• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಖ್ಯಮಂತ್ರಿಯಾಗಬೇಕೆಂದು ಕನಸು ಕಂಡಿಲ್ಲ- ಅನಂತಕುಮಾರ್ ಹೆಗ್ಡೆ

By ಅನುಷಾ ರವಿ
|

ಭಾರತೀಯ ಜನತಾ ಪಕ್ಷದ ಫೈರ್ ಬ್ರ್ಯಾಂಡ್ ಪ್ರಚಾರಕರಾಗಿರುವ ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ಅವರು ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಭಿನ್ನತೆ, ಸಾರ್ವಜನಿಕರಲ್ಲಿರುವ ಆಕ್ರೋಶ, ಹಿಂದೂತ್ವವಾದದ ಅಗತ್ಯ, ಪ್ರಕಾರ ಭಾಷಣ, ದೂಷಣೆ, ಆರೋಪ, ಪ್ರತ್ಯಾರೋಪದ ಬಗ್ಗೆ ಒನ್ಇಂಡಿಯಾ ಪ್ರತಿನಿಧಿ ಜತೆ ಮಾತನಾಡಿದ್ದಾರೆ.

ಕೌಶಲ್ಯ ಅಭಿವೃದ್ಧಿ ಸಚಿವ ಅನಂತಕುಮಾರ್ ಹೆಗ್ಡೆ ಅವರು ನವಕರ್ನಾಟಕ ಪರಿವರ್ತನಾ ಯಾತ್ರೆಯಿಂದ ಈಗಿನ ಜನಸುರಕ್ಷಾ ಯಾತ್ರೆಯಲ್ಲಿ ತಮ್ಮ ಭಾಷಣದ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಅಲ್ಲದೆ, ಬಿಜೆಪಿ ಪರವಿರುವ ಯುವಜನಾಂಗ ರೊಚ್ಚಿಗೇಳುವಂತೆ ಅನೇಕ ಸಂದರ್ಭಗಳಲ್ಲಿ ಮಾಡಿದ್ದಾರೆ. ಈ ಬಾರಿಯ ಚುನಾವಣೆ ಏಕೆ ಧ್ರುವೀಕರಣದತ್ತ ಸಾಗಿದೆ, ಅದರ ಅಗತ್ಯವೇನು ಎಂಬುದನ್ನು ವಿವರಿಸಿದ್ದಾರೆ.

ಅನಂತ್‌ಕುಮಾರ್ ಹೆಗಡೆ ಒಬ್ಬ ರಾಕ್ಷಸ : ಪ್ರಕಾಶ್‌ ರೈ

ಕರಾವಳಿಯಲ್ಲಿ ಹಿಂದೂ ವರ್ಸಸ್ ಅಲ್ಪ ಸಂಖ್ಯಾತ ಎಂದಾಗಿದೆ?

-ಹಾಗೇನಿಲ್ಲ, ಎಲ್ಲಿದ್ದರೂ ಕಾಂಗ್ರೆಸ್ ವಿರುದ್ಧ ಬಿಜೆಪಿ ಹೋರಾಟ. ಕಾಂಗ್ರೆಸ್ ಎಂದರೆ ಪಕ್ಷವಲ್ಲ, ಅವರ ಕೆಟ್ಟ ಸಂಸ್ಕೃತಿಯ ವಿರುದ್ಧ ನಮ್ಮ ಹೋರಾಟ. ಬಿಜೆಪಿ ಸಂಸ್ಕೃತಿ ಹಾಗೂ ಕಾಂಗ್ರೆಸ್ ಸಂಸ್ಕೃತಿ ಭಿನ್ನ. ಇದೊಂದು ಸೈದ್ಧಾಂತಿಕ ಹೋರಾಟ, ಬಿಜೆಪಿ ಹಾಗೂ ಕಾಂಗ್ರೆಸ್ ಸಂಸ್ಕೃತಿ ಹೋರಾಟ ಮುಂದುವರೆಯಲಿದೆ.

ಇನ್ನಷ್ಟು ಮುಂದೆ ಓದಿ...

ಜನಸುರಕ್ಷಾ ಯಾತ್ರೆಯ ಉದ್ದೇಶವೇನು?

ಜನಸುರಕ್ಷಾ ಯಾತ್ರೆಯ ಉದ್ದೇಶವೇನು?

ಕಾಂಗ್ರೆಸ್ ಸರ್ಕಾರದಲ್ಲಿ ನಮ್ಮ 23 ಕಾರ್ಯಕರ್ತರು ದಾರುಣವಾಗಿ ಹತ್ಯೆಯಾದರು.ಮುಖ್ಯವಾಗಿ ಕರಾವಳಿಯಲ್ಲಿ ಈ ಬಗ್ಗೆ ಆಕ್ರೋಶ ಹೆಚ್ಚಾಗಿದೆ. ಒಟ್ಟಾರೆ, 7,700 ಕೊಲೆಗಳಾಗಿವೆ. ಜನರು ಸುರಕ್ಷತೆ ಇಲ್ಲದೆ ಕಂಗಾಲಾಗಿದ್ದಾರೆ. ಮಾರ್ಚ್ 06ರಂದು ಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದೆ. ಆದರೆ, ಈ ಅಭಿಯಾನ ಮುಂದುವರೆಯಲಿದೆ. ಈ ಹಿಂದಿನ ಸರ್ಕಾರಗಳು ಅಧಿಕಾರದಲ್ಲಿದ್ದಾಗ ಇಷ್ಟೊಂದು ಭಯದ ವಾತಾವರಣ ಇರಲಿಲ್ಲ.

ಹಿಂದೂಗಳ ಸುರಕ್ಷತೆಗಾಗಿ ಮಾತ್ರ ಹೋರಾಟವೇ?

ಹಿಂದೂಗಳ ಸುರಕ್ಷತೆಗಾಗಿ ಮಾತ್ರ ಹೋರಾಟವೇ?

ಹಿಂದೂಗಳ ಸುರಕ್ಷತೆಗಾಗಿ ಮಾತ್ರ ಹೋರಾಟವೇ?

ಕಾಂಗ್ರೆಸ್ ಸರ್ಕಾರವು ಹಿಂದೂಗಳ ಸುರಕ್ಷತೆಯನ್ನು ಕಡೆಗಣಿಸುತ್ತಿದೆ. ಹೀಗಾಗಿ, ಸುರಕ್ಷತೆಗಾಗಿ ಅಭಿಯಾನ ಅನಿವಾರ್ಯ.

ಈ ಬಾರಿ ಧ್ರುವೀಕರಣ ಚುನಾವಣೆ ಕಾಣಬಹುದೆ?

ಹೌದು, ಎಲ್ಲಾ ರೀತಿಯ ಧ್ರುವೀಕರಣ ಚುನಾವಣೆಯನ್ನು ಬಹುಶಃ ಕಾಣಬಹುದು.

ಧ್ರುವೀಕರಣ ಚುನಾವಣೆ ಬಗ್ಗೆ ನಿಮ್ಮ ಅನಿಸಿಕೆ?

ಧ್ರುವೀಕರಣ ಚುನಾವಣೆ ಬಗ್ಗೆ ನಿಮ್ಮ ಅನಿಸಿಕೆ?

ಕೇವಲ ಕೆಲ ಸಮುದಾಯಗಳ ಓಲೈಕೆ ಮಾಡುವ ಸರ್ಕಾರದ ವಿರುದ್ಧ ಹಿಂದೂಗಳು ಬೇಸತ್ತಿದ್ದಾರೆ. ಉದಾಹರಣೆಗೆ ಕೆಲ ದಿನಗಳ ಹಿಂದೆ ಮುಸ್ಲಿಮರ ವಿರುದ್ಧದ ಕೇಸುಗಳನ್ನು ಹಿಂತೆಗೆದುಕೊಳ್ಳಲಾಯಿತು. ಅವರೆಲ್ಲರನ್ನು ಮುಗ್ಧರು ಎಂದು ಪ್ರಕಟಿಸಲಾಯಿತು. ಆದರೆ, ಇದೇ ಸಮಯದಲ್ಲಿ ಸಾವಿರಾರು ಹಿಂದೂ ಕಾರ್ಯಕರ್ತರನ್ನು ಬಂಧಿಸಲಾಯಿತು. ನಮ್ಮ ಮುಖ್ಯಮಂತ್ರಿಗಳು ಒಮ್ಮೆ ಕೂಡಾ ಮುಗ್ಧ ಹಿಂದೂಗಳ ಬಗ್ಗೆ ಸೊಲ್ಲೊತ್ತಿಲ್ಲ. ಮುಸ್ಲಿಮರು ಮಾತ್ರ ಮುಗ್ಧರು, ಹಿಂದೂಗಳು ಮುಗ್ಧರಲ್ಲವೇ?

ನೀವು ಬಿಜೆಪಿಯ ಸಿಎಂ ಅಭ್ಯರ್ಥಿಯೇ?

ನೀವು ಬಿಜೆಪಿಯ ಸಿಎಂ ಅಭ್ಯರ್ಥಿಯೇ?

ಇದೆಲ್ಲವೂ ಕಪೋಲಕಲ್ಪಿತ ಸುದ್ದಿ, ನಾನು ಸಿಎಂ ಆಗುವ ಕನಸು ಕಂಡಿಲ್ಲ. ನಮ್ಮ ಹೈಕಮಾಂಡ್,ಬಿಎಸ್ ಯಡಿಯೂರಪ್ಪ ಅವರನ್ನು ಸಿಎಂ ಅಭ್ಯರ್ಥಿಯಾಗಿ ಘೋಷಿಸಿಯಾಗಿದೆ. ಅವರೊಬ್ಬ ಮಾಸ್ ಲೀಡರ್, ಜನನಾಯಕ, ಹೋರಾಟದಿಂದ ಅಧಿಕಾರಕ್ಕೆ ಬಂದವರು. ಬಿಜೆಪಿ ಅಧಿಕಾರಕ್ಕೆ ಬರಲಿದೆ, ಯಡಿಯೂರಪ್ಪ ಮತ್ತೆ ಸಿಎಂ ಆಗಲಿದ್ದಾರೆ.

ಅಲ್ಪಸಂಖ್ಯಾತರ ಮೇಲಿನ ದಾಳಿ ಬಗ್ಗೆ?

ಅಲ್ಪಸಂಖ್ಯಾತರ ಮೇಲಿನ ದಾಳಿ ಬಗ್ಗೆ?

ಇದೆಲ್ಲವೂ ಸರ್ಕಾರಿ ಪ್ರಾಯೋಜಕತ್ವದ ಭಯೋತ್ಪಾದನೆ, ಪಿಎಫ್ಐ ಸೇರಿದಂತೆ ಅನೇಕ ಸಂಘಟನೆಗಳು, ಕ್ರಿಮಿನಲ್ ಗಳಿಗೆ ಸರ್ಕಾರದ ಕುಮ್ಮಕ್ಕು ಸಿಕ್ಕಿದೆ. ಕೇರಳದಿಂದ ಕರ್ನಾಟಕಕ್ಕೆ ಈ ಕ್ರಿಮಿನಲ್ ಗಳು ಇಲ್ಲಿ ಅಮಾಯಕ ಹಿಂದೂಗಳನ್ನು ಕೊಲ್ಲುತ್ತಿದ್ದಾರೆ.

ಸಮಾಜಮುಖಿ ಸರ್ಕಾರದ ಬಗ್ಗೆ

ಸಮಾಜಮುಖಿ ಸರ್ಕಾರದ ಬಗ್ಗೆ

ನಾವೆಂದು ಒಡೆದು ಆಳುವ ನೀತಿಯನ್ನು ಪಾಲಿಸುವುದಿಲ್ಲ. ನಾವು ಸಮಾಜದಲ್ಲಿ ಅಲ್ಪ ಸಂಖ್ಯಾತರು, ಬಹು ಸಂಖ್ಯಾತರು ಎಂದು ವರ್ಗೀಕರಣ ಮಾಡಿಕೊಂಡು ನೋಡುವುದಿಲ್ಲ. ಆದರೆ, ಕಾಂಗ್ರೆಸ್ ನವರು ಮಾತ್ರ ಸಮಾಜವನ್ನು ಒಡೆದು ಆಳುತ್ತಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Union Minister Anant Kumar Hegde's name elicits the highest cheers from crowds at rallies for Karnataka Assembly Election 2018. His brand of Hindutva politics, unabashed views on minorities, style of attacks on opposition have managed to sway young supporters of the Bharatiya Janata Party (BJP).

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more