• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಐಐಟಿ ಕರ್ನಾಟಕದ ಯಾವ ಜಿಲ್ಲೆಗೆ ಹೋಗಬೇಕು?

By ವಿಕಾಸ್ ನಂಜಪ್ಪ
|

ಬೆಂಗಳೂರು, ಮಾ. 2: ರಾಜ್ಯದ ಐಐಟಿ ಕನಸಿಗೆ ಕೇಂದ್ರ ಬಜೆಟ್ ನಲ್ಲಿ ಒಪ್ಪಿಗೆ ದೊರೆತಿದೆ. ಆದರೆ ರಾಜ್ಯದ ಯಾವ ನಗರದಲ್ಲಿ ಐಐಟಿ ನಿರ್ಮಾಣ ಮಾಡಬೇಕು ಎಂಬ ಚರ್ಚೆ ಇದೀಗ ಆರಂಭವಾಗಿದೆ.

ಧಾರವಾಡ, ರಾಯಚೂರು, ಹಾಸನ ಮತ್ತು ಬೆಂಗಳೂರನ್ನು ಸ್ಥಾಪನೆಗಾಗಿ ಆಯ್ದುಕೊಳ್ಳಲಾಗಿದೆ. ನಮ್ಮ ನಗರದಲ್ಲೇ ಸ್ಥಾಪನೆಯಾಗಲಿ ಎಂದು ಪ್ರಭಾವಿ ವ್ಯಕ್ತಿಗಳು ಲಾಬಿ ಆರಂಭ ಮಾಡಿದರೂ ಆಶ್ಚರ್ಯವಿಲ್ಲ.[ಕೇಂದ್ರ ಬಜೆಟ್ 2015-16: ಯಾವುದು ಏರಿಕೆ? ಯಾವ್ದು ಇಳಿಕೆ?]

ಕಡೆಗೂ ಕರ್ನಾಟಕಕ್ಕೆ ಜಯ

ಐಐಟಿ ಸ್ಥಾಪನೆಯಾಗಬೇಕು ಎಂದು ರಾಜ್ಯ ಬಹಳ ಹಿಂದಿನಿಂದ ಮನವಿ ಮಾಡುತ್ತ ಬಂದಿತ್ತು. ರಾಜ್ಯ ಸರ್ಕಾರಗಳು ಸುಮಾರು 50 ವರ್ಷದಿಂದ ಇಟ್ಟಿದ್ದ ಬೇಡಿಕೆಗೆ ಅಂತೂ ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ.

ಚೆನ್ನೈ ನಲ್ಲಿ ಐಐಟಿ ಸ್ಥಾಪನೆಯಾಗುವುದಕ್ಕೆ(1959) ಮುನ್ನವೇ ಕರ್ನಾಟಕ ಈ ಬಗ್ಗೆ ಧ್ವನಿ ಎತ್ತಿತ್ತು. ಆದರೆ ರೇಸ್ ನಲ್ಲಿದ್ದ ತಮಿಳುನಾಡಿಗೆ ಜಯವಾಗಿ ಐಐಟಿ ಸ್ಥಾಪನೆ ಹಾಗೇ ಉಳಿದಿತ್ತು. ನಂತರ ಎಚ್.ಡಿ.ದೇವೇಗೌಡ ಪ್ರಧಾನ ಮಂತ್ರಿಯಾಗಿದ್ದಾಗ ಈ ಬಗ್ಗೆ ಕೆಲ ಪ್ರಕ್ರಿಯೆಗಳು ನಡೆದರೂ ಅಂತಿಮವಾಗಿ ಐಐಟಿ ಕೇಂದ್ರ ಆಂಧ್ರ ಪ್ರದೇಶದ ಪಾಲಾಗಿತ್ತು.[ಅರುಣ್ ಜೇಟ್ಲಿರಿಂದ ಪೂರ್ಣ ಪ್ರಮಾಣದ ಬಜೆಟ್]

ಐಐಟಿ ಸ್ಥಾಪನೆಗೆ ಯಾವ ಜಾಗ ಉತ್ತಮ?

ಐಐಟಿ ಸ್ಥಾಪನೆಗೆ ಇನ್ನೂ ಜಾಗ ನಿರ್ಧಾರವಾಗಬೇಕಿದೆ. ಕೇಂದ್ರದ ಮಾಜಿ ಸಚಿವ ಕಪಿಲ್ ಸಿಬಲ್ ನೀಡಿದ್ದ ಭರವಸೆಯಂತೆ ಐಐಟಿ ರಾಯಚೂರಿನಲ್ಲಿ ಸ್ಥಾಪನೆಯಾಗಬೇಕು. ಆದರೆ ಮಾಜಿ ಪ್ರಧಾನಿ ದೇವೇಗೌಡ ಹಾಸನದಲ್ಲಿ ಸ್ಥಾಪನೆಯಾಗಬೇಕು ಎಂದು ಲಾಬಿ ನಡೆಸುತ್ತಿದ್ದಾರೆ. ಹಾಸನ ಮತ್ತು ಬೆಂಗಳೂರು ಹತ್ತಿರದಲ್ಲಿದ್ದು ಅನುಕೂಲವಾಗಲಿದೆ ಎಂಬುದು ಗೌಡರ ಅಭಿಪ್ರಾಯ.

ಧಾರವಾಡದಲ್ಲಿ ಸ್ಥಾಪನೆ ಮಾಡಿದರೆ ಮೂಲಸೌಕರ್ಯ ಮತ್ತು ಉದ್ಯೋಗವಕಾಶಗ ಹೆಚ್ಚಳಕ್ಕೆ ಕಾರಣವಾಗುತ್ತದೆ. ಅಲ್ಲದೇ ಹಾಸನ ಮತ್ತು ರಾಯಚೂರಿಗೆ ಹೋಲಿಸಿದರೆ ಧಾರವಾಡದ ಪರಿಸರವೇ ಉತ್ತಮವಾಗಿದೆ ಎಂದು ಸ್ಥಳೀಯ ನಾಯಕರು ಲಾಬಿ ಶುರುವಿಟ್ಟುಕೊಂಡಿದ್ದಾರೆ.

ಬೆಂಗಳೂರಿಗೆ ಬೇಕೆ?

ಬೆಂಗಳೂರಲ್ಲಿ ಈಗಾಗಲೇ ಇಂಥ ಸಾಕಷ್ಟು ಸಂಸ್ಥೆಗಳಿವೆ ಎಂಬುದು ಕೆಲರಾಜಕಾರಣಿಗಳ ವಾದ. ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರಿನಲ್ಲೇ ಇದ್ದು ಯಾವ ಕಾರಣಕ್ಕೂ ರಾಜಧಾನಿಯಲ್ಲಿ ಸ್ಥಾಪನೆ ಮಾಡುವುದು ಬೇಡ ಎಂದು ವಾದ ಮಂಡಿಸಲಾಗುತ್ತಿದೆ.

ಆದರೆ ಬೆಂಗಳೂರಿನಲ್ಲಿ ಸ್ಥಾಪನೆ ಮಾಡುವುದರಿಂದ ಹೆಚ್ಚಿನ ವಿದ್ಯಾರ್ಥಿಗಳನ್ನು ಸೆಳೆಯಬಹುದು ಎಂಬ ಲೆಕ್ಕಾಚಾರವೂ ಇದೆ. ಬೆಂಗಳೂರಿನಲ್ಲಿ ಸ್ಥಾಪನೆಗೆ ಮುಂದಾದರೆ ಜಾಗದ ಸಮಸ್ಯೆಯೂ ಎದುರಾಗಬಹುದು. ಎಕರೆಗಟ್ಟಲೇ ಭೂಮಿಯನ್ನು ಸೂಕ್ತ ಸ್ಥಳದಲ್ಲಿ ಒದಗಿಸಿಕೊಡುವುದು ಸರ್ಕಾರಕ್ಕೆ ಸಮಸ್ಯೆಯಾಗಿ ಪರಿಣಮಿಸಬಹುದು.

ಒಟ್ಟಿನಲ್ಲಿ ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಐಐಟಿ ಸ್ಥಾಪನೆಗೆ ಅವಕಾಶ ಸಿಕ್ಕಿದೆ. ವಿದ್ಯಾರ್ಥಿಗಳಿಗೆ ಮತ್ತು ಸಂಶೋಧನೆಗೆ ನೆರವಾಗುವಂಥ ರೀತಿಯಲ್ಲಿ ಯೋಜನೆಯ ಸಾಕಾರ ಮಾಡಬೇಕಿದೆ.

ಹಾಗಾದರೆ ನಿಮ್ಮ ದೃಷ್ಟಿಯಲ್ಲಿ ರಾಜ್ಯದ ಯಾವ ಜಿಲ್ಲೆಯಲ್ಲಿ ಐಐಟಿ ಕೇಂದ್ರ ಸ್ಥಾಪನೆಯಾದರೆ ಒಳ್ಳೆಯದು? ನಿಮ್ಮ ಮತವನ್ನು ಇಲ್ಲಿ ದಾಖಲಿಸಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Read in English: Will B'luru have an IIT?
English summary
A long standing demand by Karnataka became a reality in the recently presented Union Budget when Arun Jaitley announced that an IIT would come up in the state. While there is much to cheer about this, the question is where exactly would an IIT be set up in Karnataka. The choices are Dharwad, Raichur, Hassan and Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more