ಹುಬ್ಬಳ್ಳಿ ಹುತಾತ್ಮ ಸೈನಿಕನಿಗೆ ಅಂತಿಮ ನಮನ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಜೂನ್ 08 : ಹುಬ್ಬಳ್ಳಿಯ ಅಮರಗೋಳದ ಯೋಧ ಛತ್ತೀಸಗಢದಲ್ಲಿ ನಡೆದ ನಕ್ಸಲ್ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ. ಯೋಧನಪಾರ್ಥೀವ ಶರೀರ ಬುಧವಾರ ಸಂಜೆ ಹುಬ್ಬಳ್ಳಿಗೆ ಆಗಮಿಸಿತು.

ಸಕಲ ಸರ್ಕಾರಿ ಗೌರವದೊಂದಿಗೆ ಯೋಧ ಸತೀಶ್ ಅಂತ್ಯಕ್ರಿಯೆ ನೆರವೇರಿಸಲಾಯಿತು. ಸತೀಶ ಸೈಯಣ್ಣವರ (31) ಛತ್ತೀಸಗಡದ ದಾಂತೆವಾಡಯಲ್ಲಿ ನಕ್ಸಲ್ ಗುಂಡಿಗೆ ಬಲಿಯಾಗಿದ್ದರು. ಬಡ ಕುಟುಂಬದಿಂದಲೇ ಬಂದಿದ್ದ ಸತೀಶ ತಮ್ಮ ದುಡಿಮೆಯಿಂದ ಇತ್ತೀಚೆಗೆ ಸ್ವಂತ ಮನೆ ಕಟ್ಟಿಸಿದ್ದರು. ಮದುವೆ ಮಾಡಿಕೊಳ್ಳಲು ಸಿದ್ಧತೆ ನಡೆಸುತ್ತಿದ್ದರು. ಮುಂದಿನ ವಾರ ಊರಿಗೆ ಬರುವುದಾಗಿ ಕುಟುಂಬದವರಿಗೆ ತಿಳಿಸಿದ್ದರು. [ಚಿಕ್ಕಮಗಳೂರಿನಲ್ಲಿ ನಕ್ಸಲರ ಟೆಂಟ್ ಪತ್ತೆ]

satish

ಬಿಎ ಪದವಿ ಪಡೆದಿದ್ದ ಯೋಧ ಸತೀಶ ಅವರು, ಜಮ್ಮು ಕಾಶ್ಮೀರದಲ್ಲಿ 8 ವರ್ಷ ಸೇವೆ ಸಲ್ಲಿಸಿದ್ದರು. ದಾಂತೇವಾಡದಲ್ಲಿ ಕಳೆದ ಮೂರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಸತೀಶ ಅವರಿಗೆ ಬೇರೆ ಸ್ಥಳಕ್ಕೆ ವರ್ಗಾವಣೆಯಾಗಿತ್ತು. ಹೊಸ ಸ್ಥಳದಲ್ಲಿ ಕೆಲಸ ಮಾಡಲು ತೆರಳುವ ಮುನ್ನವೇ ನಕ್ಸಲರ ಗುಂಡಿಗೆ ಬಲಿಯಾಗಿ ವೀರಮರಣವನ್ನಪ್ಪಿದ್ದರು. [ಚಿತ್ರಗಳು : ಛತ್ತೀಸ್‌ಗಢದಲ್ಲಿ ಶಾಂತಿ ಸಂದೇಶ ಸಾರಿದ ಮೋದಿ]

ಚಿತ್ರಗಳು: ಶಂಭು ಹುಬ್ಬಳ್ಳಿ

-
-
-
-

ಯೋಧ ಸತೀಶನ ಪಾರ್ಥೀವ ಶರೀರವನ್ನು ಜಿಲ್ಲಾಡಳಿತದಿಂದ ಬರಮಾಡಿಕೊಂಡು ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hubballi Amargol based Soldier Satish (31) Killed in Naxal attack at Chhattisgarh.
Please Wait while comments are loading...