ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಂದುಕೊರತೆಗಳ ದೂರು ನೀಡಲು ಜನಹಿತ APP

ರಾಜ್ಯದ ಬಹುತೇಕ ಎಲ್ಲಾ ನಗರಗಳಲ್ಲಿ ಮೂಲ ಸೌಕರ್ಯ ಕೊರತೆ ಹೊಸ ವಿಷಯವೇನಲ್ಲ. ಅದರೆ, ನಾಗರಿಕರು ಕುಂದು ಕೊರತೆಗಳ ಬಗ್ಗೆ ದೂರು ನೀಡುವ ವಿಧಾನ ಮಾತ್ರ ಸುಧಾರಿಸಿದೆ. ಮೊಬೈಲ್ ಅಪ್ಲಿಕೇಷನ್ ಮೂಲಕ ದೂರು ಸಲ್ಲಿಸುವ ಅವಕಾಶ ಲಭ್ಯವಿದೆ.

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 06: ರಾಜ್ಯದ ಬಹುತೇಕ ಎಲ್ಲಾ ನಗರಗಳಲ್ಲಿ ಮೂಲ ಸೌಕರ್ಯ ಕೊರತೆ ಹೊಸ ವಿಷಯವೇನಲ್ಲ. ಅದರೆ, ನಾಗರಿಕರು ಕುಂದು ಕೊರತೆಗಳ ಬಗ್ಗೆ ದೂರು ನೀಡುವ ವಿಧಾನ ಮಾತ್ರ ಸುಧಾರಿಸಿದೆ. ಈಗಿನ ಮೊಬೈಲ್ ಜಮಾನದಲ್ಲಿ ಸಾರ್ವಜನಿಕರು ಆಂಡ್ರಾಯ್ಡ್ ಅಪ್ಲಿಕೇಷನ್ ಮೂಲಕ ದೂರು ದುಮ್ಮಾನಗಳನ್ನು ಹೇಳಿಕೊಳ್ಳುವ ವ್ಯವಸ್ಥೆಯನ್ನು ಸಿದ್ದರಾಮಯ್ಯ ಸರ್ಕಾರ ಕಲ್ಪಿಸಿದೆ.

ಕರ್ನಾಟಕ ಮುನ್ಸಿಪಲ್ ಡಾಟಾ ಸೊಸೈಟಿ ಸಹಯೋಗದೊಂದಿಗೆ ನಿರ್ವಹಿಸಲ್ಪಡುವ ಈ ಅಪ್ಲಿಕೇಷನ್ ಹೆಚ್ಚೆಚ್ಚು ಜನರು ಬಳಸಬೇಕು ಎಂದು ನಗರಾಭಿವೃದ್ಧಿ ಸಚಿವ ಆರ್ ರೋಷನ್ ಬೇಗ್, ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಅವರು ಮನವಿ ಮಾಡಿಕೊಂಡಿದ್ದಾರೆ.

How to use Janahitha App and lodge complaint and grievances

ಏನೆಲ್ಲ ದೂರು ನೀಡಬಹುದು?:
ರಸ್ತೆ, ನೀರು, ಬೀದಿ ದೀಪ ಅಳವಡಿಕೆ, ಒಳಚರಂಡಿ ವ್ಯವಸ್ತೆ,ಸಾರ್ವಜನಿಕ ಆರೋಗ್ಯ ಸೇರಿದಂತೆ ಹಲವಾರು ಕುಂದು ಕೊರತೆಗಳ ಬಗ್ಗೆ ದೂರು ನೀಡಬಹುದು. ದೂರವಾಣಿ ಮೂಲಕ ಸಮಸ್ಯೆಗಳ ಬಗ್ಗೆ ದೂರು ದಾಖಲಿಸಬಹುದು. ವಾಟ್ಸಾಪ್ ಬಳಸಬಹುದು. ಅಥವಾ ಅಪ್ಲಿಕೇಷನ್ ಬಳಸಬಹುದು.

ಆನ್ ಲೈನ್ ಮೂಲಕ ಕುಂದುಕೊರತೆಗಳ ನಿರ್ವಹಣೆಗೆ ಸ್ವಯಂಚಾಲಿತ ತಂತ್ರಾಂಶ ಬಳಕೆ ಮಾಡಲಾಗಿದೆ. ದೂರು ನೀಡಲು ಒಂದು ನಿಮಿಷ ಸಾಕು. 12 ರಿಂದ 24 ಗಂಟೆಗಳ ಅವಧಿಯಲ್ಲಿ ಉತ್ತರ ಸಿಗಲಿದೆ.

ದೂರುದಾರರು ಚಿತ್ರ ಸಮೇತ ದೂರು ನೀಡಿದರೆ, ಉದಾ: ರಸ್ತೆ ಹೊಂಡದ ಚಿತ್ರ ಕಳಿಸಿದ್ದರೆ, ಹೊಂಡ ದುರಸ್ತಿ ಮಾಡಿದ ಬಳಿಕ ಆ ಸ್ಥಳದ ಚಿತ್ರವನ್ನು ಪ್ರಕಟಿಸಲಾಗುತ್ತದೆ. ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳಲು ಕ್ಲಿಕ್ ಮಾಡಿ

English summary
How to use Janahitha App and lodge complaint and grievances. Janahitha is a web and mobile application. Citizens can lodge grievances at their fingertip. The APK can be currently downloaded from the MRC website / Google Play Store.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X