Get Updates
Get notified of breaking news, exclusive insights, and must-see stories!

Jagadish Shettar: 'ಡಿಕೆ ಶಿವಕುಮಾರ್‌ನ ಕಾಂಗ್ರೆಸ್ನಿಂದ ಸಸ್ಪೆಂಡ್ ಮಾಡಿ'

ಹುಬ್ಬಳ್ಳಿ, ಫೆಬ್ರವರಿ 27: ಡಿಕೆ ಶಿವಕುಮಾರ್ ನಿಮ್ಮ ತತ್ವದ ವಿರುದ್ದ ಇದ್ರೆ ಅವರನ್ನು ಸಸ್ಪೆಂಡ್ ಮಾಡಿಬಿಡಿ ಎಂದು ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದರು. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸದ್ಗುರು ಅವರನ್ನು ಭೇಟಿ ಮಾಡಿರೋದು, ಅಮಿತ್ ಶಾ ಜೊತೆ ವೇದಿಕೆ ಹಂಚಿಕೊಂಡಿರುವ ವಿಚಾರ, ಕುಂಭಮೇಳದಲ್ಲಿ ಭಾಗಿಯಾಗಿರುವ ವಿಚಾರ ಚರ್ಚೆಯಾಗುತ್ತಿದೆ. ಪಕ್ಷದಲ್ಲೇ ವಿರೋಧ ವ್ಯಕ್ತವಾಗುತ್ತಿದೆ. ಇದೀಗ ಡಿಕೆ ಶಿವಕುಮಾರ್ ನಿಮ್ಮ ತತ್ವದ ವಿರುದ್ದ ಇದ್ರೆ ಅವರನ್ನು ಸಸ್ಪೆಂಡ್ ಮಾಡಿಬಿಡಿ ಎಂದು ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದರು.

ಇಂದು (ಗುರುವಾರ) ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಪ್ರತಿನಿಧಿಗಳ ಜೊತೆಗೆ ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದರಾದ ಜಗದೀಶ್‌ ಶೆಟ್ಟರ್‌ ಅವರು ಮಾತನಾಡಿ, ಡಿ ಕೆ ಶಿವಕುಮಾರ್‌ ಅವರು ಕುಂಭಮೇಳಕ್ಕೆ ಹೋಗಿರೋದು,ಕೊಯಮತ್ತೂರಗೆ ಹೋಗಿರೋದು ಸಹಜ. ಇದರಲ್ಲಿ ದೊಡ್ಡಸ್ಥಿಕೆ ಏನಿಲ್ಲ. ಇದು ಸರಿ ಆಗಲ್ಲ ಅಂದ್ರೆ,ಡಿಕೆ ಶಿವಕುಮಾರ್ ಸಸ್ಪೆಂಡ್ ಮಾಡಿ. ಅವರು ನಿಮ್ಮ ಪಕ್ಷದ ತತ್ವ ಸಿದ್ದಾಂತಕ್ಕೆ ವಿರೋಧವಾಗಿದ್ರೆ ಅವರನ್ನು ಪಾರ್ಟಿಯಿಂದ ಹೊರಗೆ ಹಾಕಿ ಎಂದು ಜಗದೀಶ್‌ ಶೆಟ್ಟರ್‌ ಅವರು ಹೇಳಿದರು.

If It Goes Against Your Ideology Suspend Dk Shivakumar Says Jagadish Shettar

ಕಾಂಗ್ರೆಸ್ ಗೆ ಹಿಂದೂಗಳ ಬಗ್ಗೆ ದ್ವೇಷ ಇದೆ. ಇದರಿಂದ ಕಾಂಗ್ರೆಸ್ ಉದ್ದಾರ ಆಗಲ್ಲ, ಹಿಂದೂಗಳ ಇಲ್ಲದೆ ನೀವ ರಾಜಕಾರಣ ಮಾಡ್ತೀನಿ ಅಂದರೆ ಅದು ನಿಮ್ಮ ಹಣೆಬರಹ. ಹಿಂದೂಗಳನ್ನ ಕೀಳಾಗಿ ಕಾಣೋದೆ, ಅವರ ಅವನತಿಗೆ ಕಾರಣ ಎಂದ ಅವರು, ಮಲ್ಲಿಕಾರ್ಜುನ ಖರ್ಗೆ,ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಹಿಂದೂ ವಿರೋಧಿಯಾಗಿವೆ. ಈ ದೇಶ ಹಿಂದೂಗಳ ದೇಶ,ಹಿಂದೂ ರಾಷ್ಟ್ರ ಅನ್ನೋ ಪರಂಪರೆ ಇದೆ. ಇದಕ್ಕೆ ಎಲ್ಲಿ ಅಡ್ಡಿಯಾಗಬಾರದು. ಕಮ್ಯುನಿಸ್ಟರು ಕೂಡಾ ಹಿಂದೂ ದೇವಾಲಯಕ್ಕೆ ಹೋಗಿದ್ದಾರೆ. ಅವರು ಕೂಡಾ ದೇವಸ್ಥಾನಕ್ಕೆ ಹೋಗಿದ್ದಾರೆ. ಕಾಂಗ್ರೆಸ್ ನವರು ಎಷ್ಟು ಜನ ಕುಂಭಮೇಳ ಕ್ಕೆ ಹೋಗಿದ್ದಾರೆ. ರಾಜಕಾರಣ ಕ್ಕೆ ಧರ್ಮಕ್ಕೆ ತಳಕು ಹಾಕಬಾರದು ಎಂದು ಮಾಜಿ ಸಿಎಂ ಹಾಗೂ ಸಂಸದರಾದ ಜಗದೀಶ್‌ ಶೆಟ್ಟರ್‌ ಅವರು ಸಲಹೆ ನೀಡಿದರು.

ಬೆಳಗಾವಿಯಲ್ಲಿ ಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಬೆಳಗಾವಿ ಸಂಸದನಾಗಿ ಕೆಲಸ ಮಾಡತಿದೀನಿ. ಅಲ್ಲಿನ ಜನ ಎಲ್ಲರೂ ನಂಗೆ ಸಪೋರ್ಟ್ ಮಾಡಿದ್ದಾರೆ. ಹಿಂದೆ ಮರಾಠರು ಮತ್ತು ಕನ್ನಡಿಗರ ನಡುವೆ ಗ್ಯಾಪ್ ಇತ್ತು. ಎಲ್ಲರೂ ಅಣ್ಣ ತಮ್ಮಂದಿರ ತರಹ ಕೆಲಸ ಮಾಡತೀದಾರೆ ಆದರೆ, ಸಂಘರ್ಷ ಮಾಡಲಿಕ್ಕೆ ಹೋಗಬಾರದು. ಆ ಘಟನೆ ಆಗಬಾರದಿತ್ತು, ಹಲ್ಲೆ ಮಾಡಿದವರ ವಿರುದ್ದ ಕ್ರಮ ಆಗಬೇಕು. ಪೊಕ್ಸೋ ಕೇಸ್ ಹಾಕಿದ್ದು ಕೂಡಾ ತಪ್ಪು. ಪೊಲೀಸ್ ಅಧಿಕಾರಿ ಮಾಡಿರೋ ತಪ್ಪು ಎಂದ ಶೆಟ್ಟರ್ ಅವರು, ಪೊಕ್ಸೋ ಕೇಸ್ ಹಾಕಿರೋ ಕಾರಣಕ್ಕೆ ಅದು ಹೆಚ್ಚಿನ ಮಹತ್ವ ಬಂತು. ನಾವೆಲ್ಲರೂ ಭಾರತದಲ್ಲಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+