಾಕಿ ಉಳಿದ 150 ಮಂದಿಗೆ ಸೋಮವಾರ ಅಡವಿಟ್ಟಿದ್ದ ಚಿನ್ನವನ್ನು ವಿತರಣೆ ಮಾಡುತ್ತಿದ್ದಾರೆ. ಸುಮಾರು ಐದು ಕೆ.ಜಿ. ಯಷ್ಟು ಅಡವಿಟ್ಟಿದ್ದ ಚಿನ್ನಾಭರಣ ವಿತರಣೆ ಮಾಡಿದ್ದು, ಬಾಕಿ ಐದು ಕೆ.ಜಿಯಷ್ಟು ಚಿನ್ನಾಭರಣ ಕೆಲವೇ ದಿನಗಳಲ್ಲಿ ವಿತರಣೆ ಮಾಡಲಿದ್ದಾರೆ. ಅಡವಿಟ್ಟ ಚಿನ್ನವನ್ನು ಬಿಡಿಸಿಕೊಳ್ಳದೇ ಇದ್ದ ಪಕ್ಷದಲ್ಲಿ ಅದನ್ನು ಸಾರ್ವಜನಿಕ ಹರಾಜು ಮೂಲಕ ವಿಲೇವಾರಿ ಮಾಡಿ ಬಂದ ಹಣವನ್ನು ಐಎಂಎನಲ್ಲಿ ಹೂಡಿಕೆ ಮಾಡಿ ಮೋಸ ಹೋದವರಿಗೆ ವಿತರಣೆ ಮಾಡಲಾಗುತ್ತದೆ.

9 ಸಾವಿರ ಮಂದಿಗೆ ನ್ಯಾಯ:
ಇನ್ನು ಐಎಂಎನಲ್ಲಿ ಹೂಡಿಕೆ ಮಾಡಿ ಮೋಸ ಹೋಗಿದ್ದ ಬಡವರು ನಮ್ಮ ಹಣ ಹೋಯಿತು ಎಂದು ಕೈಕಟ್ಟಿ ಕೂತಿದ್ದರು. ಮೊದಲ ಹಂತದಲ್ಲಿ ತಲಾ 50 ಸಾವಿರ ರೂ. ನಂತೆ 9 ಸಾವಿರ ಮಂದಿಗೆ ಹಣವನ್ನು ಅವರ ಖಾತೆಗಳಿಗೆ ವರ್ಗಾವಣೆ ಮಾಡಿದ್ದರು. ಅತಿ ಕಡಿಮೆ ಹೂಡಿಕೆ ಮಾಡಿ ಬಿದಿಗೆ ಬಂದಿದ್ದ ಬಹುತೇಕ ಬಡವರಿಗೆ ಪೂರ್ಣ ಪ್ರಮಾಣದ ಹೂಡಿಕೆ ಅಸಲು ಹಣ ಬರುವಂತೆ ಮಾಡುವಲ್ಲಿ ಹರ್ಷಗುಪ್ತಾ ಯಶಸ್ವಿಯಾಗಿದ್ದರು. ಇದೀಗ ಚಿನ್ನ ಅಡವಿಟ್ಟಿದ್ದ ಗ್ರಾಹಕರಿಗೂ ನ್ಯಾಯ ಒದಗಿಸಿದ್ದಾರೆ.
-
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications