ಹುಕ್ಕಾ ಬ್ಯಾನ್: ಹೈಕೋರ್ಟ್‌ನಲ್ಲಿ ಸಮರ್ಥನೆ ನೀಡಿದ ಸರ್ಕಾರ

ಬೆಂಗಳೂರು, ಮಾರ್ಚ್‌ 07: ರಾಜ್ಯದ ಎಲ್ಲಾ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ರಾಜ್ಯದಲ್ಲಿ ಹುಕ್ಕಾ ನಿಷೇಧಿಸಲಾಗಿದೆ ಎಂದು ರಾಜ್ಯ ಸರ್ಕಾರ ಕರ್ನಾಟಕ ಹೈಕೋರ್ಟ್‌ನಲ್ಲಿ ಸಮರ್ಥನೆ ಮಾಡಿಕೊಂಡಿದೆ.

ಹುಕ್ಕಾ ನಿಷೇಧಿಸುವ ವಿಧೇಯಕಕ್ಕೆ ಎರಡೂ ಸದನಗಳು ಅನುಮೋದನೆ ನೀಡಿವೆ. ಸದ್ಯ ಆ ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕಬೇಕಿದೆ ಎಂದ ಅವರು, ವಿಧೇಯಕಕ್ಕೂ ಮುನ್ನವೇ ಸಾರ್ವಜನಿಕ ಹಿತದೃಷ್ಟಿಯಿಂದ ಸರ್ಕಾರ ಅಧಿಸೂಚನೆ ಹೊರಡಿಸಲಾಗಿದ್ದು, ಅದು ಸಂವಿಧಾನದ ಕಲಂ 162ರಡಿ ಊರ್ಜಿತವಾಗುತ್ತದೆ ಎಂದೂ ಸಹ ಹೇಳಿದೆ.

Hukka Banned Interest Of Public State Defended In HC

ಹುಕ್ಕಾ ನಿಷೇಧ ಪ್ರಶ್ನಿಸಿ ಆರ್‌. ಭರತ್‌ ಮತ್ತಿತರರು ಸಲ್ಲಿಸಿರುವ ಅರ್ಜಿಗಳು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠದ ಮುಂದೆ ವಿಚಾರಣೆಗೆ ಬಂದವು.

ಸರ್ಕಾರಕ್ಕೆ ಸಂವಿಧಾನದತ್ತ ಅಧಿಕಾರ: ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ, "ಸಂವಿಧಾನದ ಕಲಂ 47ರಡಿ ಅಧಿಕಾರ ಚಲಾಯಿಸಿ ಸಾರ್ವಜನಿಕರ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ಬಗೆಯ ಹುಕ್ಕಾ ಮಾರಾಟ, ಸೇವನೆ, ದಾಸ್ತಾನು, ಜಾಹೀರಾತು ಮತ್ತು ಉತ್ತೇಜಿಸುವುದನ್ನು ನಿಷೇಧಿಸಲಾಗಿದೆ" ಎಂದರು.

ಅಲ್ಲದೆ, ಒಂದು ವೇಳೆ ಧೂಮಪಾನ ಪ್ರದೇಶ ಇದ್ದರೆ ಅಲ್ಲಿಇತರೆ ಯಾವುದೇ ಸೇವೆ ನೀಡುವಂತಿಲ್ಲ. ಆದರೆ ಹುಕ್ಕಾ ಬಾರ್‌ಗಳಲ್ಲಿ ಹುಕ್ಕಾ ಜತೆಗೆ ಇತರೆ ಎಲ್ಲಾ ಸೇವೆಗಳನ್ನು ನೀಡಲಾಗಿತ್ತುತ್ತು. ಹುಕ್ಕಾ ಸೇವನೆಗೆ ಪ್ರತ್ಯೇಕ ಪ್ರದೇಶ ನಿಗದಿ ಮಾಡಿರಲಿಲ್ಲ.

ಬಾರ್‌ಗಳಲ್ಲಿಎಲ್ಲೆಡೆ ಹುಕ್ಕಾ ಸೇವನೆಗೆ ಅವಕಾಶ ನೀಡಲಾಗುತ್ತಿತ್ತು. ಹಾಗಾಗಿ ಇದು ಹುಕ್ಕಾ ಸೇವನೆ ಮಾಡುವವರು ಮಾತ್ರವಲ್ಲದೆ, ಇತರೆ ಸಾರ್ವಜನಿಕರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿತ್ತು ಎಂದು ಎಜಿ ಹೇಳಿದರು.

ಜತೆಗೆ ಸಾರ್ವಜನಿಕ ಆರೋಗ್ಯ ರಾಜ್ಯ ಸರಕಾರದ ವ್ಯಾಪ್ತಿಗೆ ಬರುತ್ತದೆ, ಹಾಗಾಗಿ ಸರಕಾರಗಳು ಈ ಹಿಂದೆ ಸಾರಾಯಿ, ಲಾಟರಿ, ಗುಟ್ಕಾ ನಿಷೇಧಿಸಿದ್ದಂತೆ ಇದೀಗ ಹುಕ್ಕಾ ನಿಷೇಧಿಸಿದೆ.

ಅಲ್ಲದೆ, ಕರ್ನಾಟಕ ಮಾತ್ರವಲ್ಲದೆ ದೇಶದ ಇತರೆ 5 ರಾಜ್ಯಗಳು ಕೋಟ್ಟಾ ಕಾಯಿದೆಗೆ ತಿದ್ದುಪಡಿ ಮಾಡಿ ಹುಕ್ಕಾ ನಿಷೇಧ ಜಾರಿಗೊಳಿಸಿವೆ ಎಂದು ಎಜಿ ಸರಕಾರದ ಕ್ರಮವನ್ನು ಸಮರ್ಥಿಸಿಕೊಂಡರು.

ನಿಯಮದಂತೆ ಹುಕ್ಕಾ ಬಾರ್: ಅರ್ಜಿದಾರರ ಪರ ವಕೀಲರು, ಕೋಟ್ಟಾ ಕಾಯಿದೆ ಅನ್ವಯ ಧೂಮಪಾನಕ್ಕೆ ಅವಕಾಶವಿದೆ, ಆದರೆ ಅದಕ್ಕೆ ಪ್ರತ್ಯೇಕ ಸ್ಥಳವನ್ನು ನಿಗದಿ ಮಾಡಬೇಕಿದೆ. ಕಾಯಿದೆಯಲ್ಲಿ ಧೂಮಪಾನಕ್ಕೆ ನಿಷೇಧವಿಲ್ಲ, ಕೆಲವು ನಿಯಂತ್ರಣಗಳಿವೆ.

ಅಲ್ಲದೆ, ಹುಕ್ಕಾ ಸೇವನೆ ಪ್ರದೇಶದಲ್ಲಿಇತರೆ ಯಾವುದೇ ಆಹಾರ ಪದಾರ್ಥಗಳನ್ನು ಸೇವನೆ ಮಾಡಲು ಅವಕಾಶ ನೀಡುತ್ತಿಲ್ಲ. ಕೋಟ್ಟಾ ಕಾಯಿದೆ ಅನ್ವಯವೇ ಹುಕ್ಕಾ ಪಾರ್ಲರ್‌ಗಳನ್ನು ನಡೆಸಲಾಗುತ್ತಿದೆ ಎಂದು ನ್ಯಾಯಾಲಯಕ್ಕೆ ವಿವರಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+