ಕನ್ನಡ ಭಾಷೆ ಬಳಕೆ ವಿಚಾರದಲ್ಲಿ ಭಾರೀ ಹಿನ್ನಡೆ: ತೆಲುಗು, ತಮಿಳು, ಮಲಯಾಳಂ ಮುನ್ನಡೆ!

ಕನ್ನಡ ಭಾಷೆ ವಿಚಾರಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಆಂಶವೊಂದು ಇದೀಗ ಬೆಳಕಿಗೆ ಬಂದಿದೆ. ಕನ್ನಡ ಭಾಷೆಗೆ ಹಿನ್ನಡೆ ಆಗುತ್ತಿದೆ. ವಲಸಿಗರ ಸಂಖ್ಯೆ ಹೆಚ್ಚಳವಾಗಿ ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಅನ್ಯ ಭಾಷೆಗಳ ದರ್ಬಾರು ಹೆಚ್ಚಾಗುತ್ತಿದೆ ಎನ್ನುವ ವಿಷಯಗಳು ಆಗ್ಗಾಗ್ಗೆ ಚರ್ಚೆಯಾಗುತ್ತಿರುತ್ತವೆ. ಇದರ ನಡುವೆ ಹಿಂದಿ ಭಾಷೆ ಹೇರಿಕೆ ವಿಚಾರವೂ ಭಾರೀ ಆಕ್ರೋಶಕ್ಕೂ ಕಾರಣವಾಗಿದೆ. ಇದರ ನಡುವೆ ಭಾಷೆ ಬಳಕೆಯ ವಿಚಾರದಲ್ಲೇ ಹಿನ್ನಡೆ ಆಗುತ್ತಿರುವ ಗಂಭೀರ ವಿಚಾರವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಬಹಿರಂಗಪಡಿಸಿದ್ದಾರೆ.

ಭಾಷೆ ಬಳಕೆ ಹೆಚ್ಚಳ ಪ್ರಮಾಣದಲ್ಲಿ ಕನ್ನಡದ ಸ್ಥಾನ ಕುಸಿಯುತ್ತಿದೆ ಎನ್ನುವ ಅಂಶವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ಅವರು ಪ್ರಸ್ತಾಪಿಸಿದ್ದಾರೆ. ದೇಶದಲ್ಲಿ ಹಿಂದಿ ಭಾಷಿಕರ ಸಂಖ್ಯೆ ಹೆಚ್ಚಳವಾಗುತ್ತಿದೆ ಎನ್ನುವ ಗಂಭೀರವಾದ ಅಂಶವನ್ನೂ ಅವರು ಇದೇ ಸಂದರ್ಭದಲ್ಲಿ ಪ್ರಸ್ತಾಪಿಸಿದ್ದಾರೆ. ಕನ್ನಡ ಭಾಷೆ ಬಳಕೆಯ ವಿಚಾರವಾಗಿ ಅವರು ಮಾತನಾಡಿರುವುದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

Huge setback in the use of Kannada language Telugu Tamil Malayalam ahead

ವರ್ಷದಿಂದ ವರ್ಷಕ್ಕೆ ಹಿಂದಿ ಭಾಷಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಕನ್ನಡ ಕೊನೆಯ ಸ್ಥಾನಕ್ಕೆ ಕುಸಿದಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆತಂಕಕಾರಿ ವಿಷಯವನ್ನು ಹಂಚಿಕೊಂಡಿದ್ದಾರೆ. ಅನ್ನಪೂರ್ಣ ಪಬ್ಲಿಷಿಂಗ್‌ ಹೌಸ್‌ನ 25ನೇ ವರ್ಷದ ನೆನಪಿನಲ್ಲಿ ಸಮತಾ ಬಿ. ದೇಶಮಾನೆ ಅವರು ಸಂಪಾದಿಸಿರುವ 25 ಮಹಿಳಾ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಹೇಳಿರುವ ಮಾತುಗಳು ಕನ್ನಡ ಭಾಷೆಯ ಬಗ್ಗೆ ಚರ್ಚೆಗೆ ಕಾರಣವಾಗಿದೆ.

ಲಭ್ಯ ಇರುವ ಮಾಹಿತಿಯಂತೆ ದೇಶದಲ್ಲಿ ಹಿಂದಿ ಭಾಷೆ ಮಾತನಾಡುವವರ ಪ್ರಮಾಣವು 40 ವರ್ಷಗಳಲ್ಲಿ ಶೇ 66ರಷ್ಟು ಹೆಚ್ಚಳವಾಗಿದೆ. 70 ಕೋಟಿ ಜನರು ಹಿಂದಿ ಭಾಷೆಯನ್ನು ಬಳಕೆ ಮಾಡುತ್ತಿದ್ದಾರೆ. ಇನ್ನು ಒಡಿಯಾ, ಮರಾಠಿ, ತೆಲುಗು, ತಮಿಳು, ಮಲಯಾಳಂ ಹಾಗೂ ಪಂಜಾಬಿ ಭಾಷೆಗಳನ್ನು ಬಳಸುವವರ ಪ್ರಮಾಣವು ಶೇ 7ರಷ್ಟು ಹೆಚ್ಚಿದೆ. ಇದೇ ಸಂದರ್ಭದಲ್ಲಿ ಕನ್ನಡ ಭಾಷೆ ಬಳಕೆ ಪ್ರಮಾಣ ಹೆಚ್ಚಳ ಶೇ 3.73ರಷ್ಟು ಮಾತ್ರ ಆಗಿದೆ ಎಂದು ಅವರು ಹೇಳಿದ್ದಾರೆ.

ಕನ್ನಡ ಭಾಷೆ ಬಳಕೆ ಹೆಚ್ಚಾಗುತ್ತಿಲ್ಲ ಎನ್ನುವ ವಿಚಾರವು ಸೋಷಿಯಲ್ ಮೀಡಿಯಾದಲ್ಲೂ ಚರ್ಚೆಗೆ ಕಾರಣವಾಗಿದೆ. ಕನ್ನಡಿಗರು ಕನ್ನಡ ಭಾಷೆಯನ್ನು ಹೆಚ್ಚು ಬಳಕೆ ಮಾಡಬೇಕು ಅಲ್ಲದೇ ಅನ್ಯಭಾಷಿಕರಿಗೂ ಕನ್ನಡ ಕಲಿಸಬೇಕು ಎನ್ನುವ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+