ಯತ್ನಾಳ್‌ಗೆ ಕಾಂಗ್ರೆಸ್ ಗಾಳ?; ಪಕ್ಷಕ್ಕೆ ಕರೆದುಕೊಂಡು ಬರುತ್ತೇನೆ ಎಂದ ಕಾಂಗ್ರೆಸ್ ಹಿರಿಯ ನಾಯಕ
ಹುಬ್ಬಳ್ಳಿ, ಮಾರ್ಚ್ 28: ಸ್ವಪಕ್ಷೀಯರ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನ ಬಿಜೆಪಿ ಹೈಕಮಾಂಡ್ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಿದೆ. ಉಚ್ಚಾಟನೆ ಬಳಿಕ ಯತ್ನಾಳ್ ಏಕಾಂಕಿಯಾಗಿದ್ದಾರೆ. ಇತ್ತ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಕಾಂಗ್ರೆಸ್‌ಗೆ ಪಕ್ಷಕ್ಕೆ ಬಂದ್ರೆ ಕರೆದುಕೊಳ್ಳುತ್ತೇವೆ. ಹೈಕಮಾಂಡ್ ಜೊತೆಗೆ ಚರ್ಚೆ ಮಾಡಿ ಕರೆದುಕೊಂಡು ಬನ್ನಿ ಅಂದ್ರೆ ಸ್ವಾಗತ ಮಾಡ್ತೀವಿ ಎಂದು ಕಾಂಗ್ರೆಸ್ ಹಿರಿಯ ಶಾಸಕ ರಾಜು ಕಾಗೆ ಹೇಳಿದರು.
ಈ ಕುರಿತು ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಾನೇ ಬಸನಗೌಡ ಪಾಟೀಲ್ ಯತ್ನಾಳರನ್ನು ಕಾಂಗ್ರೆಸ್‌ಗೆ ಕರೆದುಕೊಂಡು ಬರುತ್ತೇನೆ, ನನಗೆ ಜಾವಾಬ್ದಾರಿ ಕೊಟ್ಟರೆ ಕರೆದುಕೊಂಡು ಬರುತ್ತೇನೆ. ಹೈಕಮಾಂಡ್ ಜೊತೆಗೆ ಚರ್ಚೆ ಮಾಡಿ ಕರೆದುಕೊಂಡು ಬನ್ನಿ ಅಂದ್ರೆ ಸ್ವಾಗತ ಮಾಡ್ತೀವಿ ಎಂದು ರಾಜು ಕಾಗೆ ಅವರು ಹೇಳಿದರು.

ಬೆಲೆ ಏರಿಕೆಯಿಂದ ಅಷ್ಟೇನೂ ಹೊರೆ ಆಗೋದಿಲ್ಲ ನಮಗೂ ಇತಿ ಮಿತಿ ಇದೆ, ಹೊಸ ಬಸ್ ನಿಲ್ದಾಣ ನಿರ್ಮಾಣ, ಹೊಸ ಬಸ್ ಖರೀದಿ ಮಾಡುತ್ತಿದ್ದೇವೆ. ಸದ್ಯದ ವ್ಯವಸ್ಥೆ ಸರಿಪಡಿಸಬೇಕು, ನೋ ಪ್ರಾಪಿಟ್ , ನೋ ಲಾಸ್‌ನಲ್ಲಿ ಸಂಸ್ಥೆ ನಡೆಯಬೇಕು, ಐದು ಗ್ಯಾರಂಟಿ ಜನರಿಗೆ ಉಪಯೋಗ ಆಗುತ್ತಿದೆ, ನಮ್ಮ ಯೋಜನೆಗಳನ್ನ ಯಾರು ವಿರೋಧ ಮಾಡುತ್ತಿದ್ದರು ಅವರೇ ನಮ್ಮನ್ನ ಕಾಪಿ ಮಾಡುತ್ತಿದ್ದಾರೆ, ಸರ್ಕಾರದಲ್ಲಿ ಅಡೆತಡೆ ಸಹಜ ಆದರೆ ಸಿದ್ದರಾಮಯ್ಯ ಪಾರದರ್ಶಕವಾಗಿ ಸರ್ಕಾರ ನಡೆಸುತ್ತಿದ್ದಾರೆ, ಹನಿಟ್ರ್ಯಾಪ್ ಅದು ವೈಯಕ್ತಿಕ, ಅದು ಸರ್ಕಾರದ ಯೋಜನೆ ಅಲ್ಲ, ಸದನದಲ್ಲಿ ರಾಜಣ್ಣ ಅವರ ಹೆಸರು ತೆಗೆದುಕೊಂಡಿದ್ದು ಯತ್ನಾಳ್, ಅದಕ್ಕೆ ರಾಜಣ್ಣ ಸದನದಲ್ಲಿ ಉತ್ತರ ಕೊಟ್ಟಿದ್ದಾರೆ ಎಂದು ಹೇಳಿದರು.
ಬಸನಗೌಡ ಪಾಟೀಲ್ ಯತ್ನಾಳ ಉಚ್ಛಾಟನೆ ವಿಚಾರವಾಗಿ ಸಚಿವ ಎಚ್ ಕೆ ಪಾಟೀಲ್ ಮಾತನಾಡಿ, ನೀವು ಬಿಜೆಪಿಯವರು ಕೇಳಿ ಕಾಂಗ್ರೆಸ್ ಗೆ ಬಂದ್ರೆ ಕರಕೋತಿರಾ ಅನ್ನೋ ಪ್ರಶ್ನೆಗೆ ಪಾಟೀಲ್ ಉತ್ತರ.
ಅದು ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದ ಅವರು, ರಾಜ್ಯದಲ್ಲಿ ಬಿಸಿಲು ಜಾಸ್ತಿಯಾಗಿದೆ. ಕುಡಿಯೋ ನೀರಿನ ನಿರ್ವಹಣೆ ಮಹತ್ವದ ಕೆಲಸ ಆದ್ದರಿಂದ ಸಚಿವ ಸಂಪುಟದಲ್ಲಿ ಮಹತ್ವದ ಚರ್ಚೆಯಾಗಿದೆ. ರಾಜ್ಯದ ಜಲಾಶಯಗಳಿಂದ ನೀರಿನ ಬಿಡುಗಡೆ ಕುರಿತು ಚರ್ಚೆಯಾಗಿದೆ. ಕುಡಿಯೋ ನೀರಿನ ನಿರ್ವಹಣೆ ಬಗ್ಗೆ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ರಚನೆ. ಒಂದು ವಾರದೊಳಗೆ ಚರ್ಚೆ ಮಾಡಿ ಸೂಕ್ತ ನಿರ್ದೇಶನ ನೀಡಲಿದ್ದಾರೆ ಎಂದು ಕಾನೂನು ಸಚಿವ ಎಚ್ ಕೆ ಪಾಟೀಲ್ ಹೇಳಿದ್ದಾರೆ.
ದೇಶದ ಯಾವದೇ ರಾಜ್ಯ ನೋಡಿ, ನಮ್ಮ ರಾಜ್ಯದಲ್ಲಿ ಐದು ರೂಪಾಯಿ ಕಡಿಮೆ ಇದೆ. ರೈತರ ಬೇಡಿಕೆ ಗಮನಿಸಿ,ಎಷ್ಟು ಕಡಿಮೆ ಸಾಧ್ಯವೋ,ಅಷ್ಟು ಹೆಚ್ಚು ಮಾಡಿದ್ದೇವೆ. ಹೆಚ್ಚಳ ಮಾಡಿರೋ 4 ರೂಪಾಯಿ ರೈತರಿಗೆ ಹೋಗತ್ತದೆ ಎಂದ ಅವರು, ಮುಸಲ್ಮಾನರಿಗೆ ಮೀಸಲಾತಿ ವಿಚಾರವಾಗಿ ಬಿಜೆಪಿಯವರು ಅಫಡವಿಟ್ ಕೊಟ್ಟಿದ್ದಾರೆ. ಬಿಜೆಪಿಯವರು ಇದನ್ನ ರಾಜಕೀಯ ವಿಷಯವಾಗಿ ಮಾಡ್ತೀದಾರೆ ಎಂದರು.












Click it and Unblock the Notifications