
ವೀಲ್ ಚೇರ್ ರೋಮಿಯೋ ಚಿತ್ರದ ಮೊದಲ ನೋಟಕ್ಕೆ ಫ್ಯಾನ್ಸ್ ಫಿದಾ
ಬೆಂಗಳೂರು, ಮೇ 25: ಸ್ಯಾಂಡಲ್ ವುಡ್ ಅಂಗಳದಲ್ಲಿ ಸಿನಿಮಾ ರಿಲೀಸ್ ಆದ್ಮೇಲೆ ಸದ್ದು ಮಾಡುವುದು ಕಾಮನ್. ಆದ್ರೆ ಸಿನಿಮಾ ರಿಲೀಸ್ ಗೂ ಮುನ್ನ ಜಸ್ಟ್ ಒಂದು ಝಲಕ್ ನಲ್ಲಿಯೇ ತಾಕತ್ತು ತೋರಿಸಿದೆ.
ಸಾಮಾನ್ಯವಾಗಿ ಇಂತಹ ಕಲೆ ಎಲ್ಲರಲ್ಲೂ ಕರಗತವಾಗಿರುವುದಿಲ್ಲ. ಆದರೆ ನಿರ್ದೇಶಕ ನಟರಾಜ್ ಈ ಕಲೆಯನ್ನು ಬಹಳ ಚೆನ್ನಾಗಿ ಅರಿತಂತೆ ತೋರುತ್ತಿದೆ. ಅದಕ್ಕೆ ಉದಾಹರಣೆ ಅಂತಿರುವುದೇ ವೀಲ್ ಚೇರ್ ರೋಮಿಯೋ ಟ್ರೇಲರ್.
ಹೊಸಬಗೆಯ ಕಂಟೆಂಟು ಹೊತ್ತು ಬಂದಿರುವ ವೀಲ್ ಚೇರ್ ರೋಮಿಯೋ ಸಿನಿಮಾ ಇದೇ ಮೇ 27ಕ್ಕೆ ಥಿಯೇಟರ್ ಅಂಗಳ ಪ್ರವೇಶ ಮಾಡಲಿದೆ. ವರ್ಷದ ಹಿಂದೆ ಬಿಡುಗಡೆಯಾಗಿದ್ದ ವೀಲ್ ಚೇರ್ ರೋಮಿಯೋ ಟ್ರೇಲರ್ ಇಂದಿಗೂ ಅದೇ ಖದರ್-ಪವರ್ ಉಳಿಸಿಕೊಂಡಿದೆ. ಇಂದಿಗೂ ಅದೇ ಕ್ರೇಜ್ ಉಳಿಸಿಕೊಂಡಿದೆ.
ಚಿತ್ರಪ್ರೇಮಿಗಳ ನಿರೀಕ್ಷೆ ಹೆಚ್ಚಿಸಿದ ಟ್ರೇಲರ್:
ಮೂರು ಗಂಟೆಯ ಸಿನಿಮಾವನ್ನು ಜಸ್ಟ್ ಒಂದು ಝಲಕ್ ನಲ್ಲಿಯೇ ತೋರಿಸಿರುವ ವೀಲ್ ಚೇರ್ ರೋಮಿಯೋ ಚಿತ್ರತಂಡವು ಚಿತ್ರಪ್ರೇಮಿಗಳಲ್ಲಿ ಮತ್ತಷ್ಟು ನಿರೀಕ್ಷೆಯನ್ನು ಹೆಚ್ಚಿಸಿದೆ. ಒಂದು ವಿಭಿನ್ನ ಬಗೆಯ ಬ್ಯಾನರ್ ನ ಸಿನಿಮಾವನ್ನಾಗಿ ರೂಪಿಸಿರುವ ನಟರಾಜ್ ಚಾಕಚಕ್ಯತೆಯನ್ನು ಇಲ್ಲಿ ಮೆಚ್ಚಲೇಬೇಕು.
ನಿರ್ದೇಶಕರಾಗಿ ನಟರಾಜ್ ಮೊದಲ ಚಿತ್ರ:
ರೋಮಿಯೋ, ಜೂಮ್, ಆರೆಂಜ್, ಸ್ಮೈಲ್ ಕಿಂಗ್ ಹೀಗೆ ಹಲವು ಸಿನಿಮಾಗಳಿಗೆ ಸಂಭಾಷಣೆ ಬರೆದು ತದನಂತರದಲ್ಲಿ ಮಠ ಗುರುಪ್ರಸಾದ್, ಪಿಸಿ ಶೇಖರ್, ಪ್ರಶಾಂತ್ ರಾಜು

ಗರಡಿಯಲ್ಲಿ ಪಳಗಿದ ನಟರಾಜ್ ಮೊದಲ ಬಾರಿಗೆ ಸ್ವಾತಂತ್ರ ನಿರ್ದೇಶಕನಾಗಿ ಆಕ್ಟನ್ ಕಟ್ ಹೇಳುತ್ತಿದ್ದಾರೆ. ವೀಲ್ ಚೇರ್ ರೋಮಿಯೋ ಚಿತ್ರದ ಮೂಲಕ ಪ್ರೇಕ್ಷಕರಿಗೆ
ಹೊಸ ಮನರಂಜನೆಯ ಹೂರಣ ಬಡಿಸಲು ಬರುತ್ತಿದ್ದಾರೆ.
ಹೀರೋ ಆಗಿ ಮೊದಲ ಬಾರಿ ಬಣ್ಣ ಹಚ್ಚಿದ ರಾಮ್ ಚೇತನ್:
ವೀಲ್ ಚೇರ್ ರೋಮಿಯೋ ಸಿನಿಮಾ ಮೂಲಕ ಮೊದಲ ಬಾರಿಗೆ ಹೀರೋ ಆಗಿ ಪರಿಚಿತರಾಗುತ್ತಿರುವ ರಾಮ್ ಚೇತನ್, ಯಾರು ಒಪ್ಪದ ಪಾತ್ರ ಪೋಷಿಸಿರುವ ಮಯೂರಿ, ರಂಗಾಯಣ ರಘು, ಸುಚೇಂದ್ರ ಪ್ರಸಾದ್, ತಬಲ ನಾಣಿ ಸೇರಿದಂತೆ ಅನುಭವಿ ಕಲಾಬಳಗ ಸಿನಿಮಾದಲ್ಲಿದೆ. ಭರತ್ ಬಿಜೆ ಸಂಗೀತ ಸ್ಪರ್ಶ, ಗುರು ಕಶ್ಯಪ್ ಸಂಭಾಷಣೆ, ಕಿರಣ್ ಸಂಕಲನ ಸಂತೋಷ್ ಪಾಂಡಿ ಛಾಯಾಗ್ರಹಣ ಸಿನಿಮಾಕ್ಕಿದೆ.