ಸೂರ್ಯ ಪೂರ್ವದಲ್ಲಿ ಹುಟ್ಟೋದು ಎಷ್ಟು ಸತ್ಯಾನೊ ನಮ್ಮ ಸರಕಾರ ಬರೋದು ಅಷ್ಟೇ ಸತ್ಯ: ಸಿದ್ದರಾಮಯ್ಯ

ಬಾಗಲಕೋಟೆ, ಜನವರಿ18: ನಾನು ಸ್ಪರ್ಧೆ ಮಾಡೋದು ಒಂದೇ ಕ್ಷೇತ್ರದಿಂದ ಈಗಾಗಲೇ ಹೇಳಿದ್ದೇನೆ, ಪದೆ ಪದೆ ಕೇಳಿದರೆ ಗೊತ್ತಿಲ್ಲ ಅಂತ ಹೇಳಬೇಕಾಗುತ್ತದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಬುಧವಾರ ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸೂರ್ಯ ಪೂರ್ವದಲ್ಲಿ ಹುಟ್ಟೋದು ಎಷ್ಟು ಸತ್ಯಾನೊ ನಮ್ಮ ಸರಕಾರ ಬರೋದು ಅಷ್ಟೇ ಸತ್ಯ. ಈ ಬಾರೀ ಸುಮಾರು 130 ಸ್ಥಾನವನ್ನು ಕನಿಷ್ಠ ಗೆಲ್ಲುತ್ತೇವೆ. ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಹೈಕಮಾಂಡ್ ತಿರ್ಮಾನ ಮಾಡುತ್ತದೆ ಎಂದು ಹೇಳಿದರು.

ನಾನು ಅಲೆಮಾರಿಯಲ್ಲ 8 ಬಾರಿ ಚುನವಣೆಯಲ್ಲಿ ಸ್ಪರ್ಧಿಸಿದ್ದೇನೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧಿಸುವವರು ಲೀಡರ್ ಅಲ್ಲವಾ..? ಪ್ರಧಾನಿ ಮೋದಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿರಲಿಲ್ಲವೇ..? ನಾನು ಎರಡೇ ದಿನ ಬಾದಾಮಿ ಕ್ಷೇತ್ರಕ್ಕೆ ಬಂದರೂ ಗೆಲ್ಲಿಸಿದ್ದಾರೆ. ಕೊನೆ ಚುನಾವಣೆ ಅಂತಾ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಿದೆ. ಅಲ್ಲಿನ ಜನರು ಸೋಲಿಸಿದ್ರು. ಬಾದಾಮಿ ದೂರ ಆಗಿರುವುದಕ್ಕೆ ಹತ್ತಿರಕ್ಕೆ ಹೋಗಿತ್ತಿದ್ದಿನಿ. ವಿಪಕ್ಷ ಸ್ಥಾನದಲ್ಲಿದ್ದರೂ ನಿರೀಕ್ಷೆಗೆ ಮೀರಿ ಕೆಲಸ ಮಾಡಿದ್ದೇನೆ. ಈ ಬಾರಿ ನಾನು ಒಂದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದರು.

I Am Contesting From One Constituency Siddaramaiah Clarifies

ಪ್ರಜಾಪ್ರಭುತ್ವದ ಟೀಕೆ ಟಿಪ್ಪಣಿ ಇರುತ್ತವೆ.ಆದರೆ ಅವು ವಾಸ್ತವಿಕ‌ ನೆಲೆಗಟ್ಟಿನಲ್ಲಿ ಇರಬೇಕು. ಸುಳ್ಳು ಟೀಕೆಗಳು ಇರಬಾರದು, ಬಿಜೆಪಿಗರಿಗೆ ಸತ್ಯ ಹೇಳಿ ಗೊತ್ತೆ ಇಲ್ಲ ಬರಿ ಸುಳ್ಳು ಹೇಳೋದೇ ಕೆಲಸವಾಗಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

I Am Contesting From One Constituency Siddaramaiah Clarifies

ಸ್ಯಾಂಟ್ರೋ ರವಿ ವಿಚಾರದ ಬಗ್ಗೆ ಮಾತನಾಡಿ, ಸ್ಯಾಂಟ್ರೋ ರವಿ ನಟೋರಿಯಸ್ ಕ್ರಿಮಿನಲ್. ಸರ್ಕಾರ ಕೇಸ್ ಮುಚ್ಚಿ ಹಾಕೋದಕ್ಕೆ ಎಲ್ಲಾ ಪ್ರಯತ್ನ ಮಾಡುತ್ತಿದೆ. ಯಾವುದೇ ತನಿಖೆ ಮಾಡದೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬಿಜೆಪಿಯವರಿಗೆ ಸತ್ಯ ಹೇಳೋದು ಗೊತ್ತಿಲ್ಲ ಬರೀ ಸುಳ್ಳು ಹೇಳುತ್ತಾರೆ. ಸ್ಯಾಂಟ್ರೋ ರವಿ ಜೊತೆ ಬಿಜೆಪಿಯವರು ಸಂಬಂಧ ಇಟ್ಟುಕೊಂಡಿದ್ದಾರೆ. ಹೀಗಾಗಿ ಇದು ಮುಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+