ರೇರಾ ಕಾಯ್ದೆ ವೆಬ್ ಸೈಟಿಗೆ ಚಾಲನೆ, ಲಾಗ್ ಇನ್ ಹೇಗೆ?

Posted By:
Subscribe to Oneindia Kannada

ಬೆಂಗಳೂರು, ಜುಲೈ 25: ಕರ್ನಾಟಕ ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ನಿಯಮಗಳು, 2017ಕ್ಕೆ ರಾಜ್ಯ ಸಚಿವ ಸಂಪುಟವು ಅನುಮೋದನೆ ನೀಡಿ, 10/7/2017ರಂದು ಅಧಿಸೂಚನೆ ಮೂಲಕ ಪ್ರಕಟಿಸಿದೆ. ಇದಕ್ಕೆ ಸಂಬಂಧಿಸಿದಂತೆ ಬಿಲ್ಡರ್ ಗಳು ಹಾಗೂ ಏಜೆಂಟರುಗಳು ದಾಖಲೆ ಸಲ್ಲಿಸಲು ಅನುಕೂಲವಾಗಲು ವೆಬ್ ಪೋರ್ಟಲ್ ಆರಂಭಿಸಲಾಗಿದೆ. ಜುಲೈ 31ರೊಳಗೆ ಮಾಹಿತಿ ದಾಖಲೀಕರಣ ಮಾಡಬೇಕಿದೆ.

ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ ಮತ್ತು ಕರ್ನಾಟಕ ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ನಿಯಮಗಳು ರಾಜ್ಯದಲ್ಲಿ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರವನ್ನು (ರೇರಾ) ಸ್ಥಾಪಿಸಲು ಅವಕಾಶ ಕಲ್ಪಿಸಿರುತ್ತದೆ.

ರಿಯಲ್ ಎಸ್ಟೇಟಿಗೆ ಸಂಬಂಧಿಸಿದಂತೆ ಸರ್ಕಾರವು ತೆಗೆದುಕೊಂಡಿರುವ ಮೇಲ್ಕಂಡ ಕ್ರಮವು ಸಾರ್ವಜನಿಕರಿಗೆ ಅಗತ್ಯ ಮಾಹಿತಿ ಪಡೆದುಕೊಳ್ಳಲು, ತಾವು ಇಚ್ಛೆ ಪಟ್ಟ ಪ್ರದೇಶಗಳಲ್ಲಿ ನಿವೇಶನ/ ಅಪಾರ್ಟ್ಮೆಂಟ್/ ಮನೆಗಳನ್ನು ಹೆಚ್ಚಿನ ರೀತಿಯ ಶ್ರಮವಿಲ್ಲದೆ ಆಯ್ಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿರುತ್ತದೆ ಹಾಗೂ ರಿಯಲ್ ಎಸ್ಟೇಟ್ ಉದ್ದಿಮೆದಾರರು ಹಾಗೂ ಏಜೆಂಟರ ವಿರುದ್ಧ ದೂರುಗಳನ್ನು ದಾಖಲಿಸಲು ಅಥವಾ ಪರಿಹಾರವನ್ನು ಪಡೆಯಲು ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮವು ಸಾರ್ವಜನಿಕರಿಗೆ ಒಂದು ಕಾನೂನು ಬದ್ಧ ವೇದಿಕೆಯನ್ನು ಒದಗಿಸಿಕೊಟ್ಟಿದೆ.

ಹಣ ಕಟ್ಟಿಸಿಕೊಂಡು ನಿವೇಶನ / ಅಪಾರ್ಟ್ಮೆಂಟ್ / ಮನೆಗಳನ್ನು ನೋಂದಾಯಿಸಿಕೊಳ್ಳಲು ವಿಳಂಬ ಮಾಡುವ / ಮೋಸ ಮಾಡುವ ರಿಯಲ್ ಎಸ್ಟೇಟ್ ಉದ್ದಿಮೆದಾರರು ಹಾಗೂ ಏಜೆಂಟರ ವಿರುದ್ಧ ಸಾರ್ವಜನಿಕರು ದೂರುಗಳನ್ನು ದಾಖಲಿಸಿ ಪರಿಹಾರ ಪಡೆದುಕೊಳ್ಳಬಹುದಾಗಿದೆ.

ರಿಯಲ್ ಎಸ್ಟೇಟ್ ಉದ್ದಿಮೆದಾರರು ಹಾಗೂ ಏಜೆಂಟರು ರೇರಾ ಪ್ರಾಧಿಕಾರದಲ್ಲಿ ನೋಂದಣಿ ಮಾಡಿಸಿಕೊಳ್ಳುವುದನ್ನು ಹಾಗೂ ತಾವು ಮಾರಾಟ ಮಾಡ ಬಯಸುವ ನಿವೇಶನ / ಅಪಾರ್ಟ್ಮೆಂಟ್ / ಮನೆಗಳನ್ನು ಕಡ್ಡಾಯವಾಗಿ ರೇರಾ ಅಂತರ್ಜಾಲ ಪೋರ್ಟಲ್ನಲ್ಲಿ(rera.karnataka.gov.in) ಪ್ರಕಟಿಸುವುದನ್ನು ಕಡ್ಡಾಯ ಮಾಡಲಾಗಿದೆ.

ಪ್ರಗತಿಯಲ್ಲಿರುವ ಯೋಜನೆಗಳು

ಪ್ರಗತಿಯಲ್ಲಿರುವ ಯೋಜನೆಗಳು

"ಪ್ರಗತಿಯಲ್ಲಿರುವ ಯೋಜನೆಗಳು" ಎಂಬ ಪದದ ಬಗ್ಗೆ ಸ್ಪಷ್ಟವಾದ ವಿವರಣೆ ನೀಡುವ ಮೂಲಕ ಆ ಬಗ್ಗೆ ಕಂಡು ಬರುವ ಅಸ್ಪಷ್ಟತೆಗೆ ತೆರೆ ಎಳೆಯಲಾಗಿದ್ದು, ಮೇಲ್ಕಂಡ ಅಧಿನಿಯಮದ ವ್ಯಾಪ್ತಿಯಲ್ಲಿ ಬಹಳಷ್ಟು ಪ್ರಗತಿಯಲ್ಲಿರುವ ಯೋಜನೆಗಳು ಬರುತ್ತವೆ ಎಂಬುದನ್ನು ಸ್ಪಷ್ಟಪಡಿಸಲಾಗಿದೆ.
• ನೋಂದಾಯಿತ ಯೋಜನೆಗಳಲ್ಲಿ ಮಾರಾಟ ಮಾಡಲ್ಪಡುವ ಅಪಾರ್ಟ್ಮೆಂಟ್ಗಳ ಒಳ ವಿಸ್ತೀರ್ಣವನ್ನು ಕಾರ್ಪೆಟ್ ಏರಿಯಾ ವಿಸ್ತೀರ್ಣಕ್ಕೆ ನಿಗಧಿಪಡಿಸುವುದನ್ನು ನಿಯಮಗಳಲ್ಲಿ ಕಡ್ಡಾಯ ಮಾಡಿರುವುದರಿಂದ, ಗ್ರಾಹಕರಿಗೆ ಸ್ಪಷ್ಟ ಮಾಹಿತಿ ದೊರಕುತ್ತದೆ.

ಶೇಕಡ 70ರಷ್ಟು ಮೊತ್ತವನ್ನು ಠೇವಣಿ

ಶೇಕಡ 70ರಷ್ಟು ಮೊತ್ತವನ್ನು ಠೇವಣಿ

ಪ್ರಗತಿಯಲ್ಲಿರುವ ಯೋಜನೆಗಳಲ್ಲಿ ರಿಯಲ್ ಎಸ್ಟೇಟ್ ಉದ್ದಿಮೆದಾರರು ಈಗಾಗಲೇ ಗ್ರಾಹಕರಿಂದ ಸಂಗ್ರಹಿಸಿರುವ ಹಣದ ಪೈಕಿ ಶೇಕಡ 70ರಷ್ಟು ಮೊತ್ತವನ್ನು ಠೇವಣಿ ಇಡಬೇಕಾಗಿರುತ್ತದೆ.

ಉದ್ದಿಮೆದಾರರು, ಏಜೆಂಟರುಗಳಿಗೆ ಪ್ರತ್ಯೇಕ ನೋಂದಣಿ, ಲಾಗ್ ಇನ್ ಸೌಲಭ್ಯವಿದೆ. ಕ್ರಮವಾಗಿ ಐದು ಹಾಗೂ ನಾಲ್ಕು ಹಂತದಲ್ಲಿ ಅರ್ಜಿಯನ್ನು ತುಂಬಬೇಕಾಗುತ್ತದೆ. ಮೊದಲ ಬಾರಿ ಅರ್ಜಿ ತುಂಬಿ ಲಾಗ್ ಇನ್ ಐಡಿ ಹಾಗೂ ಪಾಸ್ವರ್ಡ್ ಪಡೆದ ಬಳಿಕ ನೇರವಾಗಿ ಲಾಗ್ ಇನ್ ಆಗಬಹುದು.

ಗ್ರಾಹಕರು ಠೇವಣಿ ಇಟ್ಟಿರುವ ಮೊತ್ತ

ಗ್ರಾಹಕರು ಠೇವಣಿ ಇಟ್ಟಿರುವ ಮೊತ್ತ

ಈ ರೀತಿ ಠೇವಣಿ ಇಡಲಾದ ಮೊತ್ತವು ಯೋಜನೆಯ ಅಭಿವೃದ್ಧಿ/ ನಿರ್ಮಾಣಕ್ಕೆ ಹಣಕಾಸು ಒದಗಿಸುವುದಲ್ಲದೇ, ಗ್ರಾಹಕರು ಠೇವಣಿ ಇಟ್ಟಿರುವ ಮೊತ್ತವನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಡೆಗಟ್ಟುತ್ತದೆ. ರಿಯಲ್ ಎಸ್ಟೇಟ್ ಉದ್ದಿಮೆದಾರರು ಮತ್ತು ನಿರ್ಮಾಣಗಾರರು ಸೇರಿದಂತೆ ರಿಯಲ್ ಎಸ್ಟೇಟ್ ಏಜೆಂಟರುಗಳನ್ನು ಸಹ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ವ್ಯಾಪ್ತಿಯಲ್ಲಿ ತರಲಾಗಿದೆ.

Petrol
ಅನಧಿಕೃತ ಏಜೆಂಟರುಗಳ ಮೇಲೆ ನಿಗಾ

ಅನಧಿಕೃತ ಏಜೆಂಟರುಗಳ ಮೇಲೆ ನಿಗಾ

ಈ ಕ್ರಮವು ಅನವಶ್ಯಕ ವ್ಯಕ್ತಿಗಳನ್ನು ರಿಯಲ್ ಎಸ್ಟೇಟ್ ಉದ್ದಿಮೆಯಿಂದ ಬೇರ್ಪಡಿಸುತ್ತದೆ ಮತ್ತು ಗ್ರಾಹಕರು ಅನಧಿಕೃತ ಏಜೆಂಟರುಗಳ ಜೊತೆ ವ್ಯವಹಾರ ನಡೆಸುವುದನ್ನು ತಪ್ಪಿಸುತ್ತದೆ. ರಿಯಲ್ ಎಸ್ಟೇಟ್ ವ್ಯವಹಾರಗಳಿಗೆ ಸಂಬಂಧಿಸಿದಂತೆ ರಿಯಲ್ ಎಸ್ಟೇಟ್ ಉದ್ದಿಮೆದಾರರು ಮತ್ತು ನಿರ್ಮಾಣಗಾರರು ಸೇರಿದಂತೆ ರಿಯಲ್ ಎಸ್ಟೇಟ್ ಏಜೆಂಟರುಗಳ ಚಟುವಟಿಕೆಗಳ ಬಗ್ಗೆ ಮಾಹಿತಿಯು ಸಾರ್ವಜನಿಕರಿಗೆ ಲಭ್ಯವಾಗುವಂತೆ ಪ್ರಕಟಿಸಲು ಅಂತರ್ಜಾಲ ಪೋರ್ಟಲ್ ಒಂದನ್ನು ನಿರ್ವಹಿಸುವುದನ್ನು ಅಧಿನಿಯಮವು ಕಡ್ಡಾಯಮಾಡಿರುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Karnataka government has notified the Real Estate Regulatory (Regulation and Development) Act on July 10, making it mandatory for all the builders to register with the regulator.Once documents are uploaded on the website (rera.karnataka.gov.in), the regulator will process the documents and issue the final certificate.
Please Wait while comments are loading...