ನನಗೆ ಪ್ರತಿಪಕ್ಷ ನಾಯಕನ ಹುದ್ದೆ ಬೇಡ: ಡಿಕೆ ಶಿವಕುಮಾರ್

ಬೆಂಗಳೂರು, ಆಗಸ್ಟ್ 25 : "ನನಗೆ ವಿರೋಧ ಪಕ್ಷದ ನಾಯಕನ ಹುದ್ದೆ ಬೇಡ. ಕಾರು ಬೇಕಾದವರು, ಮನೆ ಬೇಕಾದವರು ಹೋಗಲಿ. ನನ್ನನ್ನು ಫ್ರೀಯಾಗಿ ಬಿಟ್ಟುಬಿಡಿ" ಎಂದು ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಹೇಳಿದರು.

ಭಾನುವಾರ ಬೆಂಗಳೂರಿನಲ್ಲಿ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕ ಡಿ. ಕೆ. ಶಿವಕುಮಾರ್, "ಯಾರು-ಯಾರು ಅರ್ಜೆಂಟ್‌ನಲ್ಲಿದ್ದಾರೆ. ಯಾರಿಗೆ ಏನೇನೋ ಆಗಬೇಕು ಅಂತ ಇದ್ದಾರೆ ಅವರು ಆಗಲಿ" ಎಂದು ತಿಳಿಸಿದರು.

Recommended Video

      ಮುಳುಗುತ್ತಿರುವ ಕಾಂಗ್ರೆಸ್ ಗೆ ಜೀವ ತುಂಬಲು ಮುಂದಾದ ಹೈಕಮಾಂಡ್..? | Oneindia Kannada

      "ಮನೆ ಬೇಕಾದವರು, ಕಾರು ಬೇಕಾದವರು ಪ್ರತಿಪಕ್ಷ ನಾಯಕ ಸ್ಥಾನ ಪಡೆಯಲಿ. ನನಗೆ ಪರ್ಮನೆಂಟ್ ಮನೆ ಇದೆ. ಅಧಿಕಾರದ ಅವಶ್ಯಕತೆ ಇಲ್ಲ. ಪಕ್ಷದವರು ಯಾವುದೇ ತೀರ್ಮಾನ ಬೇಕಾದರೂ ತೆಗೆದುಕೊಳ್ಳಲಿ" ಎಂದರು.

      I Dont Need Opposition Leader Post Says DK Shivakumar

      "ಸೋಮವಾರ ಎಐಸಿಸಿ ಪ್ರಧಾನ ಕಾರ್ಯರ್ಶಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಎಲ್ಲರ ಜೊತೆಗೂ ಚರ್ಚೆ ನಡೆಸಿ ಪಕ್ಷಕ್ಕೆ ಒಳ್ಳೆಯದಾಗುವ ತೀರ್ಮಾನವನ್ನು ತೆಗೆದುಕೊಳ್ಳುತ್ತಾರೆ" ಎಂದು ಡಿ. ಕೆ. ಶಿವಕುಮಾರ್ ತಿಳಿಸಿದರು.

      ಎಚ್. ಡಿ. ದೇವೇಗೌಡ, ಎಚ್. ಡಿ. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ನಡುವಿನ ಆರೋಪ ಪ್ರತ್ಯಾರೋಪದ ಬಗ್ಗೆ ಪ್ರತಿಕ್ರಿಯಿಸಿದ ಡಿ. ಕೆ. ಶಿವಕುಮಾರ್, "ನಾನು ಪೇಪರ್ ಓದುವುದನ್ನು ಬಿಟ್ಟಿದ್ದೀನಿ. ಕುಮಾರಸ್ವಾಮಿ ಆರೋಪದ ಬಗ್ಗೆ ಏನೂ ಗೊತ್ತಿಲ್ಲ. ಅವರ ಆರೋಪಗಳಿಗೆಲ್ಲಾ ಉತ್ತರ ಕೊಡಲು ಆಗುವುದಿಲ್ಲ" ಎಂದರು.

      "ನನ್ನನ್ನು ಫ್ರೀಯಾಗಿ ಬಿಟ್ಟು ಬಿಡಿ. ಒಬ್ಬ ಮುಖ್ಯಮಂತ್ರಿಯ ಕೈ ಕೆಳಗೆ 14 ತಿಂಗಳು ಕೆಲಸ ಮಾಡಿದ್ದೇನೆ. ನನ್ನ ಇಲಾಖೆಯಲ್ಲಿ ಮಾಡಿದ ಕೆಲಸಗಳಿಗೆ ನಾನು ಬದ್ಧ" ಎಂದರು ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+