ಚನ್ನಪಟ್ಟಣ ಉಪ ಚುನಾವಣೆ: ʼರಾತ್ರೋರಾತ್ರಿ ₹5000 ಗಿಫ್ಟ್ ಕೂಪನ್ʼ
ರಾಮನಗರ, ನವೆಂಬರ್ 03: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಬಳಿಕ ಉಪಚುನಾವಣೆಯ ಕಾವು ಜೋರಾಗಿದೆ. ರಾಜ್ಯದಲ್ಲಿ ನವೆಂಬರ್ 13 ರಂದು ನಡೆಯುವ ಮೂರು ಕ್ಷೇತ್ರ ಉಪಚುನಾವಣೆಯ ಪೈಕಿ ಚನ್ನಪಟ್ಟಣ ಅಖಾಡ ರಂಗೇರಿದ್ದು, ಚುನಾವಣಾ ಪ್ರಚಾರದ ವೇಳೆ ಕಳೆದ ರಾಮನಗರ ಚುನಾವಣೆಲ್ಲಿನ ಹಣ ಹಂಚಿಕೆ ಕುರಿತು ನಿಖಿಲ್ ಕುಮಾರಸ್ವಾಮಿ ಅವರು ಬಹಿರಂಗಪಡಿಸಿದ್ದಾರೆ.
ಚನ್ನಪಟ್ಟಣದಲ್ಲಿ ಚುನಾವಣಾ ಪ್ರಚಾರದ ವೇಳೆ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಮಾತನಾಡಿ, ರಾಮನಗರದಲ್ಲಿ ರಾತ್ರೋರಾತ್ರಿ 5000 ಗಿಫ್ಟ್ ಕೂಪನ್ ಕೊಟ್ಟು ನನ್ನನ್ನು ಸೋಲಿಸಿದರು ಎಂದು ಹೇಳಿದರು. ಚನ್ನಪಟ್ಟಣ ತಾಲೂಕಿನಲ್ಲಿ ಒಂದು ಹಂತಕ್ಕೆ ನೀರಾವರಿ ಕಾಣ್ತಾ ಇದ್ದರೆ, ಅದು ದೇವೇಗೌಡರ ದೂರದೃಷ್ಟಿ ರಾಮನಗರಕ್ಕೆ ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸುವ ಸತ್ತೇಗಾಲ ನೀರಾವರಿ ಯೋಜನೆಗೆ 548 ಕೋಟಿ ಹಣ ಬಿಡುಗಡೆ ಮಾಡಿದ್ದು ಕುಮಾರಣ್ಣ. ಜಲಾಶಯಗಳನ್ನು ತುಂಬಿಸುವುದು ಮಾತ್ರವಲ್ಲದೆ ಕೆರೆಗಳನ್ನೂ ಭರ್ತಿ ಮಾಡಿದ್ದಾರೆ ಎಂದರು.

ಬಹಳ ಜನ ಕೆರೆಗಳ ತುಂಬಿಸಿದ ಭಗೀರಥ ಅಂತ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಆದರೆ ವಿ ಸೋಮಣ್ಣರವರು ಇದ್ದಾರೆ. ಯಾರು ಅದಕ್ಕೆ ಅನುದಾನ ಕೊಟ್ರು ಎಲ್ಲವೂ ಹಿರಿಯರಿಗೆ ಗೊತ್ತಿದೆ. ಪರಿಷತ್ ಸ್ಥಾನಕ್ಕೆ ಅವರು ರಾಜಿನಾಮೆ ಕೊಟ್ಟು ಬಂದಿದ್ದಾರೆ. ಅಧಿಕಾರದ ಆಸೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ ಎಂದು ಸಿಪಿ ಯೋಗೇಶ್ವರ್ ಅವರಿಗೆ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ತಿರುಗೇಟು ನೀಡಿದರು.
ಚನ್ನಪಟ್ಟಣ ತಾಲ್ಲೂಕಿನ ನಿಮ್ಮ ಮನೆ ಮಕ್ಕಳು ನನ್ನ ಮೇಲೆ ಭರವಸೆ ಇಟ್ಟಿದ್ದಾರೆ. ಹದಿನೈದು ದಿನದ ಹಿಂದೆ ಮಂಡ್ಯದಲ್ಲಿ ಉದ್ಯೋಗ ಮೇಳ ಮಾಡಿದ್ದೇವೆ.ಇಡೀ ರಾಜ್ಯದಿಂದ ಯುವಕರು ಬಂದಿತ್ತು, ಮೊದಲನೇ ಹಂತದಲ್ಲಿ ಸಾವಿರದ ಇನ್ನೂರು ಜನರಿಗೆ ಉದ್ಯೋಗ ಕೊಡಿಸಿದ್ದೇವೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ತಿಳಿಸಿದರು.
ಕೇಂದ್ರದಲ್ಲಿ ಕುಮಾರಸ್ವಾಮಿ ಮಂತ್ರಿ ಆಗಿದ್ರೆ, ಅದು ಚನ್ನಪಟ್ಟಣ ಮಹಾಜನತೆ ಆಶಿರ್ವಾದ. ವಿ ಸೋಮಣ್ಣರವರು ಎರಡೂ ಪಕ್ಷದ ಕಾರ್ಯಕರ್ತರಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ ಎಂದರು. ಈ ಚುನಾವಣೆ ನನ್ನ ಪಾಲಿಗೆ ಅತ್ಯಂತ ಅನೀರಿಕ್ಷಿತ. ಮಂಡ್ಯ ಜಿಲ್ಲೆಯವರು ಪ್ರೀತಿ ಕೊಟ್ಟಿದ್ದಾರೆ, ಎರಡು ಸಲ ಚುನಾವಣೆಯಲ್ಲಿ ಸೋತಿದ್ದೇನೆ ನಿಮ್ಮ ಸಹಕಾರ ಇರಲಿ ಎಂದು ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದರು.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆ ಕಣದಲ್ಲಿ ಹಳ್ಳಿಹಳ್ಳಿಗೂ ತೆರಳಿ ಬಿರುಸಿನ ಪ್ರಚಾರ ನಡೆಸಿದರು. ರಾಜ್ಯ ಬಿಜೆಪಿ ವರಿಷ್ಠ ನಾಯಕರ ಜತೆಯಲ್ಲಿ ಕೂಡ್ಲೂರು, ಮಳೂರು ಪಟ್ಟಣ ಹಾಗೂ ಚೆಕ್ಕರೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಚಿವರು ವಿಸ್ತೃತ ಪ್ರಚಾರ ಮಾಡಿದರು.
ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಮಾಜಿ ಸಚಿವ ಸಿ.ಟಿ.ರವಿ, ಸಂಸದ ಡಾ.ಸಿ.ಎನ್.ಮಂಜುನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ರಮೇಶ್ ಸೇರಿದಂತೆ ಅನೇಕ ನಾಯಕರ ಜತೆಯಲ್ಲಿ ಕೇಂದ್ರ ಸಚಿವರು ಪ್ರಚಾರ ನಡೆಸಿದರು.
ಮೊದಲು ಹೊಟ್ಟಿನ ಹೊಸಹಳ್ಳಿಯಿಂದ ಪ್ರಚಾರ ಅರಭಿಸಿದ ಸಚಿವರನ್ನು ಚೆಕ್ಕರೆ ಗ್ರಾಮದಲ್ಲಿ ಸೇರಿಕೊಂಡ ಬಿಜೆಪಿ ನಾಯಕರು ಬಿರುಸಿನ ಪ್ರಚಾರಕ್ಕೆ ಸಾಥ್ ನೀಡಿದರು.
ಪ್ರಚಾರ ವಾಹನದ ಮೇಲೆ ಭಾಷಣ ಮಾಡುತ್ತಿದ್ದ ಕುಮಾರಸ್ವಾಮಿ ಅವರಿಗೆ ಕಮಲದ ಹೂಗಳ ಗುಚ್ಛ ನೀಡಿದ ಅಶೋಕ ಮತ್ತು ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಅಭಿನಂದಿಸಿದರು. ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ನಾಯಕರಿಗೆ ಬೃಹತ್ ಹೂವಿನ ಹಾರ ಹಾಕಿ ಬರಮಾಡಿಕೊಂಡು ಸ್ವಾಗತಿಸಿದರು.












Click it and Unblock the Notifications