ನಿರ್ದಿಷ್ಟ ಕೋಮಿನ ವ್ಯಕ್ತಿಗಳು ಆರೋಪಿಗಳಾದರೆ ಬಿಜೆಪಿಗೆ ಇನ್ನಿಲ್ಲದ ಸಂಭ್ರಮ!

ಬೆಂಗಳೂರು, ಜ 22: ಮಂಗಳೂರು ಬಾಂಬ್ ಪ್ರಕರಣದ ಆರೋಪಿ, ಉಡುಪಿ ಜಿಲ್ಲೆಯ ಇಂಜಿನಿಯರ್ ಪದವೀಧರ ಆದಿತ್ಯರಾವ್, ಶರಣಾದ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್, ಬಿಜೆಪಿ ವಿರುದ್ದ ತಿರುಗಿಬಿದ್ದಿದೆ.

Recommended Video

      ಕಾಶ್ಮೀರ ವಿಚಾರದಲ್ಲಿ ಟ್ರಂಪ್ ಮಧ್ಯಸ್ತಿಕೆ | Donald Trump | Kashmir | India | Oneindia kannada

      ಮಂಗಳೂರಿನ ಬಾಂಬ್ ಪ್ರಕರಣವನ್ನು 'ಪ್ರಹಸನ' ಎಂದು ಲೇವಡಿ ಮಾಡಿರುವ ಕುಮಾರಸ್ವಾಮಿ, "ಈ ಬಾಂಬ್ ಪ್ರಹಸನದ ಸತ್ಯಾಸತ್ಯತೆ ಹೊರಹಾಕಿ ಎಂದು ರಾಜ್ಯ ಸರಕಾರಕ್ಕೆ ಒತ್ತಾಯ ಮಾಡುತ್ತೇನೆ" ಎಂದು ಹೇಳಿದ್ದರು.

      ಮಂಗಳೂರು ಪ್ರಕರಣದ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, "ಒಂದು ನಿರ್ದಿಷ್ಟ ಕೋಮಿನವರು ಆರೋಪಿಗಳಾದರೆ ಬಿಜೆಪಿಗೆ ಇನ್ನಿಲ್ಲದ ಸಂಭ್ರಮ" ಎಂದು ಲೇವಡಿ ಮಾಡಿದೆ.

      "ಕರ್ನಾಟಕದಲ್ಲಿ ಶಾಂತಿ ಸುವ್ಯವಸ್ಥೆ ಆಂತರಿಕ ಸುವ್ಯವಸ್ಥೆಯಲ್ಲಿ ವಿಫಲವಾಗಿದೆ ಬಿಜೆಪಿ ಸರ್ಕಾರ. ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಪ್ರಕರಣವನ್ನು ಬಿಜೆಪಿಯವರು, ಮನಸೋ ಇಚ್ಛೆ ವಿಶ್ಲೇಷಣೆ ಮಾಡುವ ಮೂಲಕ ಜನತೆಯ ದಿಕ್ಕು ತಪ್ಪಿಸಲು, ತನಿಖೆಯ ದಿಕ್ಕು ತಪ್ಪಿಸಲು ಪ್ರಭಾವವನ್ನು ಬೀರಲು ಪ್ರಯತ್ನಿಸುತ್ತಿದ್ದಾರೆ"ಎಂದು ಕಾಂಗ್ರೆಸ್ ಆರೋಪಿಸಿದೆ.

      ಮಂಗಳೂರು ಬಾಂಬ್ ಪ್ರಕರಣದ ಆರೋಪಿ ಶರಣಾಗತಿ

      ಮಂಗಳೂರು ಬಾಂಬ್ ಪ್ರಕರಣದ ಆರೋಪಿ ಶರಣಾಗತಿ

      "ಮಂಗಳೂರು ಬಾಂಬ್ ಪ್ರಕರಣದ ಆರೋಪಿ ಶರಣಾಗಿದ್ದು, ಘಟನೆಗೆ ಕಾರಣ, ನಿರುದ್ಯೋಗವೇ? ಪ್ರಚೋದನೆಯೇ? ಬೇರೆ ಏನಾದರೂ ಕಾರಣವಿದೆಯೆ ಎನ್ನುವ ಸತ್ಯಾಸತ್ಯತೆ ಪತ್ತೆಹಚ್ಚುವುದು ಈಗ ಪೊಲೀಸರ ಜವಾಬ್ದಾರಿ. ಆರೋಪಿಯ ವಿಷಯದಲ್ಲಿ ಬಿಜೆಪಿಗೆ ನಿರಾಸೆಯಾಗಿದೆ. 'ರಾವ್' ಎಂಬ ಮನೆತನದ ಹೆಸರಿಗಿಂತ ಬೇರೆ ಇದ್ದರೆ ಹೆಚ್ಚು ಸಂಭ್ರಮಿಸುತ್ತಿದ್ದರು" ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

      ಎಂ.ಎಂ ಕಲ್ಬುರ್ಗಿ, ಗೌರಿ ಲಂಕೇಶ್ ಹತ್ಯೆ ಪ್ರಕರಣ

      ಎಂ.ಎಂ ಕಲ್ಬುರ್ಗಿ, ಗೌರಿ ಲಂಕೇಶ್ ಹತ್ಯೆ ಪ್ರಕರಣ

      "ಎಂ.ಎಂ ಕಲ್ಬುರ್ಗಿ, ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಸನಾತನ ಸಂಸ್ಥೆಯ ಪಾತ್ರವಿದೆ ಎನ್ನುವ ಆರೋಪ ಕೇಳಿಬಂದಾಗ @BJP4Karnataka ಸನಾತನ ಸಂಸ್ಥೆಯನ್ನು ಸಮರ್ಥಿಸಿಕೊಂಡಿತ್ತು. ಆದರೆ ಆ ಕೃತ್ಯಗಳಲ್ಲಿ ಸನಾತನ ಸಂಸ್ಥೆಯ ಪಾತ್ರವಿದೆ ಎನ್ನುವುದಕ್ಕೆ ಪೂರಕ ಸಾಕ್ಷ್ಯಗಳು ಸಿಗುತ್ತಾ ಹೋದಂತೆಲ್ಲಾ ಅವರು ಜಾಣ ಮೌನ ವಹಿಸಿದರು" - ದಿನೇಶ್ ಗುಂಡೂರಾವ್.

      ನಿರ್ದಿಷ್ಟ ಕೋಮಿನ ವ್ಯಕ್ತಿಗಳು ಆರೋಪಿಗಳಾದರೆ ಬಿಜೆಪಿಗೆ ಇನ್ನಿಲ್ಲದ ಸಂಭ್ರಮ

      ನಿರ್ದಿಷ್ಟ ಕೋಮಿನ ವ್ಯಕ್ತಿಗಳು ಆರೋಪಿಗಳಾದರೆ ಬಿಜೆಪಿಗೆ ಇನ್ನಿಲ್ಲದ ಸಂಭ್ರಮ

      "ಒಂದು ನಿರ್ದಿಷ್ಟ ಕೋಮಿನ ವ್ಯಕ್ತಿಗಳು ಆರೋಪಿಗಳಾದರೆ @BJP4Karnataka ಹೆಚ್ಚು ಸಂಭ್ರಮಿಸುತ್ತದೆ. ಆ ಆರೋಪಿಯನ್ನು ಎಲ್ಲರೂ ಸೇರಿ ಟೀಕಿಸುತ್ತಾರೆ, ಕೃತ್ಯವನ್ನು ಖಂಡಿಸುತ್ತಾರೆ, ದ್ವೇಷದ ಹೇಳಿಕೆ ನೀಡುತ್ತಾರೆ. ಆದರೆ, ಅವರು ನಿರೀಕ್ಷಿಸಿದ ಕೋಮಿನ ವ್ಯಕ್ತಿ ಆರೋಪಿ ಅಲ್ಲ ಎಂದು ತಿಳಿಯುತ್ತಿದ್ದಂತೆ ಸುಮ್ಮನಾಗಿ ಬಿಡುತ್ತಾರೆ" - ದಿನೇಶ್ ಗುಂಡೂರಾವ್ ಟ್ವೀಟ್.

      ವಿದ್ರೋಹಿ ಕೃತ್ಯಗಳನ್ನು ಯಾವುದೇ ಧರ್ಮದವರು ಎಸಗಿದರೂ ಅದು ಭಯೋತ್ಪಾದನೆನೇ

      ವಿದ್ರೋಹಿ ಕೃತ್ಯಗಳನ್ನು ಯಾವುದೇ ಧರ್ಮದವರು ಎಸಗಿದರೂ ಅದು ಭಯೋತ್ಪಾದನೆನೇ

      "ವಿದ್ರೋಹಿ ಕೃತ್ಯಗಳನ್ನು ಯಾವುದೇ ಧರ್ಮದವರು ಎಸಗಿದರೂ ಅದು ಭಯೋತ್ಪಾದನೆಯೆ. ಆರೋಪಿ ಮುಸ್ಲಿಂ ಆಗಿದ್ದರೆ ಅವನ ವಿರುದ್ಧ ತಿರುಗೆ ಬೀಳುವುದು, ಹಿಂದು ಆಗಿದ್ದರೆ ಜಾರಿಕೊಳ್ಳುವುದು, ಪರೋಕ್ಷವಾಗಿ ಸಮರ್ಥಿಸಿಕೊಳ್ಳುವುದು ಸರಿಯಲ್ಲ. ಈಗಾಗಲೇ, @BJP4India ದೇಶದಲ್ಲಿ ಕೋಮು ವಿಷ ಹರಡಿ ದೇಶವನ್ನು ಒಡೆಯುವ ಕೆಲಸ ಮಾಡುತ್ತಿದೆ" - ದಿನೇಶ್ ಗುಂಡೂರಾವ್ .

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+