Lok Sabha Elections 2024: ಕಾಂಗ್ರೆಸ್ ನಲ್ಲಿ ಲೋಕಸಭೆ ಟಿಕೆಟ್ ಗಾಗಿ ಫೈಟ್: ಡಿ ಕೆ ಶಿವಕುಮಾರ್ ಹೇಳಿದ್ದೇನು?

ಬೆಂಗಳೂರು,ಆಗಸ್ಟ್‌ 24: ವಿಧಾನಸಭಾ ಚುನಾವಣೆಯಲ್ಲಿ ಬಹುಮತವನ್ನ ಪಡೆದ ಬಳಿಕ ಕಾಂಗ್ರೆಸ್‌ ಸರ್ಕಾರ ರಚಿಸಿದ್ದು, ಇದೀಗ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನವನ್ನ ಗೆಲ್ಲುವ ಗುರಿ ಹಾಕಿಕೊಂಡು ಜೆಡಿಎಸ್‌ ಹಾಗೂ ಬಿಜೆಪಿ ನಾಯಕರಿಗೆ ಗಾಳ ಹಾಕಿದ್ದು, ಪಕ್ಷದ ಬಂದವರಿಗೆ ಟಿಕೆಟ್‌ ಎನ್ನುವ ಭರವಸೆ ನೀಡಿದ್ದಾರೆ ಎಂಬ ಚರ್ಚೆ ಜೋರಾಗಿದ್ದು, ಈ ಬಗ್ಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಸ್ಪಷ್ಟನೆ ನೀಡಿದ್ದಾರೆ.

ಹೌದು, ಈ ಕುರಿತು ಸದಾಶಿವನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಾನು ಯಾರಿಗೆ ಟಿಕೆಟ್ ಭರವಸೆ ಕೊಟ್ಟಿಲ್ಲ. ಅವರ ಶಕ್ತಿ ಸಾಮರ್ಥ್ಯದ ಆಧಾರದ ಮೇಲೆ ನಿರ್ಧಾರ ಮಾಡುತ್ತೇವೆ. ಈ ಕುರಿತು ಮುಖ್ಯಮಂತ್ರಿ ಇದ್ದಾರೆ. ಹೈಕಮಾಂಡ್‌ ಇದೆ ಈ ಬಗ್ಗೆ ಹೈಕಮಾಂಡ್‌ ತಿರ್ಮಾನ ಮಾಡುತ್ತದೆ ಎಂದು ಹೇಳಿದ್ದಾರೆ.

I Have Not Promised Anyone To Give Lok Sabha Election Ticket Said DCM DK Shivakumar

ನಾವು ಆಯನೂರು ಮಂಜುನಾಥ್ ಅವರಿಗೂ ಟಿಕೆಟ್ ಭರವಸೆ ನೀಡಿಲ್ಲ. ನಾಗರಾಜ್ ಗೌಡ ಗೆ ವಿಧಾನಸಭೆ ಟಿಕೆಟ್ ನೀಡಲಾಗಲಿಲ್ಲ, ಕೊನೆ ಕ್ಷಣದಲ್ಲಿ ನಾಲ್ಕೈದು ಟಿಕೆಟ್ ಬದಲಾವಣೆ ಮಾಡಲು ಹೊರಟಿದ್ದೆ. ಕಾರಣಾಂತರಗಳಿಂದ ಬದಲಾವಣೆ ಮಾಡಲಾಗಲಿಲ್ಲ. ಹಿಂದೆಯೇ ಆಯನೂರು ಮಂಜುನಾಥ್ ಪಕ್ಷಕ್ಕೆ ಬರ್ತೀವಿ ಅಂತ ಹೇಳಿದ್ರು,ಆದರೆ, ಕಾರಣಾಂತರಗಳಿಂದ ಕಾಂಗ್ರೆಸ್‌ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿರಲಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ಪಾರ್ಟಿ ಬಸ್ಸು ಸೀಟು ತರ ಆಗಬಾರದು. ಹತ್ತುವುದು,ಇಳಿಯೋದು ಆಗಬಾರದು. ಕಾಂಗ್ರೆಸ್ ಸೇರಿಕೊಂಡು ಪಕ್ಷದಲ್ಲೇ ಇರೋದೆ ಒಂದು ಸುದೈವ. ಕಾಂಗ್ರೆಸ್‌ಗೆ ಆದ ಒಂದು ಇತಿಹಾಸ ಇದೆ
ಕಾಂಗ್ರೆಸ್‌ಗೆ ಇರುವ ಇತಿಹಾಸ ಜೆಡಿಎಸ್ ಬಿಜೆಪಿಗೆ ಇಲ್ಲ. ಗ್ಯಾರೆಂಟಿಗಳನ್ನ ಯಾಕೆ ಜೆಡಿಎಸ್ ಬಿಜೆಪಿ ಕೊಡಲು ಸಾಧ್ಯವಾಗಿಲ್ಲ. ಆದರೆ, ದೇಶಕ್ಕಾಗಿ ನಾವು ಈ ಕಾರ್ಯಕ್ರಮಗಳನ್ನ ಕೊಟ್ಟಿದ್ದೇವೆ
ವ್ಯಕ್ತಿಗಿಂತ ಪಕ್ಷದ ಕಾರ್ಯಕ್ರಮ ಮುಖ್ಯ ಅನ್ನೋದು ಇಲ್ಲಿ ಮುಖ್ಯ. ಶಕ್ತಿ ಸಾಮರ್ಥ್ಯ ನೋಡಿ ಟಿಕೆಟ್ ಕೊಡುವ ಬಗ್ಗೆ ತೀರ್ಮಾನ ಮಾಡಲಾಗುತ್ತದೆ ಎಂದು ಹೇಳಿದರು.

ಪಕ್ಷಕ್ಕೆ ದುಡಿದವರನ್ನ ಯಾವುದೇ ಕಾರಣಕ್ಕೂ ಕೈಬಿಡುವ ಪ್ರಶ್ನೆ ಇಲ್ಲ. ಕಾಂಗ್ರೆಸ್ ಪಕ್ಷ ಬಸ್ ಸೀಟ್ ತರಹ ಅಲ್ಲ, ಹತ್ತಿ ಇಳಿಯುವ ಕೆಲಸ ಮಾಡಬಾರದು, ಇದೊಂದು ಶಾಶ್ವತ ಸೀಟ್. ಕಾಂಗ್ರೆಸ್ ಸದಸ್ಯತ್ವ ಪಡೆಯುವುದೆ ಸೌಭಾಗ್ಯದ ಕೆಲಸ. ಬೇರೆ ಯಾವ ಪಕ್ಷದವರಿಗೆ ಬಾವುಟದ ಶಾಲು ಹಾಕಲು ಆಗಲ್ಲ ಎಂದು ಹೇಳಿದರು.

ಈಗಾಗಲೇ ಐದು ಗ್ಯಾರಂಟಿ ಜಾರಿಮಾಡುತ್ತಿದ್ದೇವೆ. ಇವುಗಳನ್ನು ಬಿಜೆಪಿ, ಜೆಡಿಎಸ್ ಯಾಕೆ ಕೊಡಲಿಲ್ಲ, ಬಿಜೆಪಿಗೆ ಒಂದೇ ಒಂದು ಕಾರ್ಯಕ್ರಮ ಕೊಡಲಾಗಲಿಲ್ಲ, ಜನರ ಬದುಕಿನಲ್ಲಿ ಬದಲಾವಣೆ ತಂದಿದ್ದು ಕಾಂಗ್ರೆಸ್ ಪಕ್ಷ. ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರಲು ನಾಯಕರು ಬಂದಿದ್ದಾರೆ. ನದಿ ನೀರು ಸಮುದ್ರ ಸೇರಲೇ ಬೇಕು, ಸಮುದ್ರ ಅಂದ್ರೆನೆ ಕಾಂಗ್ರೆಸ್ ಪಕ್ಷ ಎಂದು ಹೇಳಿದರು.

ಆಪರೇಷನ್ ಸ್ಥಳೀಯ ಮುಖಂಡ ಪಾಲಿಟಿಕ್ಸ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕರೆ ನೀಡಿದ್ದು,ಪಕ್ಷದ ಸಿದ್ದಾಂತ ಒಪ್ಪಿ ಯಾರು ಪಕ್ಷ ಸೇರಲು ಮುಂದೆ ಬರ್ತಾರೆ. ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಿ, ಜಿಲ್ಲಾ ‌ಮಟ್ಟದಲ್ಲಿ‌ ಸೇರ್ಪಡೆ ಮಾಡಿಕೊಳ್ಳಿ. ವಿವಾದಿತ ವ್ಯಕ್ತಿಗಳ ಬಗ್ಗೆ ನಮ್ಮ ಗಮನಕ್ಕೆ ತನ್ನಿ, ಖರೀದಿ ಮಾಡಲ್ಲ, ಸಿದ್ದಾಂತ ಒಪ್ಪಿ ಬರುವವರನ್ನು ಸೇರಿಸಿಕೊಳ್ಳಿ. ಷರತ್ತು ಹಾಕುವವರು ಇದ್ದರೆ ನಮ್ಮ ಗಮನಕ್ಕೆ ತನ್ನಿ. ಯಾವುದೇ ವಿರೋಧಿಗಳ ಇದ್ದರೂ ಕರೆ ತನ್ನಿ‌ ಅಲ್ಲದೇ ಸ್ಥಳೀಯ ಮಟ್ಟದಲ್ಲಿ ಮತಗಳ ಪ್ರಮಾಣ ಹೆಚ್ಚಳ ಮಾಡಿಕೊಳ್ಳಬೇಕು ಎಂದು ಎಲ್ಲಾ ಜಿಲ್ಲಾ ಅಧ್ಯಕ್ಷರಿಗೂ ಸೂಚನೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+