ಐಐಟಿ ಎಲ್ಲಿ ಸ್ಥಾಪನೆ ಆಗಬೇಕು? ಉತ್ತರ ಸಿಕ್ಕಿದೆ!

ಬೆಂಗಳೂರು, ಮಾ. 5 : ಕರ್ನಾಟಕದಲ್ಲಿ ಐಐಟಿ ಎಲ್ಲಿ ಸ್ಥಾಪನೆಯಾಗಬೇಕು? ಇದು ಮಿಲಿಯನ್ ಡಾಲರ್ ಪ್ರಶ್ನೆ. ಈ ಪ್ರಶ್ನೆಗೆ ಕರ್ನಾಟಕದ ಜನತೆ ಅತ್ಯುತ್ಸಾಹದಿಂದ ಉತ್ತರಿಸಲು ಶುರುಮಾಡಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಂತೂ ದಿನ ಬೆಳಗಾದರೆ ಇದೇ ಚರ್ಚೆ.

ಐಐಟಿ ನಮ್ಮ ಊರಿಗೆ ಬರಲಿ ಎಂದು ಆಶಿಸುವವರ ಉದ್ದೇಶಗಳ ಹಿಂದೆ ನಾನಾ ಸಂಗತಿಗಳು ಕೆಲಸ ಮಾಡುತ್ತಿವೆ. ರಿಯಲ್ ಎಸ್ಟೇಟ್ ಕುಳಗಳಿಂದ ಹಿಡಿದು ಶಿಕ್ಷಣ ಕ್ಷೇತ್ರದ ಹುರಿಯಾಳುಗಳವರೆಗೆ ಎಲ್ಲರೂ ಅವರವರ ಮೂಗಿನ ನೇರಕ್ಕೆ ನೋಡುತ್ತಿದ್ದಾರೆ.[ಐಐಟಿ ಕರ್ನಾಟಕದ ಯಾವ ಜಿಲ್ಲೆಗೆ ಹೋಗಬೇಕು?]

iit

ಇನ್ನು ವಿದ್ಯಾರ್ಥಿಗಳು, ಸಂಶೋಧಕರಲ್ಲೇ ಕೆಲವು ಭಿನ್ನಾಭಿಪ್ರಾಯಗಳಿವೆ. ಈಗಿರುವ ಶಿಕ್ಷಣ ಸಂಸ್ಥೆಗಳನ್ನು ಮೊದಲು ಸರಿ ಮಾಡಿ ಆನಂತರ ಐಐಟಿ ಅಂತಾರೆ. ಹಾಗೆ ನೋಡಿದರೆ ಕರ್ನಾಟಕಕ್ಕೆ ಐಐಟಿ ಬೇಡವೇಬೇಡ ಎಂದು ವಾದಿಸುವವರ ಜತೆಗೆ, ರೀ ಐಐಟಿ ನಮ್ಮೂರಿಗೇ ಬರಲಿರೀ ಎಂದು ಹಠ ಹಿಡಿದವರೂ ಇದ್ದಾರೆ.

ಈ ಮಧ್ಯೆ ಐಐಟಿ ಕೇಂದ್ರ ಎಲ್ಲಿ ಸ್ಥಾಪನೆ ಆಗಬೇಕು ಎಂಬ ಆಯ್ಕೆಯನ್ನು ನಮ್ಮ ಓದುಗರಿಗೇ ಬಿಡಲಾಗಿತ್ತು. ಸರ್ಕಾರ ಸೂಚಿಸಿದ ಧಾರವಾಡ, ಬೆಂಗಳೂರು, ರಾಯಚೂರು ಮತ್ತು ಹಾಸನ - ನಾಲ್ಕು ಆಯ್ಕೆಗಳನ್ನು ನೀಡಿ ಮತದಾನಕ್ಕೆ ಅವಕಾಶ ಮಾಡಲಾಗಿತ್ತು.

ಈ ಮತದಾನದ ಫಲಿತಾಂಶ ಹೊರಬಿದ್ದಿದೆ, ಅಂದರೆ ಯಾರಿಗೆ ಯಾವ ಜಿಲ್ಲೆ ಇಷ್ಟ ಎಂಬ ಮತ ಎಣಿಕೆ ಕಾರ್ಯ ನಡೆದಿದೆ. ಮತದಾನದಲ್ಲಿ ಇದುವರೆಗೆ 19,750 ಓದುಗರು ಪಾಲ್ಗೊಂಡಿದ್ದಾರೆ. ಓಟುಗಳನ್ನು ಗಮನಿಸಿದರೆ ಧಾರವಾಡ ಗೆದ್ದಿದೆ. ಧಾರವಾಡಕ್ಕೆ ಅಭಿನಂದನೆಗಳನ್ನು ಹೇಳೋಣವೇ!

ಕೇವಲ ಮತಗಳಷ್ಟೇ ಅಲ್ಲ. ಇಂಥ ಜಿಲ್ಲೆಗೇ ಐಐಟಿ ಯಾಕೆ ಹೋಗಬೇಕು, ಹೋಗಬಾರದು ಎಂಬ ಬಗ್ಗೆ ಓದುಗರು ಕಾಮೆಂಟುಗಳ ಮೂಲಕ ಸಮರ್ಥಿಸಿಕೊಂಡಿದ್ದಾರೆ. ಒಟ್ಟಾರೆ ಇಲ್ಲೂ ಧಾರವಾಡಕ್ಕೇ ಮೊದಲ ಸ್ಥಾನ, ಎರಡನೇ ಸ್ಥಾನದಲ್ಲಿ ರಾಯಚೂರಿದೆ. ನಾಗರಿಕರ ಪ್ರತಿಕ್ರಿಯೆಗಳನ್ನು ಆಧರಿಸಿ ಐಐಟಿಯ ಸ್ಥಾಪನೆಯ ಕೆಲವು ಬೇಕು-ಬೇಡಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

iit

ಬೆಂಗಳೂರಿಗೆ ಬೇಡವೇ ಬೇಡ
ಬೆಂಗಳೂರಿನಲ್ಲಿ ಈಗಾಗಲೇ ಸಾಕಷ್ಟು ವಿದ್ಯಾ ಸಂಸ್ಥೆಗಳಿವೆ. ಇದರರ್ಥ ಸಾಕಷ್ಟು ಉತ್ತರ ಭಾರತೀಯರು ಬಂದು ನೆಲೆಸಿದ್ದಾರೆ. ಈಗ ಐಐಟಿಯನ್ನು ಸ್ಥಾಪನೆ ಮಾಡಿದರೆ ಮತ್ತಷ್ಟು ಜನ ಅನ್ಯ ಭಾಷಿಕರು ಆಗಮಿಸುತ್ತಾರೆ ಎಂದು ಒಂದು ವರ್ಗ ಕಾರಣ ನೀಡಿದೆ. ಬೆಂಗಳೂರಿಗೆ ಅಭಿವೃದ್ಧಿ ಅಜೀರ್ಣವಾಗಿದ್ದು ಹಿಂದುಳಿದ ಜಿಲ್ಲೆಗಳಲ್ಲಿ ಸ್ಥಾಪನೆ ಮಾಡಿದರೆ ಏನು ತಪ್ಪು? ಎಂಬ ತಕರಾರು ಜನರಿಂದ ಕೇಳಿಬಂದಿದೆ.

ಯೋಜನೆ ಮೊದಲು ಸಾಕಾರಗೊಳ್ಳಲಿ
ಬೆಂಗಳೂರಿನಲ್ಲಿರುವ ಐಟಿ ಕಂಪನಿಗಳ ಒಡೆತನ ಎಷ್ಟು ಜನ ಕನ್ನಡಿಗರ ಕೈಲ್ಲಿದೆ? ಹಾಗಾಗಿ ಯಾವ ಊರಲ್ಲಿ ಸ್ಥಾಪನೆಯಾಗಬೇಕು ಎನ್ನುವುದಕ್ಕಿಂತ ಮೊದಲು ರಾಜ್ಯದಲ್ಲಿ ಐಐಟಿ ಕೇಂದ್ರ ನಿರ್ಮಾಣವಾಗುವುದು ಮುಖ್ಯ. ಉನ್ನತ ಮಟ್ಟದ ಶಿಕ್ಷಣಕ್ಕೆ ಬೇರೆ ರಾಜ್ಯದ ಬಾಗಿಲು ಬಡಿಯುವುದು ತಪ್ಪಿದರೆ ಸಾಕು ಎಂಬ ಅಭಿಪ್ರಾಯಗಳು ತೇಲಿಬಂದಿವೆ.

ಧಾರವಾಡಕ್ಕೆ ಅತಿ ಹೆಚ್ಚು ಮತ
ಉತ್ತರ ಕರ್ನಾಟಕ ಭಾಗದ ಶಿಕ್ಷಣ ಕೇಂದ್ರ ಧಾರವಾಡದಲ್ಲಿ ಐಐಟಿ ಕೇಂದ್ರ ಸ್ಥಾಪನೆಯಾಗಬೇಕು. ಪ್ರಾದೇಶಿಕ ಅಸಮತೋಲನ ನಿವಾರಣೆ ಒಂದು ಪರಿಹಾರವಾದರೆ, ಉದ್ಯೋಗ ಮತ್ತು ಅವಕಾಶಗಳ ನಿರ್ಮಾಣ ಹಾಗೂ ಉತ್ತರ ಕರ್ನಾಟಕ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮನೆ ಬಾಗಿಲಲ್ಲಿ ದೊರೆತಂತಾಗುತ್ತದೆ ಎಂದು ಸಾಮಾಜಿಕ ಜಾಲತಾಣದ ಮುಖಾಂತರ ಜನರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ರಾಯಚೂರ್ ಗ್ ಬರ್ಲಿ ಬಿಡ್ರೀ...
ಪ್ರತಿ ಬಾರಿಯೂ ಪ್ರಮುಖ ಯೋಜನೆಗಳ ಸಾಕಾರದಲ್ಲಿ ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ, ಗಡಿ ಭಾಗಕ್ಕೆ ಅನ್ಯಾಯ ಮಾಡಲಾಗುತ್ತಿದೆ. ಈ ಸಾರಿಯಾದರೂ ಸರ್ಕಾರಗಳು 'ದೊಡ್ಡ ಮನಸ್ಸು' ಮಾಡಬೇಕು ಎಂಬುದು ರಾಯಚೂರಿಗೆ ಮತ ಚಲಾಯಿಸಿದವರ ಅಭಿಪ್ರಾಯ.

ದಾವಣಗೆರೆ ಏನು ಕಡಿಮೆಯೇ?
ರಾಜ್ಯದ ಮಧ್ಯ ಭಾಗದಲ್ಲಿರುವ ದಾವಣಗೆರೆಯಲ್ಲಿ ಸ್ಥಾಪನೆ ಮಾಡಿದರೆ ಎಂಥ ತಪ್ಪು? ಚಿತ್ರದುರ್ಗ ಜಿಲ್ಲೆ ಚೆಳ್ಳಕೆರೆಯಲ್ಲಿ ನಿರ್ಮಾಣವಾಗಲಿ ಎಂಬ ಕೂಗುಗಳು ಜೋರಾಗಿಯೇ ಕೇಳಿಬಂದಿವೆ.

ಹಾಸನಕ್ಕೇನಾಗಿದೆ?
ಹಾಸನ ಪ್ರಶಸ್ತವಾದ ಜಾಗ, ಏಕೆಂದರೆ, ಇಲ್ಲಿ ಸರ್ಕಾರದಿದಂದ ಮಾನ್ಯತೆ ಪಡೆದ ಯಾವ ದೊಡ್ಡ ಕಂಪನಿಗಳು ಇಲ್ಲ ಹಾಗಾಗಿ ಸರ್ಕಾರದಿಂದ ಮಾನ್ಯತೆ ಪಡೆದ ಒಂದಾದರೂ ಕಂಪನಿ. ಕರ್ನಾಟಕದ ಎಲ್ಲರಿಗೂ ಇಲ್ಲಿ ಉದ್ಯೋಗ ಸಿಗಲಿ. ಇದಕ್ಕೆ ದೇವೇಗೌಡರ ಶಿಫಾರಸು ಬೇಕಿಲ್ಲ ಎಂದು ಪ್ರತಿಕ್ರಿಯೆ ಬಂದಿದೆ.

ಮತ್ತೆಲ್ಲಿ ಒತ್ತಾಯ ಕೇಳಿ ಬಂದಿದೆ?
ಉಳಿದಂತೆ ಶಿವಮೊಗ್ಗ, ಉತ್ತರ ಕನ್ನಡ, ಮಂಗಳೂರು, ಚಿಕ್ಕಬಳ್ಳಾಪುರ, ಮುದ್ದೇನಹಳ್ಳಿ, ಮೈಸೂರು, ಚಾಮರಾಜ ನಗರ, ಯಾದಗಿರಿ, ಕೊಡಗಿನಲ್ಲಿ ಸ್ಥಾಪನೆಮಾಡಿ ಎಂದು ಜನರು ಹೇಳಿದ್ದಾರೆ ಇದಕ್ಕೆ ಅವರದೇ ಆದ ಕಾರಣಗಳನ್ನು ನೀಡಿದ್ದಾರೆ. ಒಬ್ಬ ಮಹಾಶಯ ಕೆಂಗೇರಿಗೆ ಬರಲಿ ಅಂದಿದ್ದಾನೆ.

ಕೊನೆಗೇನು?
ಐಐಟಿ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿರುವುದು ಒಳ್ಳೆಯದೇ. ಯಾಕೆಂದರೆ ಸಾರ್ವಜನಿಕರ ಅಭಿಪ್ರಾಯ, ಬೇಕು-ಬೇಡಗಳನ್ನು ಅರಿತು ಸರಕಾರ ಅಂತಿಮ ನಿರ್ಧಾರ ಕೈಗೊಳ್ಳುವುದು ಸೂಕ್ತ. ಆದರೆ, ಒಂದು ಮಾತು : ಎಲ್ಲಾದರೂ ಆಗಲಿ ಆದರೆ ಬೆಂಗಳೂರಲ್ಲಿ ಬೇಡ ಎಂದು ವಾದಿಸುವವರ ದನಿಗೆ ಒನ್ ಇಂಡಿಯ ಕನ್ನಡ ಧ್ವನಿ ಸೇರಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+