ಐಎಂಎ ವಂಚನೆ ಪ್ರಕರಣ : ಎಸ್‌ಐಟಿ ತಂಡದ ಅಧಿಕಾರಿಗಳ ಪಟ್ಟಿ
ಬೆಂಗಳೂರು, ಜೂನ್ 12 : ಬಹುಕೋಟಿ ರೂಪಾಯಿ ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ನಡೆಯಲಿದೆ. ಬಿ.ಆರ್.ರವಿಕಾಂತೇಗೌಡ ನೇತೃತ್ವದಲ್ಲಿ ತನಿಖೆಗೆ ಎಸ್‌ಐಟಿ ತಂಡವನ್ನು ರಚನೆ ಮಾಡಲಾಗಿದೆ.
ಕರ್ನಾಟಕ ಸರ್ಕಾರ ಬುಧವಾರ 10 ಅಧಿಕಾರಿಗಳ ಎಸ್‌ಐಟಿ ತಂಡವನ್ನು ರಚನೆ ಮಾಡಿದೆ. ಆದರೆ, ಎಷ್ಟು ದಿನದಲ್ಲಿ ವರದಿ ನೀಡಬೇಕು ಎಂಬುದನ್ನು ಸರ್ಕಾರ ಆದೇಶದಲ್ಲಿ ತಿಳಿಸಿಲ್ಲ. ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಸಾವಿರಕ್ಕೂ ಅಧಿಕ ದೂರುಗಳು ದಾಖಲಾಗಿವೆ.
ಅಗ್ನಿ ಶಾಮಕ ದಳದ ಡಿಐಜಿ ಆಗಿರುವ ಬಿ.ಆರ್.ರವಿಕಾಂತೇಗೌಡ ನೇತೃತ್ವದ ಎಸ್ಐಟಿ ತಂಡದಲ್ಲಿ 10 ಅಧಿಕಾರಿಗಳಿದ್ದಾರೆ. ವಂಚನೆ ಪ್ರಕರಣದ ಬಗ್ಗೆ ಸಮಗ್ರವಾದ ತನಿಖೆಯನ್ನು ಎಸ್‌ಐಟಿ ನಡೆಸಲಿದೆ. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಐಎಂಎ ಗುಂಪಿನ ವಂಚನೆ ಬಗ್ಗೆ ದೂರುಗಳು ದಾಖಲಾಗಿವೆ. ಎಲ್ಲವನ್ನೂ ಎಸ್‌ಐಟಿ ತನಿಖೆ ನಡೆಸಲಿದೆ.

ಅಧಿಕಾರಿಗಳು
* ಎಸ್.ಗಿರೀಶ್ (ಡಿಸಿಪಿ) ಅಪರಾಧ ವಿಭಾಗ, ಬೆಂಗಳೂರು ನಗರ
* ಬಾಲರಾಜು (ಎಸಿಪಿ) ಸಿಸಿಬಿ, ಬೆಂಗಳೂರು ನಗರ
* ಕೆ.ರವಿಶಂಕರ್ (ಡಿವೈಎಸ್‌ಪಿ), ಸಿಐಡಿ ಬೆಂಗಳೂರು
* ರಾಜಾ ಇಮಾನ್ ಕಾಸಿಮ್ (ಡಿವೈಎಸ್‌ಪಿ), ರಾಜ್ಯ ಗುಪ್ತಚರ, ಬೆಂಗಳೂರು
* ಅಬ್ದುಲ್ ಖಾದರ್ (ಡಿವೈಎಸ್‌ಪಿ), ಕರ್ನಾಟಕ ಲೋಕಾಯುಕ್ತ ಎಸ್‌ಐಟಿ
* ಸಿ.ಆರ್.ಗೀತಾ (ಪೊಲೀಸ್ ಇನ್ಸ್‌ಪೆಕ್ಟರ್), ಕರ್ನಾಟಕ ಲೋಕಾಯುಕ್ತ
* ಎಲ್.ವೈ.ರಾಜೇಶ್ (ಪೊಲೀಸ್ ಇನ್ಸ್‌ಪೆಕ್ಟರ್), ಬಿಡಿಎ ಬೆಂಗಳೂರು
* ಅಂಜನ್ ಕುಮಾರ್ (ಪೊಲೀಸ್ ಇನ್ಸ್‌ಪೆಕ್ಟರ್) ಸಿಸಿಬಿ, ಬೆಂಗಳೂರು ನಗರ
* ಎನ್.ತನ್ವೀರ್ ಅಹಮದ್ (ಪೊಲೀಸ್ ಇನ್ಸ್‌ಪೆಕ್ಟರ್) ಎಸ್‌ಸಿಆರ್‌ಬಿ, ಬೆಂಗಳೂರು
* ಬಿ.ಕೆ.ಶೇಖರ್ (ಪೊಲೀಸ್ ಇನ್ಸ್‌ಪೆಕ್ಟರ್) ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ, ಬೆಂಗಳೂರು
ಎಲ್ಲಾ 10 ಅಧಿಕಾರಿಗಳು ಅಗ್ನಿ ಶಾಮಕ ದಳದ ಡಿಐಜಿ ಆಗಿರುವ ಬಿ.ಆರ್.ರವಿಕಾಂತೇಗೌಡ ಅವರಿಗೆ ರಿಪೋರ್ಟ್ ಮಾಡಿಕೊಳ್ಳಬೇಕು ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.












Click it and Unblock the Notifications