ರಾಜ್ಯ ಸರ್ಕಾರದಿಂದ ಹಿರಿಯ ಅಧಿಕಾರಿಗಳ ವರ್ಗಾವಣೆ

Posted By:
Subscribe to Oneindia Kannada

ಬೆಂಗಳೂರು, ಜುಲೈ 27:ರಾಜ್ಯ ಸರಕಾರ 9 ಮಂದಿ ಹಿರಿಯ ಐಎಎಸ್ ಅಧಿಕಾರಿಗಳು ಹಾಗೂ ಒಬ್ಬ ಕೆಎಎಸ್ ಅಧಿಕಾರಿ ತಮ್ಮ ಹೆಸರಿನ ಮುಂದಿನ ಸೂಚಿತ ಸ್ಥಳಕ್ಕೆ ತಕ್ಷಣದಿಂದಲೇ ನಿಯೋಜನೆಗೊಳ್ಳುವಂತೆ ವರ್ಗಾವಣೆ ಮಾಡಿ ಗುರುವಾರ ಆದೇಶ ಹೊರಡಿಸಿದೆ.

ಹಾಸನದ ಜಿಲ್ಲಾಧಿಕಾರಿಯಾಗಿದ್ದ ವಿ ಚೈತ್ರಾ ಅವರನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಆಯುಕ್ತರಾಗಿ ನೇಮಿಸಲಾಗಿದೆ. ಮಿಕ್ಕಂತೆ ಅಧಿಕಾರಿಗಳು ಹಾಗೂ ವರ್ಗಾವಣೆಗೊಂಡ ಇಲಾಖೆ ವಿವರ ಮುಂದಿದೆ:

IAS, KAS officials transferred

* ಸಂದೀಪ್ ದವೆ- ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೂಲಭೂತ ಸೌಲಭ್ಯ ಅಭಿವೃದ್ಧಿ ಇಲಾಖೆ,

* ಅಂಜುಂ ಫರ್ವೆಝ್- ಸರಕಾರದ ಕಾರ್ಯದರ್ಶಿ(ಪೌರಾಡಳಿತ) ನಗರಾಭಿವೃದ್ದಿ ಇಲಾಖೆ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಭಾಗ್ಯ ಜಲ
* ನವೀನ್ ರಾಜ್ ಸಿಂಗ್- ವ್ಯವಸ್ಥಾಪಕ ನಿರ್ದೇಶಕ ಮೈಸೂರು ಮಿನರಲ್ಸ್ ಲಿ.,
* ಪಂಕಜ್ ಕುಮಾರ್ ಪಾಂಡೆ- ಸರಕಾರದ ಕಾರ್ಯದರ್ಶಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ,
* ಬಿ. ಪೊನ್ನುರಾಜ್- ವ್ಯವಸ್ಥಾಪಕ ನಿರ್ದೇಶಕ ಬಿಎಂಟಿಸಿ,
* ಎಂ. ಜಯರಾಂ- ಸಿಇಓ ಹಾಗೂ ಕಾರ್ಯಕಾರಿ ಸದಸ್ಯ ಕೆಐಎಡಿಬಿ,
*ವಿ.ಚೈತ್ರಾ- ಆಯುಕ್ತರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ.
* ವಾಸಿರೆಡ್ಡಿ ವಿಜಯ ಜ್ಯೋತ್ಸ್ನಾ-ಜಿಲ್ಲಾಧಿಕಾರಿ ಚಿತ್ರದುರ್ಗ,
* ವಿನೋತ್ ಪ್ರಿಯಾ- ಕಾರ್ಯದರ್ಶಿ ವಸತಿ ಇಲಾಖೆ (ರೇರಾ) ಹಾಗೂ ಕೆಎಎಸ್ ಅಧಿಕಾರಿ
* ಪಿ.ಎಂ. ರವೀಂದ್ರ(ಕೆಎಎಸ್‍ ಅಧಿಕಾರಿ)- ಸಿಇಓ, ಚಿತ್ರದುರ್ಗ ಜಿಲ್ಲಾ ಪಂಚಾಯತ್ ಇಲ್ಲಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The State Government on Thursday transferred 9 IAS and one KAS officials.
Please Wait while comments are loading...