ಕ್ವಾರಂಟೈನ್ ಕುರಿತ ಸುದ್ದಿಗಳಿಗೆ ತೆರೆ ಎಳೆದ ಸಚಿವ ಸುಧಾಕರ್

ಬೆಂಗಳೂರು, ಜುಲೈ 28 : ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಮತ್ತೆ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಮಂಗಳವಾರ ಹೀಗೆ ಹಬ್ಬಿದ್ದ ಸುದ್ದಿಗಳಿಗೆ ಟ್ವೀಟ್ ಮೂಲಕ ಅವರು ತೆರೆ ಎಳೆದಿದ್ದಾರೆ.

Recommended Video

      India and Nepal border dispute explained | Oneindia Kannada

      ಡಾ. ಕೆ. ಸುಧಾಕರ್ ಅವರ ಆಪ್ತ ಸಹಾಯಕನಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಆದ್ದರಿಂದ, ಸುಧಾಕರ್ ಮತ್ತೊಮ್ಮೆ ಕ್ವಾರಂಟೈನ್ ಆಗಿದ್ದಾರೆ ಎಂಬ ಸುದ್ದಿಗಳು ಮಂಗಳವಾರ ಹಬ್ಬಿತ್ತು.

      ಸಚಿವರ ವಿಧಾನಸೌಧದ 3ನೇ ಮಹಡಿಯ ಕಚೇರಿ ಮತ್ತು ಆಪ್ತ ಸಹಾಯಕ ಇದ್ದ ಕೊಠಡಿ ನಂಬರ್ 399 (ಎ) ಸೀಲ್ ಡೌನ್ ಮಾಡಲಾಗಿದೆ. ಸುಧಾಕರ್ ಸಹ ಕ್ವಾರಂಟೈನ್ ಆಗಿದ್ದಾರೆ ಎಂದು ವಿವಿಧ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿತ್ತು.

      I Am Not In Quarantine Tweted Dr K Sudhakar

      "ನಾನು ಸೋಂಕಿತನ ಪ್ರಾಥಮಿಕ ಸಂಪರ್ಕ ಹೊಂದಿಲ್ಲ. ಹೀಗಾಗಿ ಕ್ವಾರಂಟೈನ್ ಆಗುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇನೆ" ಎಂದು ಸಚಿವ ಡಾ. ಕೆ. ಸುಧಾಕರ್ ಸ್ಪಷ್ಟನೆಯನ್ನು ನೀಡಿದ್ದಾರೆ.

      ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಈಗಾಗಲೇ 2 ಬಾರಿ ಹೋಂ ಕ್ವಾರಂಟೈನ್‌ನಲ್ಲಿದ್ದರು. ಮೊದಲು ಕುಟುಂಬ ಸದಸ್ಯರಿಗೆ ಸೋಂಕು ತಗುಲಿದಾಗ 2ನೇ ಬಾರಿ ಆಪ್ತರೊಬ್ಬರಿಗೆ ಸೋಂಕು ತಗುಲಿದಾಗ ಸುಧಾಕರ್ ಕ್ವಾರಂಟೈನ್‌ನಲ್ಲಿದ್ದರು.

      ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳ ಸಂಖ್ಯೆ ಸೋಮವಾರ 1 ಲಕ್ಷಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರದಲ್ಲಿಯೇ ಒಟ್ಟು ಸೋಂಕಿತರ ಸಂಖ್ಯೆ 46,923 ಆಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+