SWR: ಹುಬ್ಬಳ್ಳಿ-ರಾಮೇಶ್ವರಂ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್, ಈ ರೈಲುಗಳು ಭಾಗಶಃ ರದ್ದು

ಬೆಂಗಳೂರು, ಜುಲೈ 17: ಕರ್ನಾಟಕ ಭಾಗದಿಂದ ತಮಿಳುನಾಡಿನ ರಾಮನಾಥಪುರಗೆ (ರಾಮೇಶ್ವರಂ) ತೆರಳುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ನೈಋತ್ಯ ರೈಲ್ವೆಯು ಹುಬ್ಬಳ್ಳಿ - ರಾಮನಾಥಪುರಂ ಹುಬ್ಬಳ್ಳಿ ವಿಶೇಷ ರೈಲುಗಳ ಸೇವೆಯನ್ನು ವಿಸ್ತರಣೆ ಮಾಡಿ ಅಧಿಸೂಚನೆ ಹೊರಡಿಸಿದೆ. ಪ್ರಸ್ತುತ ರೈಲುಗಳ ಸೇವೆ, ಸಮಯ, ನಿಲುಗಡೆ ಮತ್ತು ಸಂಯೋಜನೆ ವಿವರ ಮುಂದಿದೆ.

ಹುಬ್ಬಳ್ಳಿ-ರಾಮನಾಥಪುರಂ ಸಾಪ್ತಾಹಿಕ ವಿಶೇಷ ರೈಲು (07355) ಶನಿವಾರದಂದು ಬೆಳಗ್ಗೆ 06.50 ಕ್ಕೆ ಹುಬ್ಬಳ್ಳಿಯಿಂದ ಹೊರಟು ಮರುದಿನ ಬೆಳಗ್ಗೆ 05.00 ಕ್ಕೆ ರಾಮನಾಥಪುರಂ ತಲುಪಲಿದೆ. ಈ ರೈಳುಗಳ ಕಾರ್ಯಾಚರಣೆಯನ್ನು ಆಗಸ್ಟ್ 09, 16, 23 ಮತ್ತು 30, 2025 ರಂದು ವಿಸ್ತರಣೆ ಮಾಡಲಾಗಿದೆ. ಈ ಮಾರ್ಗದಲ್ಲಿ ಒಟ್ಟು 4 ಟ್ರಿಪ್‌ಗಲು ಲಭ್ಯವಾಗಲಿವೆ.

Hubballi-Ramanathapuram-Hubballi Weekly Special Train Service Extension Timing scheducle

ರೈಲು ಸಂಖ್ಯೆ 07356 ರಾಮನಾಥಪುರಂ - ಹುಬ್ಬಳ್ಳಿ ಸಾಪ್ತಾಹಿಕ 12 ವಿಶೇಷ ರೈಲು ಭಾನುವಾರದಂದು ರಾತ್ರಿ 22.00 ಗಂಟೆಗೆ ರಾಮನಾಥಪುರಂನಿಂದ ಹೊರಟು ಉತ್ತರ ಕರ್ನಾಟಕದ ಬೃಹತ್ ರೈಲ್ವೆ ಟರ್ಮಿನಲ್ ಹೊಂದಿರುವ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಮರುದಿನ 19.40 ಗಂಟೆಗೆ ಬಂದು ಸೇರಲಿವೆ. ಈ ರೈಲಿನ ಸಂಚಾರವನ್ನು ಆಗಸ್ಟ್ 10, 17, 24 ಮತ್ತು 31, 2025 ರಂದು ವಿಸ್ತರಿಸಲಾಗಿದ್ದು, ಒಟ್ಟು ನಾಲ್ಕು ಟ್ರಿಪ್ ಸೇವೆ ಪ್ರಯಾಣಿಕರಿಗೆ ಲಭ್ಯವಾಗಲಿದೆ. ಎಂದಿನಂತೆ ನೀವು ಈ ಸಾಪ್ತಾಹಿಕ ಹುಬ್ಬಳ್ಳಿ-ರಾಮನಾಥಪುರಂ ವಿಶೇಷ ರೈಲುಗಳನ್ನು ಮುಂಗಡ ಬುಕಿಂಗ್ ಮಾಡುವಂತೆ ದಕ್ಷಿಣ ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Hubballi-Ramanathapuram-Hubballi Weekly Special Train Service Extension Timing scheducle

ಇಐ ಕಾಮಗಾರಿ: ರೈಲುಗಳ ಸಂಚಾರ ಭಾಗಶಃ ರದ್ದು

ಉತ್ತರ ಪ್ರದೇಶದ ದೆಹಲಿ ಸರಾಯ್ ರೋಹಿಲ್ಲಾ ನಿಲ್ದಾಣದಲ್ಲಿ ಹೊಸ ಆಯ್ಕೆ ಇಂಟರ್ ಲಾಕಿಂಗ್ (EI) ಪ್ಯಾನೆಲ್ ಅಳವಡಿಕೆ ಕಾರ್ಯ ಹಾಗೂ ಅದರ ಕಾರ್ಯಾರಂಭ ಕೆಲಸ ನಡೆದಿದೆ. ಈ ಸಂಬಂಧ 12213/12214 ಯಶವಂತಪುರ-ದೆಹಲಿ ಸರಾಯ್-ಯಶವಂತಪುರ ರೈಲುಗಳ ಸೇವೆಯನ್ನು ಭಾಗಶಃ ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

2025 ಜಲೈ 19 ಮಟ್ಟು 26ರಂದು ಹೊರಡುವ ಯಶವಂತಪುರ ದೆಹಲಿ ಸರಾಯ್ ರೋಹಿಲ್ಲಾ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (12213) ದೆಹಲಿ ಸರಾಯ್ ರೋಹಿಲ್ಲಾ ನಿಲ್ದಾಣ ಬದಲಾಗಿ ಹಜರತ್ ನಿಜಾಮುದ್ದೀನ್‌ನಲ್ಲಿ ಸಂಚಾರ ಕೊನೆಗೊಳಿಸುತ್ತದೆ. ಇದು ಹಜರತ್ ನಿಜಾಮುದ್ದೀನ್ ಮತ್ತು ದೆಹಲಿ ಸರಾಯ್ ರೋಹಿಲ್ಲಾ ನಡುವೆ ಸ್ಥಳವನ್ನು ರದ್ದುಗೊಳಿಸಲಾಗಿದೆ.

ಅದೇ ರೀತಿ, ದೆಹಲಿ ಸರಾಯ್ ರೋಹಿಲ್ಲಾ- ಯಶವಂತಪುರ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು (12214) ಜುಲೈ 21 ಮತ್ತು 28, 2025 ರಂದು ಪ್ರಾರಂಭವಾಗುವ ಪ್ರಯಾಣವು ದೆಹಲಿ ಸರಾಯ್ ರೋಹಿಲ್ಲಾ ನಿಲ್ದಾಣ ಬದಲಿಗೆ ಹಜರತ್ ನಿಜಾಮುದ್ದೀನ್‌ ನಿಂದ ಸಂಚಾರ ಆರಂಭಿಸಿ ಬೆಂಗಳೂರಿಗೆ ಬಂದು ತಲುಪುತ್ತದೆ. ಈ ಮೂಲಕ ದೆಹಲಿ ಸರಾಯ್ ರೋಹಿಲ್ಲಾ ಮತ್ತು ಹಜರತ್ ನಿಜಾಮುದ್ದೀನ್ ಮಧ್ಯದ ಸಂಚಾರ ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ್ ಕನಮಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+