Get Updates
Get notified of breaking news, exclusive insights, and must-see stories!

ಬಿಜೆಪಿಯಿಂದ ಡಿ ಕೆ ಶಿವಕುಮಾರ್‌ಗೆ ಬಿಗ್‌ ಆಫರ್;‌ ಕೊನೆಗೆ ಹೊಸ ಬಾಂಬ್‌ ಸಿಡಿಸಿದ ಕನಕಪುರ ಬಂಡೆ!

ಬೆಂಗಳೂರು, ಅಕ್ಟೋಬರ್‌ 16: ಕಾಂಗ್ರೆಸ್ ಪಾಳಯದಲ್ಲಿ ರಾಜ್ಯ ರಾಜಕಾರಣದಲ್ಲಿ ದಿನಕ್ಕೊಂದು ಹೊಸ ಬೆಳವಣಿಗೆಗಳು ನಡೆಯುತ್ತಿದೆ. ಸಂಪುಟ ಪುನಾರಚನೆ, ನಾಯಕತ್ವ ಬದಲಾವಣೆ ಕುರಿತು ಹೊಸ ಚರ್ಚೆಗಳು ಆಗುತ್ತಿದ್ದು, ಇದೀಗ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೊಸ ಬಾಂಬ್‌ ಸಿಡಿಸಿದ್ದಾರೆ. ಸಮ್ಮಿಶ್ರ ಸರ್ಕಾರ ಸಂದರ್ಭದಲ್ಲಿ ಬಿಜೆಪಿಯಿಂದ ನನಗೆ ಉಪಮುಖ್ಯಮಂತ್ರಿ ಆಫರ್ ಬಂದಿತ್ತು, ಆದರೆ ನಾನು ಪಕ್ಷದ ನಿಷ್ಠೆಗಾಗಿ ಜೈಲನ್ನೇ ಆಯ್ಕೆ ಮಾಡಿಕೊಂಡೆ ಎಂದು ಹೊಸ ಬಾಂಬ್ ಸಿಡಿಸಿದರು.

ಸಮ್ಮಿಶ್ರ ಸರ್ಕಾರ ಬಿದ್ದು ಹೋಗುವ ವೇಳೆ ಪಕ್ಷ ನಿಷ್ಠನಾಗಿ ಜೈಲುವಾಸ ಆಯ್ಕೆ ಮಾಡಿಕೊಂಡೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ಸಮ್ಮಿಶ್ರ ಸರ್ಕಾರದಲ್ಲಿ ಹತ್ತು ಜನ‌ ಶಾಸಕರು ರಾಜಿನಾಮೆ ನೀಡಲು ಹೊರಟಿದ್ದರು. ಕನಕಪುರದಲ್ಲಿದ್ದ ನಾನು ಬೆಂಗಳೂರಿಗೆ ಬಂದು ಐದಾರು ಜನರನ್ನು ವಾಪಸ್ ಕ್ವಾಟ್ರಸ್ ಗೆ ಕರೆದುಕೊಂಡು ಬಂದೆ.‌ ಆಗ ನನಗೆ ಒಬ್ಬ ಆದಾಯ ತೆರಿಗೆ ಆಡಿಟರ್ ಫೋನ್ ನಿಂದ ಕರೆ ಬಂದಿತ್ತು. ನನ್ನ ಜೊತೆ ಡಿಜಿಯೂ ಇದ್ದ‌ರು. ಅವರು ದೂರವಾಣಿ ಕರೆಯಲ್ಲಿ ಮಾತನಾಡಿದರು. ನನ್ನ ಜೊತೆ ಡಿ.ಕೆ. ಸುರೇಶ್ ಅವರೂ ಇದ್ದರು. ಕರೆ ಮಾಡಿದವರು ನೀವು ಡಿಸಿಎಂ ಆಗುವಿರಾ ಅಥವಾ ಜೈಲಿಗೆ ಹೋಗುವಿರಾ ಎಂದು ಕೇಳಿದರು. ಎಲ್ಲಾ ಶಾಸಕರನ್ನು ವಾಪಸ್ಸು ಕರೆದುಕೊಂಡು ಬನ್ನಿ ಎಂದು ಆಯ್ಕೆ ‌ನೀಡಿದರು ಎಂದು ತಿಳಿಸಿದರು.

I Received An Offer Of Deputy Chief Ministership From BJP Says DK Shivakumar

ಆಗ ನಾನು ನನಗೆ ಇಷ್ಟೆಲ್ಲಾ ಸ್ಥಾನ ನೀಡಿರುವ ಪಕ್ಷವನ್ನು ಬಿಡುವುದಿಲ್ಲ. ಬೇಕಾದರೆ ಜೈಲಿಗೆ ಹೋಗುತ್ತೇನೆ ಎಂದೆ. ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ ರಾಜೀವ್ ಗಾಂಧಿ ಅವರು ನನಗೆ ಟಿಕೆಟ್ ನೀಡಿ, ಮಂತ್ರಿ ಮಾಡಿದ್ದರು. ಬಂಗಾರಪ್ಪ ಅವರು ನನಗೆ ಸಹಕಾರ ನೀಡಿದ್ದರು. ಈ ಪಕ್ಷದಿಂದ ಈ ಮಟ್ಟಕ್ಕೆ ಬೆಳೆದಿದ್ದೇನೆ ಎಂದು ಜೈಲು ಆಯ್ಕೆ ಮಾಡಿಕೊಂಡೆ. ಅಂದು ನಾನು ಬೇರೆ ಆಯ್ಕೆ ಮಾಡಿದ್ದರೆ ಏನೇನು ಆಗುತ್ತಾ ಇತ್ತೋ ಗೊತ್ತಿಲ್ಲ ಎಂದು ಡಿ ಕೆ ಶಿವಕುಮಾರ್‌ ಹೇಳಿದರು.

ಶಾಲಾ ಚುನಾವಣೆಯಲ್ಲಿಯೇ ಅನೇಕ ಒತ್ತಡಗಳಿಂದ ನನಗೆ ಬೇರೆ ಸ್ಥಾನ ನೀಡಲಾಗಿತ್ತು. ನಾನು ವಿದ್ಯಾರ್ಥಿ ದೆಸೆಯಿಂದಲೇ ರಾಜಕೀಯ ನಾಯಕನಾಗಬೇಕು ಎನ್ನುವ ಅಭಿಲಾಷೆ ಹೊಂದಿದ್ದವನು. ಮೌಂಟ್ ಕಾರ್ಮೆಲ್ ಶಾಲಾ ಚುನಾವಣೆಯಲ್ಲಿ ಗೆದ್ದಿದ್ದ ನನಗೆ ಅಂದೇ ಅನೇಕ ಒತ್ತಡಗಳಿಂದ ಪ್ರತ್ಯೇಕ ಸ್ಥಾನ ನೀಡಲಾಯಿತು ಎಂದು ತಿಳಿಸಿದರು. ಚುನಾವಣೆಯ ಕೌಂಟಿಂಗ್ ಪ್ರತಿನಿಧಿಯಾಗಿದ್ದ ನನ್ನ ಸಹಪಾಠಿ ಮಾಧವ ನಾಯಕ್ ನೀನು 400 ಮತಗಳಿಂದ ಗೆಲ್ಲುತ್ತೀಯಾ ಎಂದಿದ್ದನು. ಆದರೆ ಬೆಳಿಗ್ಗೆ ಫಲಿತಾಂಶ ಘೋಷಣೆ ಮಾಡುವಾಗ ಬೇರೆ ಯಾವುದೋ ಹುಡುಗಿಯ ಹೆಸರನ್ನು ಘೋಷಣೆ ಮಾಡಲಾಯಿತು. ನನಗೆ ಪ್ರತ್ಯೇಕವಾಗಿ ಕ್ರೀಡಾ ಕಾರ್ಯದರ್ಶಿ ಹುದ್ದೆ ನೀಡಲಾಯಿತು ಎಂದರು.

ರಾಜಕಾರಣದಲ್ಲಿಯೂ ಸುಮಾರು ಶೇ.80‌ ರಷ್ಟು ಜನ ದುಡಿಯುತ್ತಲೇ ಇದ್ದಾರೆ. ಶೇ. 20 ರಷ್ಟು ಜನರಿಗೆ ಮಾತ್ರ ಸಣ್ಣಪುಟ್ಟ ಸ್ಥಾನಮಾನ ಸಿಕ್ಕಿದೆ. ನನಗೂ 63 ವರ್ಷವಾಯಿತು.‌ ನಾವುಗಳೇ ಇನ್ನೆಷ್ಟು ದಿನ ರಾಜಕಾರಣ ಮಾಡಲು ಸಾಧ್ಯ.‌ ಹೊಸಬರು ಬರಬೇಕು. ಐದು ಪಾಲಿಕೆಗಳು ಮಾಡಿದ‌ ಕಾರಣಕ್ಕೆ ಬೆಂಗಳೂರಿನಲ್ಲಿ ಹೊಸದಾಗಿ 500 ಕ್ಕೂ ಹೆಚ್ಚು ನಾಯಕರು ಬೆಳಕಿಗೆ ಬರಲಿದ್ದಾರೆ ಎಂದು ಹೇಳಿದರು. ಜಾತ್ಯಾತೀತ ತತ್ವದಲ್ಲಿ ಬೆಳೆದವನು. ಸದನದಲ್ಲಿ ಆರ್ ಎಸ್‌‌ ಎಸ್ ಬಗ್ಗೆ ತಿಳಿದಿದೆ ಎಂದು ಹೇಳಿದೆ ಅಷ್ಟೇ ‌ಅದನ್ನೇ ದೊಡ್ಡದಾಗಿ ಬಿಂಬಿಸಲಾಯಿತು. ಕಾರ್ಯಕರ್ತರಿಗೆ, ನನ್ನ ನಂಬಿಕೊಂಡವರಿಗೆ ನೋವಾಗಬಾರದು ಎಂದು ನಾನು ಏನೂ ಮಾತನಾಡಲಿಲ್ಲ ಎಂದರು.

ನಾನು ಪುಸ್ತಕ ಓದುವವನಲ್ಲ. ಶಾಲೆ, ಕಾಲೇಜುಗಳಲ್ಲಿ ಓದಲಿಲ್ಲ. ಅಂದಿನಿಂದಲೂ ರಾಜಕಾರಣ ಮಾಡಿಕೊಂಡು ಬೆಳೆದವನು ನಾನು. ಅಂತಿಮ ಪದವಿ ಓದುವಾಗ ಟಿಕೆಟ್ ದೊರೆಯುತು.‌ ಇದನ್ನು ಯಾರೂ ಸಹ ಊಹಿಸಲೂ ಸಾಧ್ಯವಿಲ್ಲ. ಅಂದಿನಿಂದ ಎಂಟು ಬಾರಿ ಶಾಸಕನಾಗಿ ಇಂದು ಉಪಮುಖ್ಯಮಂತ್ರಿಯಾಗಿದ್ದೇನೆ ಎಂದರು. ಈ ಪುಸ್ತಕ ರಾಜಕೀಯದಲ್ಲಿ ಬೆಳೆಯಬೇಕು ಎನ್ನುವವರಿಗೆ ಒಂದಷ್ಟು ಮಾರ್ಗದರ್ಶನ ‌ನೀಡಬಹುದು. ಏಕೆಂದರೆ ನಾನು ರಾಜೀವ್ ಗಾಂಧಿ ಅವರ ಮಾತಿನ ಮೇಲೆ ನಂಬಿಕೆ ಇಟ್ಟವನು. ಹಿಂಬಾಲಕರನ್ನ ಸೃಷ್ಟಿಸಬೇಡಿ ನಾಯಕರನ್ನು ಸೃಷ್ಟಿಸಿ ಎನ್ನುವ ಮಾತನ್ನು ಹೆಚ್ಚು ನಂಬುವವನು ಎಂದರು.‌

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+