ನಾನು ಬಿಜೆಪಿಯ 10 ಶಾಸಕರನ್ನು ಖರೀದಿಸಬಲ್ಲೆ ಎಂದ ಜೆಡಿಎಸ್ ಶಾಸಕ
Recommended Video

ಬೆಂಗಳೂರು, ಫೆಬ್ರವರಿ 13: 'ಬಿಜೆಪಿ ಶಾಸಕರು ನನ್ನನ್ನು ಖರೀದಿಸುವುದಕ್ಕೆ ಸಾಧ್ಯವೇ ಇಲ್ಲ. ಅಗತ್ಯವಿದ್ದರೆ ನಾನೇ ಹತ್ತು ಬಿಜೆಪಿ ಶಾಸಕರನ್ನು ಖರೀದಿಸಬಲ್ಲೆ' ಎನ್ನುವ ಮೂಲಕ ಹೊಸ ಬಾಂಬ್ ಎಸೆದಿದ್ದಾರೆ ಜೆಡಿಎಸ್ ಶಾಸಕ ನಾರಾಯಣ ಗೌಡ.
ಇಷ್ಟು ದಿನ ನಾಪತ್ತೆಯಾಗಿದ್ದ ಕೆ ಆರ್ ಪೇಟೆ ಶಾಸಕ ನಾರಾಯಣ ಗೌಡ ಬೆಂಗಳೂರಿಗೆ ವಾಪಸ್ಸಾಗಿದ್ದು, ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಬಿಜೆಪಿ ನನ್ನನ್ನು ಎಂದಿಗೂ ಖರೀದಿಸುವುದಕ್ಕೆ ಸಾಧ್ಯವೇ ಇಲ್ಲ. ಅಗತ್ಯವಿದ್ದರೆ ನಾನೇ ಬಿಜೆಪಿಯ ಹತ್ತು ಶಾಸಕರನ್ನು ಖರೀದಿಸಬಲ್ಲೆ. ಫುಡ್ ಪಾಯ್ಸನ್ ಕಾರಣ ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ. ಆಸ್ಪತ್ರೆಯ ಬಿಲ್ ಗಳೂ ನನ್ನ ಬಳಿ ಇವೆ. ನಮ್ಮ ಪಕ್ಷದಲ್ಲಿ ಕೆಲವು ಆಂತರಿಕ ಭಿನ್ನಾಭಿಪ್ರಾಯಗಳಿದ್ದವು. ನಾವು ಅದನ್ನು ಸರಿಪಡಿಸಿಕೊಳ್ಳುತ್ತೇವೆ" ಎಂದು ನಾರಾಯಣ ಗೌಡ ಹೇಳಿದ್ದಾರೆ.

ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಕಾಂಗ್ರೆಸ್ ನ ಕೆಲಶಾಸಕರೊಂದಿಗೆ ನಾರಾಯಣಗೌಡರೂ ಇದ್ದರು ಎನ್ನಲಾಗಿತ್ತು. ಬಾಂಬೆಯ ಹೊಟೇಲ್ ನಲ್ಲಿ ಅವರಿದ್ದಾರೆ ಎಂಬ ಶಂಕೆ ವ್ಯಕ್ತವಾಗಿತ್ತು. ಆದರೆ ಬಜೆಟ್ ಅಧಿವೇಶನದ ದಿನ ಆಸ್ಪತ್ರೆಯಿಂದಲೇ ವಿಡಿಯೋ ಮೆಸೇಜ್ ಕಳಿಸಿದ್ದ ನಾರಾಯಣಗೌಡ, ತಾವು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿದ್ದರು.












Click it and Unblock the Notifications