ಚನ್ನಪಟ್ಟಣ ಕ್ಷೇತ್ರಕ್ಕೆ ನೀರು ಕೊಟ್ಟಿದ್ದು ಯಾರು ಎಂದು ನಾನು ಹೇಳ್ತಿನಿ: ಸದಾನಂದಗೌಡ
ರಾಮನಗರ, ನವೆಂಬರ್ 05: ಒಂದು ವರ್ಷಗಳ ಕಾಲ ನಾನು ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೆ.ನಾನು ಮುಖ್ಯ ಮಂತ್ರಿ ಯಾಗಿದ್ದ ಸಂದರ್ಭದಲ್ಲಿ ಚನ್ನಪಟ್ಟಣ ತಾಲ್ಲೂಕಿನ ಕೆರೆಗಳೆಲ್ಲ ಬತ್ತಿ ಹೋಗಿದ್ದವು. ಆಗ ತಾಲ್ಲೂಕಿನ ಕೆರೆ ಗಳನ್ನು ತುಂಬಿಸಬೇಕೆಂದು ಇಲ್ಲಿನ ಶಾಸಕ ಸಿ. ಪಿ ಯೋಗೇಶ್ವರ್ ಮತ್ತು ಇಲ್ಲಿನ ಇಂಜಿನಿಯರ್ ನನ್ನು ನನ್ನ ಕಚೇರಿಗೆ ಕರೆಸಿ 159ಕೋಟಿ ಅನುದಾನ ಬಿಡುಗಡೆ ಮಾಡಿ, 6 ತಿಂಗಳಲ್ಲಿ ಕೆರೆ ಭರ್ತಿಯಾಗಿ ನಾನೇ ತೆಪ್ಪದಲ್ಲಿ ಹೋಗಿ ಉದ್ಘಾಟನೆ ಮಾಡಿದೆ ಎಂದು ಮಾಜಿ ಸಿಎಂ ಸದಾನಂದಗೌಡ ಅವರುತಿಳಿಸಿದರು.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಗುಡ್ಡೆ ಹೊಸೂರು, ಗುಡ್ಡೆ ಅವ್ವೇರಹಳ್ಳಿ, ಹೊನ್ನನಾಯಕನ ಹಳ್ಳಿ, ಅರಳಾಪುರ ಗ್ರಾಮದಲ್ಲಿ ನಿಖಿಲ್ ಕುಮಾರಸ್ವಾಮಿ ಪರ ಮತಯಾಚನೆ ಮಾಡಿದ ಸದಾನಂದಗೌಡ ಅವರು ಕಾಂಗ್ರೆಸ್ ಅಭ್ಯರ್ಥಿ ಸಿ ಪಿ ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು.

ಈಗ ಕಾಂಗ್ರೆಸ್ ಗೆ ಈ ಮರದಿಂದ ಆ ಮರಕ್ಕೆ ಹಾರಿದ್ದಾರೆ. ಇವತ್ತು ನಾನೇ ಸ್ವಯಂ ಘೋಷಿತ ಭಗೀರಥ ಭಗೀರಥ ಎಂದುಕೊಂಡು ಎರಡು ಚುನಾವಣೆ ಮಾಡಿದ್ರು. ನನ್ನ ಎದುರು ಬಂದು ನಿಲ್ಲಲಿ ವೇದಿಕೆ ಮೇಲೆ ನಾನೇ ಉತ್ತರಿಸುತ್ತೇನೆ ಎಂದು ಸಿಪಿ ಯೋಗೇಶ್ವರ್ ಗೆ ಕೌಂಟರ್ ಕೊಟ್ಟರು.
ನಾನು ಅದಕ್ಕೆ ನಿಮ್ಮ ಬಳಿ ಬಂದು ಮತ ಕೇಳುವ ಹಕ್ಕಿದೆ. ಈ ತಾಲ್ಲೂಕಿಗೆ ನೀರು ಇಲ್ಲದಿದ್ದಾಗ ಎಲ್ಲರ ವಿರೋಧ ಮಾಡಿಕೊಂಡು ಕೆಲಸ ಮಾಡಿದ್ದೇನೆ. ಇವತ್ತು ನಾನೇ ಸ್ವಯಂ ಘೋಷಿತ ಭಗೀರಥ ಭಗೀರಥ ಎಂದು ಹೇಳಿಕೊಂಡು ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ. ನನ್ನ ಇದುರು ಬಂದು ನಿಲ್ಲಲಿ ನಾನೇ ಹೇಳುತ್ತೇನೆ ಎಂದು ಸಿಪಿ ಯೋಗೇಶ್ವರ್ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
ಆ ಮರದಿಂದ ಈ ಮರಕ್ಕೆ, ಪಕ್ಷ ದಿಂದ ಪಕ್ಷಕ್ಕೆ ಪಕ್ಷಾಂತರಿ ಮಾಡುವ ಪಕ್ಷಾಂತರಿಯನ್ನ ಬುದ್ದಿ ಕಲಿಸುವ ಕಾಲ ಬಂದಿದೆ. ರಾಜನೀತಿಗೆ ಒಂದು ದಿಕ್ಕನ್ನು ಕೊಡುವ ಕಾಲ ಇದು, ಆ ಪಕ್ಷದಿಂದ ಈ ಪಕ್ಷಕ್ಕೆ ಹೋಗುವ ಪಕ್ಷಾಂತರಿಗೆ ಉಳಿದಿರೋದು ಒಂದೇ ನಿಮ್ಮೂರಿನ ತುಂಬಿದ ಕೆರೆ ಜಾಗ. ಅವರ ಸ್ವಾರ್ಥ ರಾಜಕಾರಣಕ್ಕೆ ನೀವು ಈ ಸಲ ಬುದ್ದಿ ಕಳುಹಿಸಿ ಎಂದು ಕಿಡಿಕಾರಿದರು. ಈ ಭಾಗದಲ್ಲಿ ನಮ್ಮ ಯುವಕ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಿಕೊಡಿ, ಇವರನ್ನು ಶಾಸಕರಾಗಿ ಮಾಡಿ ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ ನಿಖಿಲ್
ಕಾಂಗ್ರೆಸ್ ನಾಯಕರು ನನ್ನನ್ನ ಹೊರಗಿನವರು ಅಂತಾರೆ, ನನಗೆ ಇವಾಗ 36 ವರ್ಷ ವಯಸ್ಸು. ನಾನು ಹುಟ್ಟಿದ ಐದು ವರ್ಷದ ಹಿಂದಿನಿಂದಲೂ ದೇವೇಗೌಡರು ಮತ್ತು ಕುಮಾರಣ್ಣರ ಸಂಬಂಧ ಚನ್ನಪಟ್ಟಣಕ್ಕೆ ಇದೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಹೇಳಿದರು. ದೇವೇಗೌಡರ ಇಗ್ಗಲೂರು ಡ್ಯಾಂನ ಕೊಡುಗೆಯಿಂದ ಜನ ನನ್ನನ್ನ ಪ್ರೀತಿಯಿಂದ ಹರಸುತ್ತಿದ್ದಾರೆ. ಕ್ಷೇತ್ರ ಮತ್ತು ಜಿಲ್ಲೆಗೆ ನೀರಾವರಿ ಸೌಲಭ್ಯ ಕಲ್ಪಿಸಿದ್ದು ದೇವೇಗೌಡರು ಅಂತಾರೆ. ಇನ್ನು ಕುಮಾರಣ್ಣರ ಸಾಲಮನ್ನಾ ಯೋಜನೆಯನ್ನ ಸ್ಮರಿಸಸುತ್ತಿದ್ದಾರೆ ಎಂದರು.
ರಾಜ್ಯದ ನಾನಾ ಮೂಲೆಗಳಿಂದ ಎರಡೂ ಪಕ್ಷದ ಕಾರ್ಯಕರ್ತರ ದಂಡು ಬಂದು ಪ್ರಚಾರ ಮಾಡ್ತಿದ್ದಾರೆ.ಮೂರನೇ ಬಾರಿ ಯುವಕ ನಿಖಿಲ್ ಗೆ ತೊಂದರೆ ಆಗಬಾರದು ಅಂತ. ನಾನು ಎರಡು ಚುನಾವಣೆಗಳನ್ನ ಫೇಸ್ ಮಾಡಿದ್ದೇನೆ. ಎರಡು ಚುನಾವಣೆಗಳ ಸೋಲಿನ ಕಹಿ ನನಗೆ ನೋವುಗಳಿವೆ.ರಾಮನಗರ ಚುನಾವಣೆಯಲ್ಲಿ ಏನಾಯ್ತು ಅಂತಾ ನಿಮಗೆ ಗೊತ್ತಿದೆ. ಇಲ್ಲಿ ನಾನು ಜನಪ್ರತಿನಿಧಿ ಆಗಬೇಕೆಂದು ನಾನು ಬಂದಿಲ್ಲ.ನಮ್ಮ ಮನೆಗೆ ಬರುವ ಎಲ್ಲಾ ವರ್ಗದವರಿಗೂ ಪ್ರಾಮಾಣಿಕ ಕೆಲಸ ಮಾಡ್ತ ಬಂದಿದ್ದೇವೆ ಎಂದು ತಿಳಿಸಿದರು.
ದೇವೇಗೌಡರು, ಕುಮಾರಣ್ಣರ ದಾರಿ ಯಲ್ಲೇ ಸಾಗುತ್ತಿದ್ದೇನೆ. ಅದೇ ನಿಟ್ಟಿನಲ್ಲಿ ನನ್ನ ಮೇಲೆ ಹೆಚ್ಚಿನ ವಿಶ್ವಾಸವನ್ನ ಜನ ಇಟ್ಟಿದ್ದಾರೆ.ನಿರುದ್ಯೋಗ ಸಮಸ್ಯೆ ನಿವಾರಿಸಲು ಕುಮಾರಣ್ಣನ ನೇತೃತ್ವದಲ್ಲಿ ಮಂಡ್ಯದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿತ್ತು. 158 ಕಂಪನಿ ಕರೆತಂದು ಸುಮಾರು 1200 ಜನಕ್ಕೆ ಉದ್ಯೋಗ ಕೊಡಿಸಿದ್ದು ಕುಮಾರಣ್ಣ ಎಂದು ನಿಖಿಲ್ ಅವರು ತಿಳಿಸಿದರು.












Click it and Unblock the Notifications