ಜಾರಕಿಹೊಳಿ ಮನವೊಲಿಕೆ ಸಾಕು ಸಾಕಾಗಿ ಹೋಗಿದೆ: ಸಿದ್ದರಾಮಯ್ಯ

ಜಾರಕಿಹೊಳಿ ಮನವೊಲಿಕೆ ಸಾಕು ಸಾಕಾಗಿ ಹೋಗಿದೆ: ಸಿದ್ದರಾಮಯ್ಯ

Recommended Video

      ಜಾರಕಿಹೊಳಿ ಮನವೊಲಿಕೆ ಸಾಕು ಸಾಕಾಗಿ ಹೋಗಿದೆ: ಸಿದ್ದರಾಮಯ್ಯ | Siddaramaiah

      ಬೆಂಗಳೂರು, ಜುಲೈ 5: ಎಲ್ಲದಕ್ಕೂ ಇತಿಮಿತಿ ಅನ್ನೋದು ಇರುತ್ತದೆ, ರಮೇಶ್ ಜಾರಕಿಹೊಳಿ ಮನವೊಲಿಕೆ ಮಾಡಿ ಸಾಕು ಸಾಕಾಗಿ ಹೋಗಿದೆ. ಇನ್ನು ಮುಂದೆ ಇದು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

      ಆನಂದ್ ಸಿಂಗ್ ಹಲವು ಬಾರಿ ನನ್ನನ್ನು ಭೇಟಿಯಾಗಿದ್ದಾರೆ, ಏನಾದರೂ ಸಮಸ್ಯೆ ಇದ್ದರೆ, ನಮ್ಮ ಬಳಿ ಚರ್ಚಿಸಬೇಕಿತ್ತು. ಅದು ಬಿಟ್ಟು ರಾಜೀನಾಮೆ ನೀಡಿದರೆ ಹೇಗೆ. ಜಿಂದಾಲ್ ವಿಚಾರಕ್ಕೆ ರಾಜೀನಾಮೆ ನೀಡಿದ್ದಾರೆ ಎಂದರೆ ನಾನು ನಂಬುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

      ನಾನು ಸ್ಪೀಕರ್ ರಮೇಶ್ ಕುಮಾರ್ ಅವರನ್ನು ನಂಬುತ್ತೇನೆಯೇ ಹೊರತು, ರಮೇಶ್ ಜಾರಕಿಹೊಳಿಯನ್ನಲ್ಲ. ಈ ವಿಚಾರದಲ್ಲಿ ರಮೇಶ್ ಕುಮಾರ್ ಅವರ ತೀರ್ಮಾನವೇ ಅಂತಿಮ ಎಂದು ಜಾರಕಿಹೊಳಿಗೆ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.

      I am not going to talk Ramesh Jarkiholi any more: Siddaramaiah

      ಬಿಜೆಪಿಯವರು ಈಗ ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಅವರು ಆಪರೇಷನ್ ಕಮಲಕ್ಕೆ ಕೈಹಾಕಿಲ್ಲ ಎಂದರೆ ಅಂದು ನಂಬಲು ಸಾಧ್ಯವೇ ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ, ಉಮೇಶ್ ಜಾಧವ್, ಬಿಜೆಪಿ ಸೇರಿರುವುದು ಏನು ಲೆಕ್ಕ ಎಂದು ಕೇಳಿದ್ದಾರೆ.

      ಕಪ್ಪುಹಣ ವಾಪಸ್ ತರುವ ಬಗ್ಗೆ ಮಾತಿಲ್ಲ, ಎರಡು ಕೋಟಿ ಉದ್ಯೋಗದ ಸೊಲ್ಲಿಲ್ಲ. ಬರೀ ಬಸವಣ್ಣನವರನ್ನು ನೆನಪಿಸಿಕೊಂಡರೆ ಸಾಲದು ಎಂದು ನಿರ್ಮಲಾ ಸೀತಾರಾಮನ್ ಬಜೆಟಿಗೆ, ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

      ಬಜೆಟ್ ನಲ್ಲಿ ಬಸವಣ್ಣನ ಬಗ್ಗೆ ಪ್ರಸ್ತಾವಿಸಿದಷ್ಟೇ ಕರ್ನಾಟಕಕ್ಕೆ ಸಿಕ್ಕ ಕೊಡುಗೆ ಎಂದಿರುವ ಸಿದ್ದರಾಮಯ್ಯ, ಸಾಲುಸಾಲು ಟ್ವೀಟ್ ಮೂಲಕ, ಕೇಂದ್ರ ಸರಕಾರದ ಕಾಲೆಳೆದಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+