• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲೋಕ ಶಿಕ್ಷಣ ಟ್ರಸ್ಟ್ ಸೇರಿದ ಪಬ್ಲಿಕ್ ಟಿವಿಯ ಹೆಚ್. ಆರ್. ರಂಗನಾಥ್

|

ಬೆಂಗಳೂರು, ಸೆಪ್ಟೆಂಬರ್ 02: ಕನ್ನಡ ಸುದ್ದಿ ವಾಹಿನಿ ಪಬ್ಲಿಕ್ ಟಿವಿಯ ಮುಖ್ಯಸ್ಥ ಹೆಚ್. ಆರ್. ರಂಗನಾಥ್ ಲೋಕ ಶಿಕ್ಷಣ ಟ್ರಸ್ಟ್‌ ಸಲಹೆಗಾರರಾಗಿ ನೇಮಕವಾಗಿದ್ದಾರೆ. ಟ್ರಸ್ಟ್ 'ಸಂಯುಕ್ತ ಕರ್ನಾಟಕ' ದಿನ ಪತ್ರಿಕೆಯನ್ನು ಹೊರತರುತ್ತದೆ.

ಬುಧವಾರ ಸಂಯುಕ್ತ ಕರ್ನಾಟಕ ದಿನ ಪತ್ರಿಕೆ ಕಚೇರಿಗೆ ಹೆಚ್. ಆರ್. ರಂಗನಾಥ್ ಭೇಟಿ ನೀಡಿದರು. ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ನಾಯಕ ಯು. ಬಿ. ವೆಂಕಟೇಶ್ ಅವರನ್ನು ಸ್ವಾಗತಿಸಿದರು. ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಲೋಕ ಶಿಕ್ಷಣ ಟ್ರಸ್ಟ್‌ ಸಲಹೆಗಾರರಾಗಿ ರಂಗನಾಥ್ ನೇಮಕವಾದರು.

ಕನ್ನಡ ಮಾಧ್ಯಮ ಲೋಕದಲ್ಲಿ ಕೊರೊನಾ ವೈರಸ್ ಎಬ್ಬಿಸಿರುವ ತಲ್ಲಣ!

ಪಬ್ಲಿಕ್ ಟಿವಿ ಕನ್ನಡ ಸುದ್ದಿ ವಾಹಿನಿಯ ಸಂಪಾದಕರಾಗಿರುವ ಹೆಚ್. ಆರ್. ರಂಗನಾಥ್ Writemen Media Private Ltd ಛೇರ್ಮನ್ ಮತ್ತು ಎಂಡಿಯಾಗಿದ್ದಾರೆ. ಟಿವಿ ಮಾಧ್ಯಮದಲ್ಲಿ ಬ್ಯುಸಿಯಾಗಿರುವ ಅವರು ಲೋಕ ಶಿಕ್ಷಣ ಟ್ರಸ್ಟ್‌ ಸಲಹೆಗಾರರಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಆತುರಕ್ಕೆ ಬಿದ್ದ ಮಾಧ್ಯಮ, ಪ್ರಚಾರಕ್ಕಿಳಿದ ಆಡಳಿತ ಮಂಡಳಿ: ಐಎಎಸ್ ಕಂಡಕ್ಟರ್ ಅಸಲಿ ಕತೆ!

ಲೋಕ ಶಿಕ್ಷಣ ಟ್ರಸ್ಟ್‌ 'ಸಂಯುಕ್ತ ಕರ್ನಾಟಕ' ದಿನ ಪತ್ರಿಕೆಯನ್ನು ಹೊರತರುತ್ತದೆ. 'ಕರ್ಮವೀರ' ಮತ್ತು 'ಕಸ್ತೂರಿ' ಸಹ ಟ್ರಸ್ಟ್‌ನಿಂದಲೇ ಪ್ರಕಟವಾಗುತ್ತದೆ. ಈ ಟ್ರಸ್ಟ್‌ಗೆ ಸಲಹೆಗಾರರಾಗಿ ರಂಗನಾಥ್ ನೇಮಕವಾಗಿದ್ದಾರೆ.

ನ್ಯೂಸ್ ಪೇಪರ್ ಜೊತೆಗೆ ಟಾಯ್ಲೆಟ್ ಪೇಪರ್ ಪ್ರಿಂಟ್ ಮಾಡಿದ ಸುದ್ದಿ ಪತ್ರಿಕೆ

'ಕನ್ನಡಪ್ರಭ' ದಿನ ಪತ್ರಿಕೆ ಸಂಪಾದಕರಾಗಿದ್ದ ಹೆಚ್. ಆರ್. ರಂಗನಾಥ್ ಸದ್ಯ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಬ್ಯುಸಿಯಾಗಿದ್ದಾರೆ. ಸುವರ್ಣ ನ್ಯೂಸ್ ಸಂಪಾದಕರಾಗಿದ್ದ ಅವರು ನಂತರ ಪಬ್ಲಿಕ್ ಟಿವಿ ತಂಡವನ್ನು ಕಟ್ಟಿದ್ದಾರೆ.

ಲೋಕಶಿಕ್ಷಣ ಟ್ರಸ್ಟ್‌ಗೆ ಸಲಹೆಗಾರರಾಗಿ ರಂಗನಾಥ್ ನೇಮಕಗೊಂಡಿರುವುದು ಕನ್ನಡದ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಕುತೂಹಲ ಮೂಡಿಸಿದೆ.

English summary
H. R. Ranganath editor of Kannada news channel Public TV joined the lokashikshana trust as adviser. Trust publishing Kannada daily news paper Samyukta Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X