Get Updates
Get notified of breaking news, exclusive insights, and must-see stories!

ಲಿಂಗಾಯಿತರು ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ವಿರುದ್ಧ ಮತ ನೀಡಿ ಎಂದು ಹೇಳಿತಾ ಲಿಂಗಾಯತ, ವೀರಶೈವ ವಿಚಾರ ವೇದಿಕೆ!?

ಬೆಂಗಳೂರು, ಮೇ. 06: "ನಾವು ಹಿಂದುತ್ವದಲ್ಲಿ ಮುಂದುವರೆಯುತ್ತೇವೆ. ನಮಗೆ ಲಿಂಗಾಯಿತ ಅಗತ್ಯವಿಲ್ಲ, ನಾವು ಇನ್ನೆಷ್ಟು ದಿನ ಲಿಂಗಾಯಿತರ ಓಲೈಕೆ ಮಾಡಿಕೊಂಡಿರಬೇಕು" ಎಂದು ಬಿಜೆಪಿಯ ಹಿರಿಯ ನಾಯಕ ಬಿ.ಎಲ್. ಸಂತೋಷ್ ಹೇಳಿದ್ದಾರೆ ಎಂಬ ವದಂತಿಗಳ ಬೆನ್ನಲ್ಲೇ ಕರ್ನಾಟಕ ಲಿಂಗಾಯತ ಮತ್ತು ವೀರಶೈವ ವೇದಿಕೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ ಎಂದು ಪತ್ರವೊಂದು ಭಾರಿ ವೈರಲ್ ಆಗುತ್ತಿದೆ.

ಪತ್ರದಲ್ಲಿ ಬಿ.ಎಲ್. ಸಂತೋಷ್ ಅವರ ಮಾತುಗಳು ಅವರ ಅಹಂಕಾರದ ಪ್ರತೀಕವಾಗಿವೆ ಎಂದು ಕಿಡಿಕಾರಲಾಗಿದ್ದು, "ಬಿಜೆಪಿ ಪಕ್ಷಕ್ಕೆ ಲಿಂಗಾಯಿತರ ಅಗತ್ಯವಿಲ್ಲದಿದ್ದರೆ, ಲಿಂಗಾಯಿತರಿಗೆ ಬಿಜೆಪಿ ಬೇಕಾಗಿಲ್ಲ" ಎಂದು ಹೇಳಲಾಗಿದೆ. ಜೊತೆಗೆ ಬಿ.ಎಸ್ ಯಡಿಯೂರಪ್ಪ ಅವರನ್ನು ಕಣ್ಣೀರು ಇಡುವಂತೆ ಮಾಡಿದೆ ಮತ್ತು ಲಿಂಗಾಯತ ನಾಯಕರನ್ನು ಬಿಜೆಪಿ ಕಡೆಗಣನೆ ಮಾಡುತ್ತಿದೆ ಎಂದು ಆರೋಪಿಸಿದೆ.

If BJP does not need Lingayats, then Lingayats dont need BJP

ವೈರಲ್ ಪತ್ರದ ಪೂರ್ಣ ಪಠ್ಯ ಇಲ್ಲಿದೆ

"ಬಿಜೆಪಿ ಪಕ್ಷಕ್ಕೆ ಲಿಂಗಾಯಿತರ ಅಗತ್ಯವಿಲ್ಲದಿದ್ದರೆ, ಲಿಂಗಾಯಿತರಿಗೆ ಬಿಜೆಪಿ ಬೇಕಾಗಿಲ್ಲ"

"ರಾಜ್ಯ ವಿಧಾನಸಭೆಗೆ ಮತ್ತೆ ಚುನಾವಣೆ ಬಂದಿದೆ. ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಾಮಾನಗಳನ್ನು ಗಮನಿಸಿದಾಗ ಲಿಂಗಾಯಿತ ಮತ್ತು ವೀರಶೈವ ಸಮುದಾಯಕ್ಕೆ ಆತಂಕಕಾರಿ ಬೆಳವಣಿಗೆಗಳು ಸ್ಪಷ್ಟವಾಗಿ ಗೋಚರಿಸುತ್ತಿದೆ. ವೈದಿಕಶಾಹಿ ಮನಸ್ಥಿತಿಯ ಮನುವಾದಿಗಳು ನಡೆಸುತ್ತಿರುವ ಕುತಂತ್ರ ಮೇಲುಗೈ ಸಾಧಿಸುತ್ತಿದೆಯೇನೋ ಎಂದೆನಿಸುತ್ತಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸುಳಿದಾಡುತ್ತಿರುವ ಭಾರತೀಯ ಜನತಾಪಕ್ಷದ ಸಂಘಟನಾ ಕಾರ್ಯದರ್ಶಿಗಳಾದ ಬಿ.ಎಲ್. ಸಂತೋಷ್ ಅವರು ಎಂದು ಹೇಳಲಾದ ಮಾತುಗಳು ಪುಷ್ಟಿಕರಿಸುತ್ತಿವೆ".

ಮೊನ್ನೆ ನಡೆದ ಸಭೆಯೊಂದರಲ್ಲಿ ಸನ್ಮಾನ್ಯ ಬಿ.ಎಲ್. ಸಂತೋಷ್‌ ರವರು ಹೇಳಿದ್ದಾರೆ ಎಂಬ ಹೇಳಿಕೆ ಇಡೀ ನಮ್ಮ ಸಮುದಾಯದ ಸ್ವಾಭಿಮಾನಕ್ಕೆ ಧಕ್ಕೆ ತರುವ ಆತಂಕಕಾರಿ ವಿಷಯವಾಗಿದೆ. ನಾವು 'ಹಿಂದುತ್ವದಲ್ಲಿ ಮುಂದುವರೆಯುತ್ತೇವೆ. ನಮಗೆ ಲಿಂಗಾಯಿತ ಅಗತ್ಯವಿಲ್ಲ, ನಾವು ಇನ್ನೆಷ್ಟು ದಿನ ಲಿಂಗಾಯಿತರ ಓಲೈಕೆ ಮಾಡಿಕೊಂಡಿರಬೇಕು ಎಂಬ ಬಿ.ಎಲ್. ಸಂತೋಷ್ ಅವರ ಮಾತುಗಳು ಅವರ ಅಹಂಕಾರದ ಪ್ರತೀಕವಾಗಿವೆ.

ಒಂದೆಡೆ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮತ್ತು ಅವರ ಸಂಪುಟದ ಲಿಂಗಾಯಿತ ಸಮುದಾಯದ ಮಂತ್ರಿಗಳು ನಾವುಗಳು ಬಸವಪಥದಲ್ಲೇ ಸಾಗುತ್ತಿದ್ದೇವೆ ಎನ್ನುವ ಘೋಷಣೆಗಳು ಮತ್ತು ಸಂತೋಷ್ ಅವರ ಮಾತುಗಳನ್ನೊಮ್ಮೆ ಮನನ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ. ಬೊಮ್ಮಾಯಿ ಅವರ ಸರ್ಕಾರ ಬಂದಾಗಿನಿಂದ ಭಾಜಪವು ಒಂದಲ್ಲಾ ಒಂದು ರೀತಿಯಲ್ಲಿ ಲಿಂಗಾಯಿತರ ಮೇಲೆ ಪ್ರತ್ಯಕ್ಷವಾಗಿ-ಪರೋಕ್ಷವಾಗಿ ದಬ್ಬಾಳಿಕೆಯನ್ನು ನಡೆಸುತ್ತಲೇ ಬರುತ್ತಿದೆ. ಕಳೆದ ಐದು ವರ್ಷಗಳಿಂದ ಗಮನಿಸಿದಾಗ ಪಠ್ಯಪುಸ್ತಕಗಳಲ್ಲಿ ವಚನಕಾರರ ವಚನಸಾಹಿತ್ಯವನ್ನು ಕೈಬಿಟ್ಟಿರುವುದು ಮತ್ತು ಬಸವಣ್ಣನವರ ವಿಚಾರಧಾರೆಯನ್ನು ತಿರುಚಿರುವುದು ಸ್ಪಷ್ಟವಾಗಿ ಗೋಚರಿಸಿದೆ.

If BJP does not need Lingayats, then Lingayats dont need BJP

2017ರಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಸನ್ಮಾನ್ಯ ಸಿದ್ಧರಾಮಯ್ಯನವರು 'ಮಲೆಗಳಲ್ಲಿ ಮದುಮಗಳು' ನಾಟಕದ ರೀತಿಯಲ್ಲಿಯಲ್ಲೇ ಬಸವಣ್ಣನವರ ಜೀವನ ಚರಿತ್ರೆಯನ್ನು ಕುರಿತ ನಾಟಕಕ್ಕೆ 75 ಲಕ್ಷ ರೂಪಾಯಿಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಬಿಡುಗಡೆ ಮಾಡಿ, 2018ರ ಹೊತ್ತಿಗೆ ಆ ನಾಟಕದ ಪ್ರದರ್ಶನಕ್ಕೆ ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳಲಾಗಿತ್ತು. ಆದರೆ ಆನಂತರ ಬಂದ ಭಾಜಪ ಸರ್ಕಾರ ಆ ನಾಟಕದ ಯೋಜನೆಯನ್ನೇ ಸ್ಥಗಿತಗೊಳಿಸಿದ್ದು, ಇದುವರೆಗೂ ಈ ನಾಟಕದ ಪ್ರದರ್ಶನಕ್ಕೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಹಾಗೂ ಅದೇ ಸಂದರ್ಭದಲ್ಲಿ ಲಿಂಗಾಯಿತ ಸ್ವತಂತ್ರಧರ್ಮದ ಹೋರಾಟವನ್ನು ಹತ್ತಿಕ್ಕುವ ಕೆಲಸ ಕೂಡ ನಡೆದಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಳೆದ ಐದು ವರ್ಷಗಳಿಂದ ತಮ್ಮ ಪ್ರಮುಖ ಯೋಜನೆಗಳಲ್ಲಿ ಒಂದಾಗಿರುವ ವಚನ ಸಂಗೀತೋತ್ಸವವನ್ನು ತನ್ನ ಯೋಜನೆಯಿಂದಲೇ ಕೈಬಿಟ್ಟಿರುವುದು ಲಿಂಗಾಯಿತ ಮತ್ತು ವೀರಶೈವ ಸಮುದಾಯಕ್ಕೆ ಮಾಡಿರುವ ದೊಡ್ಡ ದ್ರೋಹ, ಕೋವಿಡ್ ಸಂದರ್ಭದಲ್ಲಿ ವಚನ ಸಂಗೀತೋತ್ಸವ ಕಾರ್ಯಕ್ರಮ ನಡೆಸಲಾಗದೆ ಅದಕ್ಕೆ ಮೀಸಲಿಟ್ಟಿದ್ದ 90 ಲಕ್ಷ ರೂಪಾಯಿಗಳನ್ನು ಸನ್ಮಾನ್ಯ ಸಚಿವರಾದ ಶ್ರೀ ಸುನೀಲ್ ಕುಮಾರ್‌ರವರು ಕಾರ್ಕಳ ಉತ್ಸವಕ್ಕೆ ಬಳಸಿಕೊಂಡಿದ್ದು, ಅಲ್ಲಿ ವಚನಸಾಹಿತ್ಯದ ಒಂದೇ ಒಂದು ಕಾರ್ಯಕ್ರಮವನ್ನು ಸಹ ನಡೆಸದೆ ಕೇವಲ ವೈದಿಕಶಾಹಿ ಕಾರ್ಯಕ್ರಮಗಳನ್ನೇ ನಡೆಸಿ ನಮ್ಮ ಲಿಂಗಾಯಿತ ಸಮುದಾಯಕ್ಕೆ ಅಪಚಾರವೆಸಗಿದ್ದಾರೆ.

ಪ್ರತೀವರ್ಷ ಶರಣರ ಚಿಂತನೆಗಳಿಗೆ ಅನುಗುಣವಾಗಿ ರಾಜ್ಯಮಟ್ಟದಲ್ಲಿ ನಡೆಸಲಾಗುತ್ತಿದ್ದ ಶರಣರ ಜಯಂತಿಗಳನ್ನು ರಾಜ್ಯಮಟ್ಟದ ಕಾರ್ಯಕ್ರಮಗಳನ್ನು ರದ್ದುಮಾಡಿ, ಅದನ್ನು ಜಿಲ್ಲಾಮಟ್ಟದ ಕಾರ್ಯಕ್ರಮಗಳಾಗಿ ಆಯೋಜಿಸಿರುವುದು ಶರಣರಿಗೆ ಮಾಡಿದ ದೊಡ್ಡ ಅಪಚಾರ. ಹೀಗೆ ನಿರಂತರವಾಗಿ ಶರಣರ ಸಂಸ್ಕೃತಿಯ ಮೇಲೆ ದಬ್ಬಾಳಿಕೆ ಮಾಡುತ್ತಿರುವ ಭಾಜಪ ಸರ್ಕಾರವು ಇದೀಗ ಚುನಾವಣಾ ಸಂದರ್ಭದಲ್ಲಿಯೂ ತಮ್ಮ ವೈದಿಕಶಾಹಿ ಮನುವಾದಿ ಸಿದ್ಧಾಂತಗಳನ್ನು ಮುನ್ನಡೆಸಿಕೊಂಡು ಹೋಗುತ್ತಿದೆ.

ಇತ್ತೀಚಿನ ರಾಜಕೀಯ ಬೆಳವಣಿಗೆಯನ್ನು ಗಮನಿಸಿದಾಗ, ಮಾನ್ಯ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಅವರು ಕಣ್ಣೀರು ಹಾಕುವಂತೆ ಮಾಡಿದ್ದು ನಮ್ಮೆಲ್ಲರ ಕಣ್ಮುಂದೆ ಇದೆ. ಯಡಿಯೂರಪ್ಪ ನಂತರದ ನಾಯಕರ ಮೇಲೆ ದಾಳಿ ಶುರುಮಾಡಿದ್ದು, ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ, ಆಯನೂರು ಮಂಜುನಾಥ್, ಸಂಜಯ್ ಪಾಟೀಲ್, ಸೊಗಡು ಶಿವಣ್ಣ, ಗುಲ್ಬರ್ಗಾದ ಚಂದ್ರಶೇಖರ್ ಮುಂತಾದ ಪ್ರಭಾವಿ ಲಿಂಗಾಯಿತ ನಾಯಕರುಗಳನ್ನು ಮೂಲೆಗುಂಪು ಮಾಡಿರುವುದು ಸ್ಪಷ್ಟವಾಗಿದೆ.

ವಿ. ಸೋಮಣ್ಣನವರನ್ನು ಸಿದ್ದರಾಮಯ್ಯನವರ ವಿರುದ್ಧ ಸ್ಪರ್ಧಿಸಲು ನಿರ್ದೇಶನ ನೀಡಿ, ಅವರನ್ನು ಹರಕೆಯ ಕುರಿಯನ್ನಾಗಿ ಮಾಡಲಾಗಿದೆ. ಹೀಗೆ ಕರ್ನಾಟಕ ರಾಜಕಾರಣದಲ್ಲಿ ಲಿಂಗಾಯಿತ ನಾಯಕತ್ವವನ್ನು ನಿರ್ನಾಮ ಮಾಡುವ ಬಿಜೆಪಿಯ ಕುತಂತ್ರ ಇದೀಗ ಸ್ಪಷ್ಟವಾಗಿದೆ. ಸನ್ಮಾನ್ಯ ನಡ್ಡಾರವರು, ಮೋದಿ ಹಾಗೂ ಅಮಿತ್ ಶಾ ಅವರು ಲಿಂಗಾಯಿತರಿಗೆ ರಾಜ್ಯದ ಮುಂದಿನ ಮುಖ್ಯಮಂತ್ರಿಯೆಂದು ಬಿಂಬಿಸಲು ಆ ಸಮುದಾಯದ ರಾಜ್ಯಮಟ್ಟದ ಭಾಜಪದ ಮುಖಂಡರು ವಿನಂತಿಸಿದಾಗ ಅದನ್ನು ಸ್ಪಷ್ಟವಾಗಿ ನಿರಾಕರಿಸಿರುವುದು ದೊಡ್ಡ ದ್ರೋಹ.

ತಮ್ಮ ಭಾಷಣಗಳಲ್ಲಿ ಕಾಂಗ್ರೆಸ್ ಪಕ್ಷವು ಲಿಂಗಾಯಿತರಿಗೆ ದ್ರೋಹ ಮಾಡಿದೆ ಎಂದು ಎಲ್ಲೆಡೆ ಬಿಂಬಿಸುವ ಪ್ರಯತ್ನಗಳನ್ನು ರಾಷ್ಟ್ರಮಟ್ಟದ ನಾಯಕರುಗಳು ಮಾಡುತ್ತಿದ್ದು, ಇದು ಸತ್ಯಕ್ಕೆ ದೂರವಾದ ಮಾತು, ಎಸ್. ನಿಜಲಿಂಗಪ್ಪ, ಬಿ.ಡಿ. ಜತ್ತಿ, ವಿರೇಂದ್ರ ಪಾಟೀಲ್‌, ರಾಜಶೇಖರ ಮೂರ್ತಿ, ಎಸ್.ಆರ್. ಪಾಟೀಲ್, ಎಂ.ಬಿ. ಪಾಟೀಲ್ ಮುಂತಾದವರನ್ನು ರಾಜ್ಯಮಟ್ಟದಲ್ಲಿ ಮತ್ತು ಉಜ್ಯ ಮಟ್ಟದಲ್ಲಿ ಪ್ರಮುಖ ಸ್ಥಾನವನ್ನು ಕೊಟ್ಟು ನಿರಂತರವಾಗಿ ಗೌರವಿಸುತ್ತಿರುವುದು ಕಾಂಗ್ರೆಸ್‌ ಪಕ್ಷವೆಂದು ಸ್ಮರಿಸಬೇಕಾದ ಅಂಶ, ಆದಾಗಿ ಎಲ್ಲ ಲಿಂಗಾಯಿತ ಮತ್ತು ವೀರಶೈವ ಸಮುದಾಯದ ಬಂಧುಗಳು ಎಚ್ಚೆತ್ತುಕೊಂಡು ಬಿ.ಜೆ.ಪಿ.ಯನ್ನು ಸೋಲಿಸುವುದರ ಮೂಲಕ ಬಿಜೆಪಿಗೆ ತಕ್ಕಪಾಠವನ್ನು ಕಲಿಸಬೇಕಾಗಿರುವ ಸಂದರ್ಭ ಇದಾಗಿದೆ.

ಯಾವುದೇ ಪಕ್ಷವಾಗಿರಲಿ ವೀರಶೈವ ಲಿಂಗಾಯಿತ ಸಮುದಾಯವನ್ನು ಅಲಕ್ಷಿಸಿದರೆ ಬಸವಾಭಿಮಾನಿಗಳು ಸುಮ್ಮನೆ ಕೂರುವುದಿಲ್ಲವೆಂಬ ಸಂದೇಶ ಈ ಮೂಲಕ ನೀಡಬೇಕಾಗಿದೆ. ದಯಮಾಡಿ ಎಲ್ಲಾ ಸ್ವಾಭಿಮಾನಿ ಲಿಂಗಾಯಿತ ಬಂಧುಗಳು ಈ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಎಲ್ಲಾ ಕ್ಷೇತ್ರಗಳಲ್ಲಿ ಮತ ನೀಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ. ಈ ಮೂಲಕ ವೈದಿಕಶಾಹಿಗಳಿಗೆ ಮತ್ತು ಮನುವಾದಿಗಳಿಗೆ ಪಕ್ಕ ಬುದ್ಧಿ ಕಲಿಸಬೇಕೆಂದು ನಮ್ಮ ವಿನಂತಿ ಎನ್ನಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+