ರಾಮಚಂದ್ರಾಪುರ ಮಠದ ಆಡಳಿತಕ್ಕೆ ಐಎಸ್ಓ ಪ್ರಮಾಣಪತ್ರ

Written By:
Subscribe to Oneindia Kannada

ಬೆಂಗಳೂರು, ಡಿ 21: ಹೊಸನಗರ ರಾಮಚಂದ್ರಾಪುರ ಮಠದ ಸುವ್ಯವಸ್ಥಿತ ಆಡಳಿತ ಮತ್ತು ಸಮರ್ಥ ನಿರ್ವಹಣೆಯನ್ನು ಪ್ರಮಾಣೀಕರಿಸಿ ಜರ್ಮನ್ ಸರ್ಟ್ ಸಂಸ್ಥೆ ಐಎಸ್ಓ ಪ್ರಮಾಣಪತ್ರವನ್ನು ನೀಡಿದೆ.

ಹೊಸನಗರ ರಾಮಚಂದ್ರಾಪುರ ಮಠದ ಆಡಳಿತ ನಿರ್ವಹಣೆ, ಪೂಜಾ ವ್ಯವಸ್ಥೆ, ಸ್ವಚ್ಛತೆ, ಲೆಕ್ಕಪತ್ರ ನಿರ್ವಹಣೆ, ಸುರಕ್ಷೆ, ವಸತಿ ವ್ಯವಸ್ಥೆ ಹಾಗೂ ಪ್ರಸಾದ ಭೋಜನ ವ್ಯವಸ್ಥೆಗಳನ್ನು ಸಂಸ್ಥೆಯ ತಜ್ಞರ ಪರಿಶೋಧನೆಗೆ ಒಳಪಡಿಸಲಾಗಿತ್ತು. (ರಾಘವೇಶ್ವರ ಶ್ರೀಗಳ ಸಂದರ್ಶನ)

ಎಲ್ಲಾ ವ್ಯವಸ್ಥೆಗಳು ಮತ್ತು ಆಡಳಿತ ನಿರ್ವಹಣೆಯು, ISO 9001:2008 ಅರ್ಹತಾ ನಿಯಮಗಳಿಗೆ ಅನುಗುಣವಾಗಿರುವುದು ಖಾತರಿಯಾದ ಬಳಿಕ ಮಠಕ್ಕೆ ಐಎಸ್ಓ ಪ್ರಮಾಣಪತ್ರ ನೀಡಲಾಗಿದೆ.

Hosanagraa Ramachandrapura Math got ISO certification

ರಾಮಚಂದ್ರಾಪುರ ಮಠವು ಶಂಕರಾಚಾರ್ಯರಿಂದ ಸಂಸ್ಥಾಪಿಸಲ್ಪಟ್ಟ ಏಕೈಕ ಅವಿಚ್ಛಿನ್ನ ಪರಂಪರೆಯ ಪಾವಿತ್ರ್ಯತೆ ಹಾಗೂ ವೈಶಿಷ್ಟ್ಯವನ್ನು ಹೊಂದಿದ್ದಾಗಿದೆ ಎಂದು ಮಠದ ಅಧಿಕಾರಿಗಳು ತಿಳಿಸಿದ್ದಾರೆ.

ಜೊತೆಗೆ, ಪರಂಪರಾಗತ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಜೊತೆಜೊತೆಗೆ ದಕ್ಷ ಆಡಳಿತ ಹಾಗೂ ಹಣಕಾಸಿನ ವ್ಯವಸ್ಥೆಯನ್ನು ಪಾರದರ್ಶಕ ಮತ್ತು ಪ್ರಾಮಾಣಿಕವಾಗಿ ಇಟ್ಟಿರುವ ಹೆಗ್ಗೆಳಿಕೆಯನ್ನೂ ಹೊಂದಿದೆ.

ಮಠದ ಕುರಿತಾಗಿ ನಾಡಿನಾದ್ಯಂತ ಸದಭಿಪ್ರಾಯವಿದ್ದು, ಈಗ ದೊರೆತಿರುವ ಐಎಸ್ಒ ಪ್ರಮಾಣಪತ್ರವು ಮಠದ ಸುವ್ಯವಸ್ಥಿತ ಮಾದರಿ ಆಡಳಿತಕ್ಕೆ ಕೈಗನ್ನಡಿ ಹಾಗೂ ಪಾರದರ್ಶಕ ನಿರ್ವಹಣೆಗೆ ಸಾಕ್ಷಿಯಾಗಿದೆ ಎಂದು ರಾಮಚಂದ್ರಾಪುರ ಮಠದ ಅಧಿಕಾರಿಗಳು ಹೇಳಿದ್ದಾರೆ.

ಸಂಸ್ಥೆ ಅಥವಾ ವ್ಯಕ್ತಿಗಳು ತಮ್ಮ ಹಣಕಾಸು ನಿರ್ವಹಣೆ, ಆಡಳಿತ ವ್ಯವಸ್ಥೆಯ ಗುಣಮಟ್ಟವನ್ನು ಸುಸೂತ್ರವಾಗಿ ಒಂದು ಚೌಕಟ್ಟಿನೊಳಗೆ ರೂಢಿಸಿಕೊಂಡಿರುವುದನ್ನು ಪ್ರಮಾಣೀಕರಿಸುವ ಪ್ರಮಾಣಪತ್ರ ಇದಾಗಿದ್ದು, ಮಠದ ಆಡಳಿತ ಸರಿಯಿಲ್ಲ ಎನ್ನುತ್ತಿದ್ದವರಿಗೆ ಈ ಐಎಸ್ಓ ಪ್ರಮಾಣಪತ್ರ ಸೂಕ್ತ ಉತ್ತರ ನೀಡಿದೆ ಎಂದು ಭಾವಿಸುತ್ತೇವೆ ಎಂದು ಮಠದ ಅಧಿಕಾರಿಗಳು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
German Cert, an ISO certification company given ISO 9001:2008 certificate to Ramachandrapura Mutt of Hosanagara.
Please Wait while comments are loading...