'ಸಿದ್ದರಾಮಯ್ಯ ವಿಶ್ವಾಸದ್ರೋಹಿ, ಅವರಿಗೆ ಕೃತಜ್ಞತೆ ಇಲ್ಲ'

Posted By:
Subscribe to Oneindia Kannada

ಬೆಂಗಳೂರು, ಜುಲೈ 02 : 'ಸಿದ್ದರಾಮಯ್ಯ ಅವರಿಗೆ ರಾಜಕೀಯ ಮರುಜನ್ಮ ನೀಡಿದ್ದು ನಾನು. ಮುಖ್ಯಮಂತ್ರಿ ಮಾಡುವ ತನ ಹೆಗಲಿಗೆ ಹೆಗಲು ಕೊಟ್ಟು ಸಹಕಾರ ನೀಡಿದ್ದೇನೆ. ಈಗ ಅವರು ಅದನ್ನೆಲ್ಲ ಮರೆತಿದ್ದಾರೆ. ಅವರಿಗೆ ಕೃತಜ್ಞತೆ ಇಲ್ಲ' ಎಂದು ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀನಿವಾಸ ಪ್ರಸಾದ್ ಅವರು, 'ಸಿದ್ದರಾಮಯ್ಯ ಅವರು ವಿಶ್ವಾಸದ್ರೋಹಿ. ಅವರರೊಂದಿಗೆ ಮಾತನಾಡುವುದಿಲ್ಲ. ಅವರ ಮುಖ ನೋಡಲು ಇಷ್ಟಪಡಲ್ಲ' ಎಂದು ಆಕ್ರೋಶ ಹೊರಹಾಕಿದರು. [ಏಕಾಂಗಿಯಾದ ಶ್ರೀನಿವಾಸ ಪ್ರಸಾದ್]

v srinivas prasad
Photo Credit:

'ಗೌರವದಿಂದ ರಾಜಕೀಯ ನಿವೃತ್ತಿಯಾಗುವ ಕಾಲದಲ್ಲಿ ಮುಖ್ಯಮಂತ್ರಿಗಳು ನನಗೆ ವಿಶ್ವಾಸ ದ್ರೋಹ ಎಸಗಿದ್ದಾರೆ. ಅವರೊಬ್ಬ ಅತ್ಯಂತ ಹೊಟ್ಟೆ ಕಿಚ್ಚಿನ ಮನುಷ್ಯ. ಸಂಪುಟ ಪುನಾರಚನೆ ಮಾಡುವಾಗ ಪಿತೂರಿಯಿಂದ ಯಾವ ರೀತಿ ಸ್ವಾರ್ಥ ಸಾಧನೆ ಮಾಡಿದ್ದಾರೆ' ಎಂಬುದು ತಿಳಿದಿದೆ ಎಂದು ಆರೋಪಿಸಿದರು. [ಅರೆ ಇಸ್ಕಿ, ಖಮರುಲ್ ಇಸ್ಲಾಂ ಯೂ ಟೂರ್ನ್ ತಗೊಂಡ್ಬಿಟ್ರು!]

ಶ್ರೀನಿವಾಸ ಪ್ರಸಾದ್ ಹೇಳಿದಿಷ್ಟು.....

* ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ರಾಜಕೀಯ ಕುರಿತು ಯಾವುದೇ ಮಾತುಕತೆಗೆ ಸಿದ್ಧನಿಲ್ಲ. ನಾನು ಪಕ್ಷ ತೊರೆದು ಬಿಜೆಪಿ ಸೇರುತ್ತೇನೆ ಎಂಬ ಸುದ್ದಿಗಳೂ ಸುಳ್ಳು.

* ಸಿದ್ದರಾಮಯ್ಯ ಅವರನ್ನು ಬದಲಾಯಿಸುವಂತೆ ಹೈಕಮಾಂಡ್ ನಾಯಕರಿಗೆ ಪತ್ರ ಬರೆದಿದ್ದೇನೆ. ನಾಯಕತ್ವ ಏಕೆ ಬದಲಾಗಬೇಕು? ಎಂದು ಅವರಿಗೆ ವಿವರಣೆ ನೀಡಿದ್ದೇನೆ. ಮುಖ್ಯಮಂತ್ರಿ ಬದಲಾವಣೆ ಪ್ರಕ್ರಿಯೆ ಅಷ್ಟು ಸುಲಭವಲ್ಲ.ನಾಯಕತ್ವ ಬದಲಾಗಬೇಕು ಎಂಬ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ.

* ನಾಯಕತ್ವದ ಸಮಸ್ಯೆಯಿಂದಾಗಿ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರವನ್ನು ಕಳೆದುಕೊಂಡಿದೆ. ಅಸ್ಸಾಂನಲ್ಲಿ ಕೆಲವು ದಿನಗಳ ಹಿಂದೆ ನಡೆದ ಚುನಾವಣೆ ಇದಕ್ಕೆ ತಾಜಾ ಉದಾಹರಣೆ. ಕರ್ನಾಟಕದಲ್ಲಿಯೂ ಪಕ್ಷ ಉಳಿಯಬೇಕಾದರೆ ನಾಯಕತ್ವ ಬದಲಾಗಬೇಕು.

* ಖಮರುಲ್ ಇಸ್ಲಾಂ ಅವರು ದೂರ ವಾಗಿದ್ದರಿಂದ ನನ್ನ ನಿಲುವು ಬದಲಾವಣೆಯಾಗಿಲ್ಲ. ಆತುರದ ನಿರ್ಧಾರವನ್ನು ತೆಗೆದುಕೊಳ್ಳಬಾರದು ಎಂದು ವರಿಷ್ಠರು ಸೂಚನೆ ಕೊಟ್ಟಿದ್ದಾರೆ. ಶಾಸಕರ ಗುಂಪು ಕಟ್ಟಿಕೊಂಡು ಓಲೈಕೆ ರಾಜಕಾರಣವನ್ನು ನಾನು ಮಾಡುವುದಿಲ್ಲ.

*ಸಿದ್ದರಾಮಯ್ಯ ಅವರಿಗೆ ನಾನು ರಾಜಕೀಯ ಮರುಜನ್ಮ ನೀಡಿದ್ದು ನಾನು. ಅವರನ್ನು ಮುಖ್ಯಮಂತ್ರಿ ಮಾಡುವವರೆಗೂ ಹೆಗಲಿಗೆ ಹೆಗಲು ಕೊಟ್ಟು ಸಹಕಾರ ನೀಡಿದ್ದೇನೆ. ಆದರೆ, ಈಗ ಅವರು ಅದನ್ನೆಲ್ಲಾ ಮರೆತಿದ್ದಾರೆ. ಅವರಿಗೆ ಕೃತಜ್ಞತೆ ಇಲ್ಲ.

* ಸಿದ್ದರಾಮಯ್ಯ ಅವರ ಚೇಲಾಗಳ ಮಾತಿಗೆ ಹೆಚ್ಚು ಮನ್ನಣೆ ನೀಡುತ್ತಾರೆ. ಮುಖ್ಯಮಂತ್ರಿಯಾದ ನಂತರ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನನ್ನ ಜೊತೆ ಚರ್ಚೆ ನಡೆಸಿಲ್ಲ. ಪಕ್ಷದಲ್ಲಿನ ನನ್ನ ಅನುಭವ, ಹಿರಿತನ, ವರ್ಚಸ್ಸನ್ನು ಅವರು ಪರಿಗಣಿಸಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former minister V.Srinivas Prasad on Friday said, his efforts to get Siddaramaiah removed as the head of the state government will continue and he clarified that he has no plans to meet Chief Minister Siddaramaiah.
Please Wait while comments are loading...