ನಾನು ಕೂಡ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ: ಬಹಿರಂಗವಾಗಿ ಬೇಡಿಕೆ ಇಟ್ಟ ಪಾಟೀಲ್
ಕಲಬುರಗಿ, ಜನವರಿ 13: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿಯಾಗಿ ಗೆಲುವು ಸಾಧಿಸಿರುವ ಕಾಂಗ್ರೆಸ್, ಇದೀಗ ಲೋಕಸಭಾ ಚುನಾವಣೆಗೆ ತಯಾರಿ ನಡೆಸುತ್ತಿದ್ದು, ಕೈ ಪಾಳಯದಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ.
ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಸಿದ್ದ ಶಾಸಕಹಾಗೂ ಸಿಎಂ ರಾಜಕೀಯ ಸಲಹೆಗಾರ ಬಿ.ಆರ್ ಪಾಟೀಲ್, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

ನಮಗೆ ರಾಜ್ಯಕ್ಕಿಂತಲೂ ರಾಷ್ಟ ರಾಜಕಾರಣದ ಮೇಲೆ ಆಸಕ್ತಿ ಜಾಸ್ತಿ, ನಾನು ಕೂಡ ಲೋಕಸಭೆ ಟಿಕೆಟ್ ಆಕಾಂಕ್ಷಿ. ಹೈಕಮಾಂಡ್ ಅನುಮತಿ ಕೊಟ್ಟರೆ ಬೀದರ್‌ನಿಂದ ಕಣಕ್ಕಿಳಿಯುತ್ತೇನೆ. ಬೀದರ್ ಲೋಕಸಭಾ ಕ್ಷೇತ್ರದಿಂದ ನಾನೂ ಆಕಾಂಕ್ಷಿಯಾಗಿದ್ದೇನೆ ಎಂದು ಸಿಎಂ ರಾಜಕೀಯ ಸಲಹೆಗಾರ ಬಿ.ಆರ್ ಪಾಟೀಲ್ ಹೇಳಿದ್ದಾರೆ.
ನನಗೆ ರಾಷ್ಟ್ರ ರಾಜಕಾರಣದ ಮೇಲೆ ಹೆಚ್ಚು ಆಸಕ್ತಿ ಇದೆ. ಹೈಕಮಾಂಡ್ ಅನುಮತಿ ಕೊಟ್ಟರೆ ಸ್ಪರ್ಧಿಸುವೆ. ಬೇರೆ ಯಾರಿಗಾದ್ರೂ ಟಿಕೆಟ್ ಕೊಟ್ಟರೂ ಅವರ ಪರವಾಗಿ ಕೆಲಸ ಮಾಡುವೆ. ನನ್ನ ಆಸೆಯನ್ನು ನಾನು ಸ್ವತಃ ಸಿಎಂ ಸಿದ್ರಾಮಯ್ಯ ಅವರ ಮುಂದೆ ಹೇಳಿರುವೆ. ಬೀದರ್ ಅಣ್ಣ ಬಸವಣ್ಣನ ಕರ್ಮಭೂಮಿ ನಾನು ಬಸವಣ್ಣನವರ ಅನುಯಾಯಿ. ಅಲ್ಲಿನ ಬಸವಾಭಿಮಾನಿಗಳು, ಬಸವ ಭಕ್ತರೊಂದಿಗೆ ನನ್ನ ನಂಟಿದೆ ಅಲ್ಲಿನ ಜನ ನನ್ನ ಕೈ ಹಿಡಿಯುತ್ತಾರೆಂಬ ಭರವಸೆ ನನಗಿದೆ ಹೀಗಾಗಿ ಪಕ್ಷದ ಅನುಮತಿ ನೀಡಿದರೆ ನಾನು ಸ್ಪರ್ಧಿಸುವೆ ಎಂದು ಹೇಳಿದರು.
ಹಿಂದೆ ರಾಮಕೃಷ್ಣ ಹೆಗಡೆ, ನಜಿರಸಾಬ್ ಇದ್ದಾಗಲೇ ನನಗೆ ರಾಜ್ಯ ಸಭಾ ಸದಸ್ಯರನ್ನಾಗಿ ಮಾಡುವ ಮಾತಾಗಿತ್ತು. ಮುಂದೆ ಕಾರಣಾಂತರಗಳಿಂದ ಅದು ಕಾರ್ಯರೂಪಕ್ಕೆ ಬರಲಿಲ್ಲ. ರಾಷ್ಟ್ರ ಮಟ್ಟದ ನೀರಿನ ಚಳುವಳಿ, ರೈತ ಚಳುವಳಿಗಳಲ್ಲಿ ಭಾಗಿಯಾಗಿದ್ದೇನೆ. ಹಾಗಾಗಿ ನನಗೆ ರಾಷ್ಟ್ರ ರಾಜಕಾರಣದಲ್ಲಿ ಬೆಳೆಯುವ ಆಸೆ ಇದೆ, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಹಲವು ಹಿರಿಯ ನಾಯಕರ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.
ಇನ್ನೂ ಆಯೋಧ್ಯೆ ಮಮಂದಿರ ಉದ್ಘಾಟನೆಗೆ ಮಲ್ಲಿಕಾರ್ಜುನ ಖರ್ಗೆ, ಸೋನಿಯಾಗಾಂಧಿ ಹೋಗುವುದಿಲ್ಲ ಎಂದು ಹೇಳಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಮಮಂದಿರ ಉದ್ಘಾಟನೆ ಒಂದು ಧಾರ್ಮಿಕ ಸಭೆ, ಆದರೀಗ ರಾಜಕೀಯ ಸಭೆಯಾಗಿ ಮಾರ್ಪಟ್ಟಿದೆ. ಆ ಕಾರ್ಯಕ್ರಮಕ್ಕೆ ಶಂಕರಾಚಾರ್ಯರೆ ಹೋಗುತ್ತಿಲ್ಲ. ಹೀಗಾಗಿ ಕಾಂಗ್ರೇಸ್ ಪಕ್ಷದವರು ಹೋಗುವುದು ಸರಿಯಲ್ಲ ಎಂದು ಹೇಳಿದರು.
ಬಿಜೆಪಿಯವರು ಹತಾಶರಾಗಿದ್ದಾರೆ. ನಮ್ಮದು ಸ್ಲಿಪಂಗ್ ಸರ್ಕಾರ ಅಲ್ಲ.ರಾಜ್ಯದ ಜನರಿಗೆ ಕೊಟ್ಟ ಮಾತಿನಂತೆ ಪಂಚ ಗ್ಯಾರಂಟಿಗಳನ್ನು ನೀಡುತ್ತಿದ್ದೇವೆ. ಬಿಜೆಪಿ ಅವರು ಅಧಿಕಾರ ಕಳೆದುಕೊಂಡು ಹತಾಶರಾಗಿ ಈ ರೀತಿ ಹೇಳೆಕೆ ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ ಅವರು, ರಾಮಮಂದಿರ ಉದ್ಘಾಟನೆ ಒಂದು ಧಾರ್ಮಿಕ ಸಭೆ, ಆದರೀಗ ರಾಜಕೀಯ ಸಭೆಯಾಗಿ ಮಾರ್ಪಟ್ಟಿದೆ. ಆ ಕಾರ್ಯಕ್ರಮಕ್ಕೆ ಶಂಕರಾಚಾರ್ಯರೆ ಹೋಗುತ್ತಿಲ್ಲ. ಹೀಗಾಗಿ ಕಾಂಗ್ರೇಸ್ ಪಕ್ಷದವರು ಹೋಗುವುದು ಸರಿಯಲ್ಲ ಎಂದರು












Click it and Unblock the Notifications