DK Shivakumar: ನಾನು ಹಿಂದೂ ಆಗಿ ಹುಟ್ಟಿದ್ದೇನೆ, ಹಿಂದೂ ಆಗಿ ಸಾಯುತ್ತೇನೆ: ಡಿ ಕೆ ಶಿವಕುಮಾರ್ ಹೀಗೆ ಹೇಳಿದ್ಯಾಕೆ?
ಬೆಂಗಳೂರು, ಫೆಬ್ರವರಿ 26: ನಾನು ಹಿಂದೂ ಆಗಿ ಹುಟ್ಟಿದ್ದೇನೆ, ಹಿಂದೂ ಆಗಿ ಸಾಯುತ್ತೇನೆ. ಆದರೆ ಎಲ್ಲ ಧರ್ಮದ ಬಗ್ಗೆ ಗೌರವ ಇಟ್ಟಿದ್ದೇನೆ. ಜೈಲಿನಲ್ಲಿ ಇದ್ದಾಗ ಜೈನ ಧರ್ಮದ ಬಗ್ಗೆ ಅಧ್ಯಯನ ಮಾಡಿದ್ದೆ. ದರ್ಗಾ, ಚರ್ಚ್ ಗೆ ಹೋಗ್ತೇನೆ. ಕುಂಭ ಮೇಳದಲ್ಲಿ ಉತ್ತಮ ಅನುಭವ ಆಗಿದೆ. ತುಂಬಾ ಉತ್ತಮವಾಗಿ ನಿರ್ವಹಣೆ ಮಾಡಿದ್ದಾರೆ. ಆದರೆ ಕುಂಭಮೇಳವನ್ನು ರಾಜಕೀಯಗೊಳಿಸಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರು ಹೇಳಿದರು.
ಈ ಕುರಿತು ಬುಧವಾರ ಸದಾಶಿವನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಡಿ ಕೆ ಶಿವಕುಮಾರ್ ಅವರು, ಹೆಚ್ ಡಿ ಕುಮಾರಸ್ವಾಮಿ ಮಾತಿಗೆ ಕಿಮ್ಮತ್ತು ಕೊಡಲ್ಲ. ಕುಮಾರಸ್ವಾಮಿ ಪ್ರಕರಣ ನೋಡಿದ್ದೇನೆ. ಬಿಜೆಪಿ ತನ್ನ ನಿಲುವನ್ನು ಮೊದಲು ಹೇಳಲಿ. ಬಳಿಕ ನಾನು ಪ್ರತಿಕ್ರಿಯೆ ನೀಡುತ್ತೇನೆ. ಇತರ ವಿಚಾರಗಳ ಬಗ್ಗೆ ಬಿಜೆಪಿ ನಾಯಕರು ಮಾತನಾಡುತ್ತಾರೆ, ಇದರ ಬಗ್ಗೆ ಮಾತನಾಡಲಿ ಎಂದು ವಾಗ್ದಾಳಿ ನಡೆಸಿದ್ದಾರೆ. ಇನ್ನೂ ನಾನು ಕಚೇರಿಯಲ್ಲಿ ಎಲ್ಲರ ಜೊತೆಗೆ ಮಾತನಾಡಿ ಬಂದಿದ್ದೇನೆ. ಇದರ ಹೊರತಾಗಿ ಬೇರೇನೂ ಇಲ್ಲ. ಇಶಾ ಫೌಂಡೇಶನ್ ಗೆ ನಾನು ಹೋಗಿದ್ದಕ್ಕೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ದೆಹಲಿಗೆ ಭೇಟಿ ನೀಡಿದ ಸಂದರ್ಶನದಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಆಗಿದ್ದೇನೆ. ಪಾರ್ಟಿ ಕಚೇರಿ ನಮಗೆ ದೇವಸ್ಥಾನ ಇದ್ದಾಗೆ. ಕಾಂಗ್ರೆಸ್ ಕಚೇರಿಗೆ ಹೋಗದೆ ಬಿಜೆಪಿ ಕಚೇರಿ, ಅಥವಾ ಕೇಶವ ಕೃಪಕ್ಕೆ ಹೋಗಲೇ? ಎಂದು ಪ್ರಶ್ನಿಸಿದರು. ಈ ಹಿಂದೆ ಡಬಲ್ ಡೆಕ್ಕರ್ ರಸ್ತೆ ಮಾಡಿದ್ದರೆ ಇಷ್ಟೊಂದು ಸಮಸ್ಯೆ ಆಗ್ತಿರಲಿಲ್ಲ. ಬೈಯುವವರೆಲ್ಲಾ ಬೈತಾ ಇರಲಿ, ಒಳ್ಳೆಯ ಸಲಹೆ ಕೊಟ್ಟರೆ ಸ್ವೀಕಾರ ಮಾಡ್ತೇನೆ. ಮುಂಬೈ, ದೆಹಲಿ ರಸ್ತೆ ಬೆಂಗಳೂರಿಗಿಂತ ಕಳಪೆ ಇದೆ. ಯಾರೂ ಮುಂಬೈ, ದೆಹಲಿ ಟ್ರಾಫಿಕ್ ಗಮನಿಸುತ್ತಿಲ್ಲ, ಎಲ್ಲರೂ ಬೆಂಗಳೂರು ಬಗ್ಗೆ ಮಾತನಾಡ್ತಾರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ನೀಡಿದರು.
ಇನ್ನೂ ಮೋಹನ್ ದಾಸ್ ಪೈ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕುರಿತು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಡಿ ಕೆ ಶಿವಕುಮಾರ್ ಅವರು, ಮೋಹನ್ ದಾಸ್ ಪೈ ಹಿರಿಯರು. ಅವರು ರಾಜಕೀಯಕ್ಕೆ ಬರಬೇಕು ಹಾಗೂ ಚುನಾವಣೆ ನಿಲ್ಲಬೇಕು. ಅವರು ಸಚಿವರಾಲಿ ಮತ್ತೆ ಮಾತನಾಡಲಿ. ವ್ಯವಸ್ಥೆ ಏನು ಎಂದು ಅವಾಗ ಗೊತ್ತಾಗುತ್ತದೆ. ಒಳ್ಳೆ ಕೆಲಸ ಮಾಡುವಾಗ ವಿರೋಧ ಟೀಕೆ ಇದ್ದೇ ಇರುತ್ತದೆ. ಬೆಂಗಳೂರು ನಗರದ ಅಭಿವೃದ್ಧಿ, ಟ್ರಾಫಿಕ್ ಸಮಸ್ಯೆ ಬಗ್ಗೆ ಮಾತನಾಡುವ ಉದ್ಯಮಿ ಮೋಹನ್ ದಾಸ್ ಪೈ ಚುನಾವಣೆಗೆ ನಿಲ್ಲಲಿ ಎಂದು ಡಿಕೆ ಶಿವಕುಮಾರ್ ಅವರು ಸವಾಲು ಹಾಕಿದರು.
ಸ್ಟೀಲ್ ಬ್ರಿಜ್ ಹಾಗೂ ಸುರಂಗ ಮಾರ್ಗಕ್ಕೆ ಬಿಜೆಪಿ ವಿರೋಧದ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಕೆಜೆ ಜಾರ್ಜ್ ಸ್ಪೀಲ್ ಬ್ರಿಡ್ಜ್ ಮಾಡಲು ಹೊರಟಾಗ ವಿರೋಧ ಮಾಡಿದ್ದರು. ವಿರೋಧ ಪಕ್ಷಗಳು ಟೀಕೆ ಮಾಡಿದಷ್ಟು ಒಳ್ಳೆಯದು. ಸದನದಲ್ಲಿ ಚರ್ಚೆ ಮಾಡುವ ಉದ್ದೇಶದಿಂದ ಸುಮ್ಮನಿದ್ದೇನೆ. ಟನಲ್ ಪರ್ಯಾಯವಾಗಿ ಬೆಂಗಳೂರು ರಸ್ತೆ ಮಾಡಲು ಪರಿಹಾರಕ್ಕೆ ಮೂರು ಲಕ್ಷ ಕೋಟಿ ಬೇಕು ಎಂದು ಹೇಳಿದರು.












Click it and Unblock the Notifications