ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಕೆ ರವಿ ಅವರ ಮನೆಯಲ್ಲಿ ಡೆತ್‌ನೋಟ್ ಸಿಕ್ಕಿಲ್ಲ

|
Google Oneindia Kannada News

ಬೆಂಗಳೂರು, ಮಾ. 17 : ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಮನೆಯಲ್ಲಿ ಯಾವುದೇ ಡೆತ್‌ನೋಟ್ ದೊರಕಿಲ್ಲ ಎಂದು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಹೇಳಿದ್ದಾರೆ. ರವಿ ಅವರ ಸಾವಿನ ಕುರಿತು ಆಗ್ನೇಯ ವಿಭಾಗದ ಡಿಸಿಪಿ ರೋಹಿಣಿ ಕಟೋಚ್‌ ಸೆಪಟ್‌ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. [ಈ ಸಾವು ನ್ಯಾಯವೇ ಮತ ಹಾಕಿ]

ಕೋರಮಂಗಲ ಬಳಿಯ ತಾವರೆಕೆರೆ ರಸ್ತೆಯಲ್ಲಿರುವ ಪ್ರೆಸ್ಟೀಜ್ ಗ್ರೂಪ್‌ಗೆ ಸೇರಿದ 'ಸೇಂಟ್ ಜಾನ್ಸ್‌ವುಡ್ ಅಪಾರ್ಟ್‌ಮೆಂಟ್'ನಲ್ಲಿ ಸೋಮವಾರ ಸಂಜೆ ಡಿ.ಕೆ.ರವಿ ಅವರ ಮೃತದೇಹ ಪತ್ತೆಯಾಗಿತ್ತು. ಸ್ಥಳದಲ್ಲಿನ ಪರಿಶೀಲನೆ ಮುಗಿಸಿದ ಬಳಿಕ ಯಾವುದೇ ಡೆತ್‌ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. [ಡಿಕೆ ರವಿ ಸಾವು ಪ್ರಮುಖ ಘಟನಾವಳಿಗಳು]

DK Ravi

ಮಂಗಳವಾರ ರವಿ ಅವರ ದೂರವಾಣಿ ಕರೆ, ಈ-ಮೇಲ್‌ಗಳನ್ನು ಪೊಲೀಸರು ಪರಿಶೀಲನೆ ನಡೆಸಲಿದ್ದು ಡೆತ್‌ನೋಟ್ ಇರಬಹುದೇ ಎಂಬ ಬಗ್ಗೆ ತನಿಖೆ ನಡೆಸಲಿದ್ದಾರೆ. ಸೋಮವಾರ ರಾತ್ರಿ ಡಿಕೆ ರವಿ ಅವರ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಅವರು ಪ್ರಾಥಮಿಕ ಮಾಹಿತಿಯಿಂದ ಇದು ಆತ್ಮಹತ್ಯೆ ಎಂದು ತಿಳಿದುಬಂದಿದೆ ಎಂದು ಹೇಳಿದ್ದಾರೆ. [ಐಎಎಸ್ ಅಧಿಕಾರಿ ಡಿಕೆ ರವಿ ನಿಗೂಢ ಸಾವು]

ಸೋಮವಾರದ ರವಿ ಅವರ ದಿನಚರಿ

* ಅಪಾರ್ಟ್‌ಮೆಂಟ್‌ನ 903 ಸಂಖ್ಯೆಯ ಫ್ಲ್ಯಾಟ್‌ನಲ್ಲಿ ರವಿ ಪತ್ನಿ ಕುಸುಮಾ ಅವರೊಂದಿಗೆ ವಾಸವಾಗಿದ್ದರು
* ಶನಿವಾರ ಮತ್ತು ಭಾನುವಾರ ನಾಗರಭಾವಿಯಲ್ಲಿರುವ ಮಾವನ ಮನೆಯಲ್ಲಿರುತ್ತಿದ್ದರು
* ಸೋಮವಾರ ಮಾವನ ಮನೆಯಿಂದಲೇ ಕೋರಮಂಗಲದಲ್ಲಿರುವ ಕಚೇರಿಗೆ ಬಂದಿದ್ದರು
* ಬೆಳಗ್ಗೆ 10.15ರ ಸುಮಾರಿಗೆ ಕಚೇರಿ ತಲುಪಿದ ಅವರು ನಂತರ ಅಪಾರ್ಟ್‌ಮೆಂಟ್‌ಗೆ ಕಾರಿನಲ್ಲಿ ಮರಳಿದ್ದರು
* 11.15ರ ಸುಮಾರಿಗೆ ಸೇಂಟ್ ಜಾನ್ಸ್‌ವುಡ್ ಅಪಾರ್ಟ್‌ಮೆಂಟ್ ನಲ್ಲಿರುವ ಮನೆಗೆ ಆಗಮಿಸಿದ್ದರು
* ಕಾರು ಚಾಲಕನಿಗೆ ಕಾಯುತ್ತಿರುವಂತೆ ಹೇಳಿ 9 ಮಹಡಿಯಲ್ಲಿರುವ ಮನೆಗೆ ಹೋಗಿದ್ದರು
* ಪತ್ನಿ ಕುಸುಮಾ ಅವರ ಫೋನ್ ಕರೆಗೆ ಬೆಳಗ್ಗೆಯಿಂದ ರವಿ ಅವರು ಉತ್ತರ ನೀಡಿರಲಿಲ್ಲ
* ಮಧ್ಯಾಹ್ನದ ಊಟವನ್ನು ಕಚೇರಿಗೆ ಕಳುಹಿಸುವಂತೆ ಮನೆಯಿಂದ ಹೊರಡುವಾಗ ತಿಳಿಸಿದ್ದರು
* ರವಿ ಅವರು ಹೇಳಿದಂತೆ ಕಚೇರಿಗೆ ಮಧ್ಯಾಹ್ನದ ಊಟ ಕಳುಹಿಸಲಾಗಿತ್ತು
* ಮಧ್ಯಾಹ್ನ ಸಹ ಕುಸುಮಾ ಅವರ ಕರೆಯನ್ನು ರವಿ ಅವರು ಸ್ವೀಕರಿಸಿರಲಿಲ್ಲ
* ಮಧ್ಯಾಹ್ನ ಕಚೇರಿಗೆ ಕರೆ ಮಾಡಿದಾಗ ಮನೆಗೆ ಹೋಗಿದ್ದಾರೆ ಎಂಬ ಮಾಹಿತಿ ಕುಸುಮಾ ಅವರಿಗೆ ಸಿಕ್ಕಿತ್ತು
* ಸಂಜೆಯೂ ಕರೆ ಸ್ವೀಕರಿಸದಿದ್ದಾಗ ಕುಸುಮಾ ಅವರು ತಂದೆಯ ಜೊತೆ ಅಪಾರ್ಟ್‌ಮೆಂಟ್‌ಗೆ ಆಗಮಿಸಿದರು
* ರವಿ ಅವರು ಮನೆಯಲ್ಲಿದ್ದಾರೆ ಎಂದು ಕಾರು ಚಾಲಕ ಮಾಹಿತಿ ನೀಡಿದ್ದ
* ಸಂಜೆ 5.45ರ ಸುಮಾರಿಗೆ ಮನೆಯಲ್ಲಿ ಡಿಕೆ ರವಿ ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ
* ತಕ್ಷಣ ಈ ಕುರಿತು ಸಂಬಂಧಿಕರು ಮತ್ತು ಪೊಲೀಸರಿಗೆ ಮಾಹಿತಿ ನೀಡಲಾಗಿದೆ

English summary
No suicide note found in IAS officer DK Ravi house said Bengaluru Additional Police Commissioner Alok Kumar. The police have booked a case of death caused under mysterious circumstances. Ravi the additional commissioner in the commercial taxes department was found dead at his apartment on Monday evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X